ರೋಟರಿ ವಿದ್ಯಾಸಂಸ್ಥೆಯಲ್ಲಿ 74  ನೇ ಸ್ವಾತಂತ್ರ್ಯೋತ್ಸವ

Advt_Headding_Middle
Advt_Headding_Middle

74ನೆಯ ಸ್ವಾತಂತ್ರ್ಯೋತ್ಸವವನ್ನು ರೋಟರಿ ವಿದ್ಯಾಸಂಸ್ಥೆಯಲ್ಲಿ ಆಚರಿಸಲಾಯಿತು. ರೋಟರಿ ಅಧ್ಯಕ್ಷ ರೊ. ಡಾ. ಗುರುರಾಜ ವೈಲಾಯರವರು ಧ್ವಜಾರೋಹಣ ನೆರವೇರಿಸಿ, ದಿನದ ಮಹತ್ವದ ಬಗ್ಗೆ ಮಾತನಾಡಿ ಶುಭ ಹಾರೈಸಿದರು. ಶಾಲಾ ಸಂಚಾಲಕ ರೊ. ಜಿತೇಂದ್ರ ಎನ್ ಎ ರವರು ಸ್ವಾತಂತ್ರ್ಯೋತ್ಸವ ಸಂದೇಶ ನೀಡಿದರು. ಇತ್ತೀಚೆಗೆ ನಡೆದ sslc ಮತ್ತು puc ಪರೀಕ್ಷೆಗಳಲ್ಲಿ ಶಾಲೆಯಲ್ಲಿ ಹೆಚ್ಚು ಅಂಕ ಗಳಿಸಿದ ssslc ವಿಭಾಗದ ಹರ್ಷಿತ್ ಬಿ ಮತ್ತು ದಿಶಾ ವಿ ರೈ ಹಾಗೂ ಪಿ ಯು ವಿಜ್ಞಾನ ವಿಭಾಗದ ಶಮಾ ಮಡ್ತಿಲ, ವಾಣಿಜ್ಯ ವಿಭಾಗದ ವೈಷ್ಣವಿ ಎ ಮತ್ತು ಕೃತಿ ಕೆ ರೈ ಇವರುಗಳನ್ನು ಗೌರವಿಸಲಾಯಿತು.
ಉಪನ್ಯಾಸಕಿ ಸಪ್ನಾರವರು ಸ್ವಾಗತಿಸಿ , ಸಹಶಿಕ್ಷಕಿ ರಮ್ಯಾರವರು ಧನ್ಯವಾದ ಸಮರ್ಪಿಸಿದ ಕಾರ್ಯಕ್ರಮದಲ್ಲಿ ರೋಟರಿ , ಇನ್ನರವೀಲ್ ಕ್ಲಬ್ ಸದಸ್ಯರು, ಆಡಳಿತ ಮಂಡಳಿ ಸದಸ್ಯರು, ವಿದ್ಯಾ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಸಿಬ್ಬಂದಿವರ್ಗದವರು ಪಾಲ್ಗೊಂಡಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.