ಕೂರ್ನಡ್ಕ – ಕಮ್ಮಾಡಿ ಸಂಪರ್ಕಿಸುವ ಮುಳುಗು ಸೇತುವೆಯ ಮೋರಿಗಳು ಅತೀ ಮಳೆಯಿಂದಾಗಿ ಬಂದ್ ಆಗಿದ್ದು , ಕೆಲ ದಿನಗಳಿಂದ ನೀರು ಸೇತುವೆಯ ಮೇಲ್ಬಾಗದಿಂದ ಹರಿಯುತ್ತಿತ್ತು. ಇದರಿಂದ ಸಾರ್ವಜನಿಕರ ಮತ್ತು ವಾಹನ ಸಂಚಾರಕ್ಕೆ ಅಡ್ಡಿಯಾಗಿತ್ತು. ಸಮಸ್ಯೆಯನ್ನು ಅರಿತು ಯುವಮೋರ್ಛ ಕಲ್ಲಪಳ್ಳಿಯು ಊರವರ ಸಹಕಾರದೊಂದಿಗೆ ಮೋರಿಗೆ ಅಡ್ಡಲಾಗಿದ್ದ ಕಸಗಳನ್ನು ತೆರವುಗೊಳಿಸಲಾಯಿತು, ಅಲ್ಲದೆ ಸೇತುವೆಯಲ್ಲಿದ್ದ ಬಿರುಕು ಮತ್ತು, ಗುಂಡಿಗಳನ್ನು ಮುಚ್ಚಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಯಿತು.