Breaking News

ಆ.22 : ಸುಳ್ಯದಲ್ಲಿ 52 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ

Advt_Headding_Middle
Advt_Headding_Middle

ಶ್ರೀ ಸಿದ್ಧಿವಿನಾಯಕ ಸೇವಾ ಸಮಿತಿ ಸುಳ್ಯ ಹಾಗೂ ಸಾರ್ವಜನಿಕ ಶ್ರೀ ದೇವತಾರಾಧನಾ ಸಮಿತಿ ಸುಳ್ಯ ಇದರ ಆಶ್ರಯದಲ್ಲಿ 52 ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಆ.22 ರಂದು ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನದ ಸಭಾಂಗಣದಲ್ಲಿ ನಡೆಯಲಿದೆ.
ಪೂರ್ವಾಹ್ನ ಗಂಟೆ 7.00 ಕ್ಕೆ ವಿಗ್ರಹ ಪ್ರತಿಷ್ಠಾಪನೆ ನಡೆಯಲಿದೆ.
ಈ ಸಂದರ್ಭದಲ್ಲಿ ಶಾಸಕ ಎಸ್.ಅಂಗಾರರವರು ಶ್ರೀ ಚೆನ್ನಕೇಶವ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ,ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ ಹಾಗೂ ಭಕ್ತಾದಿಗಳು ಉಪಸ್ಥಿತರಿದ್ದು ಉದ್ಘಾಟನೆ ನಡೆಯಲಿದೆ.
ನಂತರ 5 ತೆಂಗಿನಕಾಯಿ ಹೋಮ,ಮಧ್ಯಾಹ್ನ 12.30 ಕ್ಕೆ ಮಹಾಪೂಜೆ,ಸಂಜೆ ಗಂಟೆ 5.00 ಕ್ಕೆ ವಿಸರ್ಜನೆ ನಡೆಯಲಿದೆ.
ಕೊರೋನಾ ಕಾರಣದಿಂದ ಸಭೆ ಸಮಾರಂಭಗಳಿಗೆ ಸರಕಾರದ ನಿಬಂಧನೆಗಳಿರುವುದರಿಂದ ಈ ವರ್ಷದ ಉತ್ಸವವನ್ನು ಕೇವಲ ಒಂದು ದಿನಕ್ಕೆ ಸೀಮಿತಗೊಳಿಸಿ ಸರಳವಾಗಿ ಆಚರಿಸಲಾಗುವುದು.
ಸಹೃದಯಿ ಹಿಂದೂ ಬಾಂಧವರು ಮಾಸ್ಕ್ ಧರಿಸಿ ಅಂತರವನ್ನು ಕಾಪಾಡಿ ಶ್ರೀ ದೇವರ ದರ್ಶನ ಪಡೆದು ಸಹಕರಿಸಬೇಕು.ಯಾವುದೇ ಸೇವೆಗಳಿಗೆ ಅವಕಾಶವಿರುವುದಿಲ್ಲ ಭಕ್ತಾದಿಗಳ ಉದಾರ ದೇಣಿಗೆಯನ್ನು ಕೃತಜ್ಞತಾಪೂರ್ವಕವಾಗಿ ಸ್ವೀಕರಿಸಲಾಗುವುದು ಎಂದು ಸಿದ್ಧಿವಿನಾಯಕ ಸೇವಾ ಸಮಿತಿ ಅಧ್ಯಕ್ಷ ಪಿ.ಕೆ.ಉಮೇಶ್ ರವರು ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.