ಸುಳ್ಯ ಇನ್ನರ್ವೀಲ್ ಕ್ಲಬ್ ವತಿಯಿಂದ ಆಯೋಜಿಸಿದ ಸ್ಪರ್ಧಾ ವಿಜೇತರ ಫಲಿತಾಂಶ

Advt_Headding_Middle
Advt_Headding_Middle


74 ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಸುಳ್ಯ ಇನ್ನರ್ವೀಲ್ ಕ್ಲಬ್ ವತಿಯಿಂದ ವಿವಿಧ ತರಗತಿಗಳ ವಿದ್ಯಾರ್ಥಿಗಳಿಗೆ ಭಾಷಣ ಹಾಗೂ ದೇಶಭಕ್ತಿಗೀತೆ ಸ್ಪರ್ಧೆಗಳನ್ನು ಆನ್ಲೈನ್ ಮೂಲಕ ನಡೆಸಲ್ಪಟ್ಟಿತು. ಇದರ ಬಹುಮಾನ ವಿತರಣಾ ಸಮಾರಂಭವು ಸುಳ್ಯ ರೋಟರಿ ಕ್ಲಬ್, ಸುಳ್ಯ ಸಿಟಿ ರೋಟರಿ ಕ್ಲಬ್ ಹಾಗೂ ಇನ್ನರ್ವೀಲ್ ಕ್ಲಬ್ ಇದರ ಜಂಟಿ ಆಶ್ರಯದಲ್ಲಿ ನಡೆದ ರಕ್ತದಾನ ಶಿಬಿರದ ಸಮಾರಂಭದಲ್ಲಿ ನಡೆಯಿತು. ಬಹುಮಾನ ವಿತರಣೆಯನ್ನು ಇನ್ನರ್ವೀಲ್ ಅಧ್ಯಕ್ಷೆ ಶ್ರೀಮತಿ ಜಯಮಣಿ ಮಾಧವ್, ರೋಟರಿ ಕ್ಲಬ್ ಅಧ್ಯಕ್ಷ ಡಾ. ಗುರುರಾಜ್ ಹಾಗೂ ಸಿಟಿ ರೋಟರಿ ಕ್ಲಬ್ ಅಧ್ಯಕ್ಷರಾದ ಗುರುವಿಕ್ರಮ್ ನೆರವೇರಿಸಿದರು. ಇನ್ನರ್ವೀಲ್ ನಿಕಟಪೂರ್ವ ಅಧ್ಯಕ್ಷೆ ಡಾ. ಹರ್ಷಿತಾ ಪುರುಷೋತ್ತಮ ಅವರು ವಿಜೇತರ ಪಟ್ಟಿ ವಾಚಿಸಿದರು. ಇನ್ನರ್ವೀಲ್ ಕ್ಲಬ್ಬಿನ ಕಾರ್ಯದರ್ಶಿ ಪೂಜಾ ಸಂತೋಷ್ ವೇದಿಕೆಯಲ್ಲಿ ಉಪಸ್ಥಿತರಿದ್ದರು ಹಾಗೂ ಖಜಾಂಜಿ ಶ್ರೀಮತಿ ಮಮತಾ ಸತೀಶ್ ಹಾಗೂ ಕ್ಲಬ್‌ನ ಸದಸ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕ್ಲಬ್‌ನ ಸದಸ್ಯೆ ಶ್ರೀಮತಿ ಶ್ರೀದೇವಿ ನಾಗರಾಜ್ ಭಟ್ ಪ್ರಾರ್ಥನೆಯನ್ನು ನೆರವೇರಿಸಿಕೊಟ್ಟರು.

1 ರಿಂದ 4ನೇ ತರಗತಿಯವರೆಗಿನ ಮಕ್ಕಳಿಗಾಗಿ ನಡೆಸಿದ ದೇಶಭಕ್ತಿ ಗೀತೆ ಸ್ಪರ್ಧೆಯಲ್ಲಿ
ಪ್ರಥಮ ಬಹುಮಾನವನ್ನು ಸುಳ್ಯ ಸೈಂಟ್ ಜೋಸೆಫ್ ಸ್ಕೂಲ್‌ನ ವಿದ್ಯಾರ್ಥಿ ಅಶ್ವಿಜ್ ಜಿ.ಆರ್,
ದ್ವಿತೀಯ ಬಹುಮಾನವನ್ನು ಎಲಿಮಲೆ ಜ್ಞಾನ ದೀಪ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ವಿದ್ಯಾರ್ಥಿನಿ ಆದ್ಯತಾ ಎಂ ಮತ್ತು ಸುಳ್ಯ ಸೈಂಟ್ ಜೋಸೆಫ್ ಸ್ಕೂಲ್‌ನ ವಿದ್ಯಾರ್ಥಿ ತನ್ಮಯ್ ಎಂ ಸೋಮಯಾಗಿ, ತೃತೀಯ ಬಹುಮಾನವನ್ನು ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿನಿ ಮಾನ್ಯ ಪುರುಷೋತ್ತಮ್ ಪಡೆದುಕೊಂಡರು.

5 ರಿಂದ 7ನೇ ತರಗತಿಯವರೆಗಿನ ಮಕ್ಕಳಿಗಾಗಿ ನಡೆಸಿದ ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನವನ್ನು ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿನಿ ಸೋನಾ ನಾರ್ಕೊಡು, ದ್ವಿತೀಯ ಬಹುಮಾನವನ್ನು ಸೈಂಟ್ ಜೋಸೆಫ್ ಸ್ಕೂಲ್‌ನ ವಿದ್ಯಾರ್ಥಿನಿ ಬಿಂದು ಕೆಜೆ, ತೃತೀಯ ಬಹುಮಾನವನ್ನು ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿನಿ ಮನ್ವಿತಾ ಸಿ.ಎಚ್ ಪಡೆದುಕೊಂಡರು.

8 ರಿಂದ 10 ನೇ ತರಗತಿವರೆಗಿನ ಮಕ್ಕಳಿಗಾಗಿ ನಡೆಸಿದ ಭಾಷಣ ಸ್ಪರ್ಧೆಯಲ್ಲಿ
ಪ್ರಥಮ ಬಹುಮಾನವನ್ನು ಸೈಂಟ್ ಜೋಸೆಫ್ ಸ್ಕೂಲ್‌ನ ವಿದ್ಯಾರ್ಥಿ ಶ್ರೀಪಾದ ಭಾರದ್ವಾಜ್, ದ್ವಿತೀಯ ಬಹುಮಾನವನ್ನು ಬೆಳ್ಳಾರೆ ಕರ್ನಾಟಕ ಪಬ್ಲಿಕ್ ಸ್ಕೂಲ್‌ನ ವಿದ್ಯಾರ್ಥಿನಿ ಅವನಿ ಕೆ, ತೃತೀಯ ಬಹುಮಾನವನ್ನು ರೋಟರಿ ಇಂಗ್ಲೀಷ್ ಮೀಡಿಯಂ ಸ್ಕೂಲ್‌ನ ವಿದ್ಯಾರ್ಥಿನಿ ನಿಹಾ ಶೆಟ್ಟಿ ಪಡೆದುಕೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.