ಕಲ್ಮಡ್ಕದ ಯುವ ಸ್ಪೂರ್ತಿ ಸೇವಾ ಸಂಘದ ವತಿಯಿಂದ ಶ್ರೀಕೃಷ್ಣ ಜನ್ಮಾಷ್ಣಮಿ ಹಾಗೂ ವಾರ್ಷಿಕೋತ್ಸವವನ್ನು ಕೊರೋನಾ ವೈರಾಣು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ಗಳನ್ನು ನಡೆಸಲು ಸರಕಾರದ ನಿರ್ಬಂಧ ಇರುವ ಕಾರಣದಿಂದ ಸರಳ ರೀತಿಯಲ್ಲಿ ಆಚರಿಸುವ ಸಲುವಾಗಿ ‘ನಮ್ಮೂರ ಶಾಲೆಯಲ್ಲಿ ಒಂದು ದಿನ’ ಕಾರ್ಯಕ್ರಮ ಸಂಘಟಿಸಲಾಗಿದೆ. ಆ.16ರಂದು ಪೂರ್ವಾಹ್ನ 8.30ಕ್ಕೆ ನಡೆಯುವ ಈ ಕಾರ್ಯಕ್ರಮ ದಲ್ಲಿ ಶಾಲೆಯ ಆವರಣವನ್ನು ಸ್ವಚ್ಛಗೊಳಿಸಲು ಊರವರು ಹಾಗೂ ಸಂಘದ ಸದಸ್ಯರು ಪಾಲ್ಗೊಳ್ಳುವಂತೆ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.