Breaking News

ಕ್ಲಾಸಿಕ್ ಸ್ಪೋರ್ಟ್ಸ್ ಕ್ಲಬ್ ಮುಚ್ಚಿಲ : 74ನೇ ಸ್ವಾತಂತ್ರೋತ್ಸವ ಆಚರಣೆ

Advt_Headding_Middle
Advt_Headding_Middle

ಕ್ಲಾಸಿಕ್ ಸ್ಪೋರ್ಟ್ಸ್ ಕ್ಲಬ್ ಮುಚ್ಚಿಲ ಇದರ ವತಿಯಿಂದ 74ನೇ ಸ್ವಾತಂತ್ರೋತ್ಸವವು ವಿಜೃಂಭಣೆಯಿಂದ ಮುಚ್ಚಿಲದಲ್ಲಿ ನಡೆಯಿತು.

ಕಲ್ಮಡ್ಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ ಸಿ.ವಿ ರವರು ದ್ವಜರೋಹಣಗೆಯ್ದು, ಶುಭಾಶಯ ಕೋರಿದರು. ತಾಲೂಕ್ ಪಂಚಾಯತ್ ಸದಸ್ಯ ಅಬ್ದುಲ್ ಗಫೂರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತ ವಿವಿದೋದ್ದೇಶ ಸಹಕಾರಿ ಸಂಘ ಸುಳ್ಯ ಇದರ ಅಧ್ಯಕ್ಷ ಇಸ್ಮಾಯಿಲ್ ಪಡ್ಪಿನಂಗಡಿ, ಕಲ್ಮಡ್ಕ ಗ್ರಾಂ ಪಂ. ಮಾಜಿ ಅಧ್ಯಕ್ಷ ಧರ್ಮಣ್ಣ ನಾಯ್ಕ್ ಗರಡಿ, ಪಂಜ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಜಗದೀಶ್ ಪುರಿಯ, ಪಂಜ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ರಫೀಕ್ ಸಿ ಎಂ, ಎಂ.ವೈ.ಎಸ್ ಅಧ್ಯಕ್ಷ ಹಮೀದ್ ಮರಕ್ಕಡ, ಪಡ್ಪಿನಂಗಡಿ ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಮೇದಪ್ಪ ಅಲೆಂಗಾರ, ಕ್ಲಾಸಿಕ್ ಸ್ಪೋರ್ಟ್ಸ್ ಕ್ಲಬ್ ಕಾರ್ಯದರ್ಶಿ ನಝೀರ್ ಮುಚ್ಚಿಲ, ಕೋಶಾಧಿಕಾರಿ ನವೀನ್ ಮುಚ್ಚಿಲ, ಪದಾಧಿಕಾರಿಗಳು ಹಾಗೂ ಸದಸ್ಯರು, ಊರಿನ ಗಣ್ಯರು ಉಪಸ್ಥಿತರಿದ್ದರು.
ಕ್ಲಾಸಿಕ್ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಅಶ್ರಫ್ ಮರಕ್ಕಡ ಸ್ವಾಗತಿಸಿ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.