Breaking News

ದುಗಲಡ್ಕ:  ಸ್ವಾತಂತ್ರ್ಯ ದಿನಾಚರಣೆ ಮತ್ತು ಕೊರೋನ ವಾರಿಯರ್ಸ್‌ಗಳಿಗೆ ಸನ್ಮಾನ

Advt_Headding_Middle
Advt_Headding_Middle


ಮಿತ್ರ ಯುವಕ ಮಂಡಲ ಕೊಯಿಕುಳಿ ಮತ್ತು ಕುರಲ್ ತುಳುಕೂಟ ದುಗಲಡ್ಕ ಇವರ ಆಶ್ರಯದಲ್ಲಿ 74ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆಯನ್ನು ಯುವಕ ಮಂಡಲದ ಕಟ್ಟಡದಲ್ಲಿ ಆಚರಿಸಲಾಯಿತು.
ಧ್ವಜಾರೋಹಣವನ್ನು ದುಗಲಡ್ಕ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಶ್ರೀಮತಿ ನಳಿನಿ ನೆರವೇರಿಸಿದರು.

ಬಳಿಕ ನಡೆದ ಸರಳ ಸಭಾಕಾರ್ಯಕ್ರಮದಲ್ಲಿ ಕೊರೋನ ವಾರಿಯರ್ಸ್‌ಗಳಾಗಿ ಸೇವೆ ಸಲ್ಲಿಸುತ್ತಿರುವ ಕಿರಿಯ ಆರೋಗ್ಯ ಸಹಾಯಕಿ ಶ್ರೀಮತಿ ಶಶಿಕಲಾ ಕೆ.ಬಿ., ದುಗಲಡ್ಕ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ನಳಿನಿ ಯವರನ್ನು ಸನ್ಮಾನಿಸಲಾಯಿತು. ಕುರಲ್ ತುಳುಕೂಟದ ಸಂಚಾಲಕ ಕೆ.ಟಿ.ವಿಶ್ವನಾಥ ಅಭಿನಂದನಾ ಮಾತುಗಳನ್ನಾಡಿದರು. ನ.ಪಂ.ಮಾಜಿ ಅಧ್ಯಕ್ಷೆ ಶ್ರೀಮತಿ ಶೀಲಾವತಿ ಮಾಧವ ಶುಭ ಹಾರೈಸಿದರು. ವೇದಿಕೆಯಲ್ಲಿ ಯುವಕ ಮಂಡಲದ ಅಧ್ಯಕ್ಷ ದಿನೇಶ್ ಕೊಯಿಕುಳಿ, ಕುರಲ್ ತುಳುಕೂಟದ ಅಧ್ಯಕ್ಷ ನಾರಾಯಣ ಟೈಲರ್ ಉಪಸ್ಥಿತರಿದ್ದರು. ಯುವಕ ಮಂಡಲದ ಮಾಜಿ ಅಧ್ಯಕ್ಷರುಗಳಾದ ಮನೋಜ್ ಪಾನತ್ತಿಲ ಸ್ವಾಗತಿಸಿ, ಜಯರಾಮ ಶೆಟ್ಟಿ ಕೆ.ಎನ್.ವಂದಿಸಿದರು.ರಮೇಶ್‌ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು. ಜಂಟಿ ಸಂಘ ಗಳ ಪದಾಧಿಕಾರಿಗಳಾದ ಕೆ‌.ಟಿ.ಬಾಗೀಶ್, ಲಿಂಗಪ್ಪ ಮೂಡೆಕಲ್ಲು, ವಾರಿಜ ಕೊರಗಪ್ಪ, ಚಿದಾನಂದ ಕೊಯಿಕುಳಿ, ಅಕ್ಷಯ್ ಮೂಡೆಕಲ್ಲು, ಪ್ರಿಯಾಸದಾನಂದ, ಕೃಷ್ಣ ಸ್ವಾಮಿ ಕಂದಡ್ಕ, ಲಿಂಗ ಪ್ಪ ಮೂಡೆಕಲ್ಲು,ಧನಂಜಯ ಕಲ್ಮಡ್ಕ, ಚೇತನ್ ಕಲ್ಮಡ್ಕ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.