Breaking News

ರೋಟರಿ ವತಿಯಿಂದ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ರಕ್ತದಾನ ಶಿಬಿರ

Advt_Headding_Middle
Advt_Headding_Middle

ರೋಟರಿ ಸುಳ್ಯ, ರೋಟರಿ ಸುಳ್ಯ ಸಿಟಿ, ಇನ್ನರ್ ವ್ಹೀಲ್ ಕ್ಲಬ್ ಸುಳ್ಯ, ರೋಟರಾಕ್ಟ್ ಕ್ಲಬ್, ಐ. ಎಂ.ಎ ಸುಳ್ಯ, ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಸುಳ್ಯ ಇದರ ಜಂಟಿ ಆಶ್ರಯದಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇವರ ಸಹಯೋಗದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವು ಆ. 15ರಂದು ಸುಳ್ಯದ ರೋಟರಿ ಸಮುದಾಯಭವನದಲ್ಲಿ ನಡೆಯಿತು.

ಇದಕ್ಕೂ ಮೊದಲು ನಡೆದ ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ರೋಟರಿ ಸುಳ್ಯ ಅಧ್ಯಕ್ಷ ರೊl ಗುರುರಾಜ ವೈಲಾಯ ವಹಿಸಿದ್ದರು, ದೀಪ ಬೆಳಗುವ ಮೂಲಕ ಕಾರ್ಯಕ್ರಮದ ಉದ್ಘಾಟನೆಯನ್ನು ರೊl ಮೇಜರ್ ಡೋನರ್ ಡಾ. ಕೇಶವ ಪಿ. ಕೆ ನಡೆಸಿದರು, ರೋಟರಿ ಕ್ಯಾಂಪ್ಕೋ ಬ್ಲಡ್ ಬ್ಯಾಂಕ್ ಪುತ್ತೂರು ಇದರ ಮೆಡಿಕಲ್ ಆಫೀಸರ್ ಡಾ. ರಾಮಚಂದ್ರ ಭಟ್ ರವರು ರಕ್ತದಾನದ ಮಹತ್ವದ ಬಗ್ಗೆ ಮಾಹಿತಿ ನೀಡಿದರು.


ಇನ್ನರ್ ವ್ಹೀಲ್ ಕ್ಲಬ್ ವತಿಯಿಂದ ಮಕ್ಕಳಿಗಾಗಿ ನಡೆದ ಆನ್ ಲೈನ್ ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆಯನ್ನು ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಜಯಮಣಿ ಮಾಧವರವರು ನಡೆಸಿದರು.

ಝೋನಲ್ ಲೆಫ್ಟಿನೆಂಟ್ ರೊl ಜಿತೆಂದ್ರ ಎನ್. ಎ, ರೋಟರಿ ಸುಳ್ಯ ಸಿಟಿ ಅಧ್ಯಕ್ಷ ರೊl ಗುರು ವಿಕ್ರಮ್ ಪ್ರಸಾದ್, ಐ ಯಮ್ ಎ ಸುಳ್ಯ ಅಧ್ಯಕ್ಷ ರೊl ಡಾ. ಶ್ರೀ ಕೃಷ್ಣ ಭಟ್ ಬಿ. ಎನ್, ರೊl ಡಾ. ಪುರುಷೋತ್ತಮ್ , ರೊlಪ್ರಭಾಕರ್ ನಾಯರ್, ರೋಟರಿ ಸುಳ್ಯ ಸಿಟಿ ಕಾರ್ಯದರ್ಶಿ ರೊl ಗಿರೀಶ್ ನಾರ್ಕೋಡು, ಇನ್ನರ್ ವ್ಹೀಲ್ ಕ್ಲಬ್ ಕಾರ್ಯದರ್ಶಿ ಪೂಜಾ ಸಂತೋಷ್ ವೇದಿಕೆಯಲ್ಲಿದರು.

ರೋಟರಿ ಸುಳ್ಯ ಕಾರ್ಯದರ್ಶಿ ರೊl ಲತಾಮಧುಸೂಧನ್ ವಂದನಾರ್ಪಣೆ ಸಲ್ಲಿಸಿದರು. ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಕಾರ್ಯದರ್ಶಿ ಯಶ್ವಿತ್ ಕಾಳಂಮನೆ ಸಹಕರಿಸಿದರು. ಸುಮಾರು 50ಕ್ಕಿಂತ ಹೆಚ್ಚು ರಕ್ತದಾನಿಗಳು ರಕ್ತದಾನ ಮಾಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.