ವಿಟ್ಲ ಠಾಣಾ ಹೆಡ್ ಕಾನ್ ಸ್ಟೇಬಲ್ ಬೆಳ್ಳಾರೆಯ ಜಯರಾಮ ಕೆ.ಟಿ.ಯವರಿಗೆ ಉಸ್ತುವಾರಿ ಸಚಿವರಿಂದ ಸನ್ಮಾನ

Advt_Headding_Middle
Advt_Headding_Middle


ಕೊರೊನಾ ಸಂದರ್ಭದಲ್ಲಿ ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸಿದ ಬೆಳ್ಳಾರೆಯ ಕಾವಿನಮೂಲೆ ನಿವಾಸಿ ವಿಟ್ಲ ಪೊಲೀಸ್ ಠಾಣಾ ಹೆಡ್ ಕಾನ್ ಸ್ಟೇಬಲ್ ಜಯರಾಮ ಕೆ.ಟಿ.ಯವರನ್ನು ಮಂಗಳೂರಿನಲ್ಲಿ ನಡೆದ ಜಿಲ್ಲಾ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸನ್ಮಾನ ಪತ್ರ ಸ್ಮರಣಿಕೆಯನ್ನು ನೀಡಿದರು. ಕೋವಿದ್ -19 ತುರ್ತು ಸಂದರ್ಭದಲ್ಲಿ ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸಿದ ನೆಲೆಯಲ್ಲಿ ಈ ಸನ್ಮಾನವನ್ನು ಮಾಡಲಾಯಿತು.
ಜಯರಾಮ ಕೆ.ಟಿ.ಯವರು ಬೆಳ್ಳಾರೆ ಕಾವಿನಮೂಲೆಯವರಾಗಿದ್ದು, ನಿವೃತ್ತ ಫಾರೆಸ್ಟರ್ ತಿಮ್ಮಪ್ಪ ಗೌಡ ಕಾಯಾರ ಮತ್ತು ನಿವೃತ್ತ ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ಲೀಲಾವತಿ ದಂಪತಿಯ ಪುತ್ರ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.