ಪಂಜ : ಪ್ರೊ. ಬಾಲಚಂದ್ರ ನಿಧನ

Advt_Headding_Middle
Advt_Headding_Middle

ಉಡುಪಿ ಎಂಜಿಎಂ ಕಾಲೇಜಿನಲ್ಲಿ ಎರಡು ದಶಕಗಳಿಗೂ ಮೀರಿ ಇತಿಹಾಸ ವಿಭಾಗದಲ್ಲಿ ಅಧ್ಯಾಪಕರು, ವಿಭಾಗ ಮುಖ್ಯಸ್ಥರು ಆಗಿ ನಿವೃತ್ತರಾಗಿದ್ದರು ಪ್ರೊ.ಬಿ. ಬಾಲಚಂದ್ರ (83ವ) ಅವರು ಆ.8. ರಂದು ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಕಾಂಚನದಲ್ಲಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ಕಾಲೇಜು ಅಧ್ಯಾಪಕತನಕ್ಕೆ ಬೇಕಾದ ಅರ್ಹತೆಯನ್ನು ಗಳಿಸಿಕೊಂಡರು.
ಅಧ್ಯಾಪಕರಾಗಿ ಜನಪ್ರಿಯರಾಗಿದ್ದ ಬಾಲಚಂದ್ರ ಅವರು NSS ಅಧಿಕಾರಿಯಾಗಿ ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಯಕ್ಷಗಾನ ನಾಟಕ ಇತ್ಯಾದಿ ಕಾರ್ಯಕ್ರಮಗಳು ನಿರ್ವಹಣೆಯಲ್ಲಿ ಸಕ್ರಿಯರಾಗಿದ್ದರು.
ಅವರು ಮೂಲತಃ ಪಂಜ ಭೀಮಗುಳಿ ಯವರು. ಅನೇಕ ವರ್ಷಗಳಿಂದ ಹಿರಿಯ ಪುತ್ರನೊಂದಿಗೆ ಪಂಜದಲ್ಲಿ ವಾಸವಾಗಿದ್ದರು. ಕೆಲವು ಸಮಯಗಳಿಂದ ಮಂಗಳೂರಿನಲ್ಲಿ ಕಿರಿಯ ಪುತ್ರ ನೊಂದಿಗೆ ಇದ್ದರು. ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ವಿಶೇಷ ಸೇವೆ ಸಲ್ಲಿಸಿದ್ದಾರೆ.ಪ್ರಸಿದ್ಧ ಯಕ್ಷಗಾನ ವೇಷಧಾರಿ ಪುತ್ತೂರು (ಮಾಣಂಗಾಯಿ) ಕೃಷ್ಣ ಭಟ್ ಅವರ ಹಿರಿಯ ಪುತ್ರ.ಮೃತರು ಪತ್ನಿ ಪ್ರೇಮಾ, ಪಂಜದಲ್ಲಿ ವೈದ್ಯರಾಗಿರುವ ಡಾ. ಕೃಷ್ಣಮೂರ್ತಿ, ವಿದೇಶದಲ್ಲಿ ಇಂಜಿನಿಯರ್ ಆಗಿರುವ ಕೇಶವ ಕುಮಾರ್, ಬೆಂಗಳೂರಿನಲ್ಲಿ ಫಾರ್ಮಸಿ ಕಾಲೇಜಿನ ಅಧ್ಯಾಪನ ನಡೆಸುತ್ತಿದ್ದ ಸರೋಜಾ , ಸೊಸೆಯಂದಿರು ಮೊಮ್ಮಕ್ಕಳನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.