ಗ್ರಾಹಕರಿಗೆ ಹೊರೆಯಾದ ಬ್ಯಾಂಕ್ ಸಾಲಗಳು

Advt_Headding_Middle
Advt_Headding_Middle

ಬ್ಯಾಂಕುಗಳಲ್ಲಿ ಗ್ರಾಹಕರಿಗೆ ಸಾಲದ ಕಂತುಗಳ ಮೇಲೆ ಒಟ್ಟು ಆರು ತಿಂಗಳ ರಿಯಾಯಿತಿ ನೀಡಿದ್ದು ಸುದ್ದಿಯ ಮೇಲೆ ಸುದ್ದಿಯಾಯಿತು. ಕಂತುಗಳ ವಿನಾಯಿತಿ ಬಿಟ್ಟರೆ ತಿಂಗಳ ಬಡ್ಡಿ ವಿಧಿಸುತ್ತಲೇ ಬಂದಿದ್ದಾರೆ. ಜತೆಗೆ ಕಂತುಗಳ ಸೌಲಭ್ಯ ಎಲ್ಲಾ ಗ್ರಾಹಕರನ್ನು ತಲುಪಿದ ಬಗ್ಗೆ ಬಹಳ ಸಂದೇಹವಿದೆ. ಮತ್ತು ಇಂಥಹ ಕಂತುಗಳ ವಿನಾಯಿತಿಯಿಂದ ಯಾರಿಗೂ ಅನುಕೂಲವಿಲ್ಲ. ಇದರಿಂದ ಗ್ರಾಹಕರಿಗೆ ಆರ್ಥಿಕ ನಷ್ಟ ಉಂಟಾಗುವುದು.

ಕೇಂದ್ರ ಸರಕಾರ ಆರು ತಿಂಗಳ ಕಂತುಗಳ ಮುಂದೂಡಿಕೆಯಿಂದ ಗ್ರಾಹಕರನ್ನು ಬಚಾವ್ ಮಾಡಿದೆ ಎಂದು ಬಾವಿಸಿದೆ. ಇಲ್ಲಿ ಕಂತುಗಳ ಮುಂದೂಡಿಕೆಯಿಂದ ಕಂಪನಿ ಅಥವಾ ಕೈಗಾರಿಕೆಗಳಿಗೆ ತಾತ್ಕಾಲಿಕ ನೆರವು ಆಗ ಬಹುದಷ್ಟೆ. ಬ್ಯಾಂಕುಗಳು ಯಾವುದೇ ಬಗೆಯ ಆರ್ಥಿಕ ನಷ್ಟವನ್ನು ತುಂಬಿಕೊಳ್ಳುವುದಕ್ಕೆ ತಯಾರಿಲ್ಲ. ಬ್ಯಾಂಕುಗಳು ಬಡ್ಡಿ ಮೇಲೆ ಬಡ್ಡಿ ಲೆಕ್ಕ (ಚಕ್ರ ಬಡ್ಡಿ ) ವಿಧಿಸಿದೆ. ಸುಮಾರು ಆರು ತಿಂಗಳ ಅವಧಿಗೆ ಪೂರ್ಣ ಪ್ರಮಾಣದ ಬಡ್ಡಿ ಮತ್ತು ಬಡ್ಡಿಯ ಮೇಲೆ ಬಡ್ಡಿ ಹಾಕಿ ಸಾಲದ ಮೊತ್ತವನ್ನು ಹಿಗ್ಗಿಸಿ ಬಿಟ್ಟಿದ್ದಾರೆ.

ಗ್ರಾಹಕರ ಆರ್ಥಿಕ ನಷ್ಟಕ್ಕೆ ಸರಕಾರವೇ ಹೊಣೆ ಅಂದರೆ ತಪ್ಪಾಗಲಾರದು. ಗ್ರಾಹಕರಿಗೆ ಬೇಕಾಗಿರೋದು ಈ ರೀತಿಯ ಕಂತುಗಳ ವಿನಾಯಿತಿಯಲ್ಲ, ಬದಲಾಗಿ ನೇರವಾದ ಹಾಗೂ ಸ್ಪಷ್ಟವಾದ ರಿಯಾಯಿತಿ. ಮಾರ್ಚ್ ನಿಂದ ಆಗಸ್ಟ್ ವರೆಗಿನ ಬಡ್ಡಿ ಮನ್ನಾ ಮಾಡುವುದು.
ಎಲ್ಲಾ ಬಗೆಯ ಸಾಲಗಳಿಗೆ ಬಡ್ಡಿಯನ್ನು ಆರು ತಿಂಗಳು ವಿಧಿಸದೆ ಇರುವುದು. ಇದರ ಜತೆಗೆ ಆರು ತಿಂಗಳ ಕಂತುಗಳನ್ನು ಸಹ ಸರಕಾರವೇ ತುಂಬುವುದು. ಇದು ಸಾಧ್ಯವೇ?

ಕೇಂದ್ರ ಸರಕಾರ 20 ಲಕ್ಷ ಕೋಟಿ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಿದೆ. ಮತ್ತು ಆಗಿಂದಾಗ್ಗೆ ಆರ್ಥಿಕ ಪ್ಯಾಕೇಜ್ ಗಳನ್ನು ಕೇಂದ್ರ ಹಾಗೂ ರಾಜ್ಯ ಸರಕಾರ
ಅನೌನ್ಸ್ ಮಾಡುತ್ತಲೇ ಇದ್ದಾರೆ. ಸುಪ್ರೀಂ ಕೋರ್ಟು ಕೂಡ ಗ್ರಾಹಕರ ಆರ್ಥಿಕ ನಷ್ಟದ ಕುರಿತು ಪರಿಶೀಲಿಸುದಕ್ಕೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಆದರೆ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಯಾವುದೇ ತೀರ್ಮಾನವನ್ನು ವ್ಯಕ್ತಪಡಿಸಿಲ್ಲ.

ಬ್ಯಾಂಕುಗಳು ತಮ್ಮ ಆದಾಯವನ್ನು
ಕಳೆದುಕೊಳ್ಳುವುದಕ್ಕೆ ತಯಾರಿಲ್ಲ. ನೇರವಾಗಿ ಬ್ಯಾಂಕುಗಳಿಂದ ಆರ್ಥಿಕ ನೆರವು ಗ್ರಾಹಕರಿಗೆ ನೀಡುವುದಕ್ಕೆ ಆಗುವುದಿಲ್ಲ. ಇದು ಸರಕಾರದ ಕರ್ತವ್ಯ ಎಂಬ ವಿಚಾರವನ್ನು ಸುಪ್ರೀಂ ಕೋರ್ಟ್ ಗೆ ಮನದಟ್ಟು ಮಾಡಲಾಗಿದೆ. ಆದರೆ ಈಗ ಸರಕಾರ ಸುಮ್ಮನೆ ಕೂರುವಂತಿಲ್ಲ.

ಕೋವಿಡ್ 19 ಭಾರತದ ಆರ್ಥಿಕ ಸ್ಥಿತಿಯನ್ನು ಅಲುಗಾಡಿಸಿದೆ. ಎಲ್ಲಾ ಸ್ತರದ ಜನರನ್ನು ಕಂಗಾಲು ಗೊಳಿಸಿದುದರಲ್ಲಿ
ಸಂದೇಹವಿಲ್ಲ. ಬಡತನ ರೇಖೆಯಿಂದ ತೀರಾ ಹಿಂದುಳಿದವರು ತುಂಬಾ ತೊಂದರೆಯನ್ನು ಅನುಭವಿಸಿದರು. ಇನ್ನು ಮಧ್ಯಮ ವರ್ಗದ ಜನ ಸಮಸ್ಯೆಯನ್ನು ಹೇಳಿಕೊಳ್ಳಲಾರದೆ ಒದ್ದಾಡಿದರು. ಸ್ವಂತ ಮನೆ ಇದೆ, ಕಾರು ಇದೆ, ಆದರೆ ಆದಾಯದ ಮೂಲ ಬಂದ್ ಆಗಿ ಚಡಪಡಿಸುವಂತಾಯಿತು.

ಹೇಗೋ ಒಮ್ಮೆ
ಕೊರೊನ ಎಂಬ ರೋಗ ಈ ಜಗತ್ತಿನಿಂದ ಮರೆಯಾಗಿ, ಈ ದೇಶ ಮೊದಲಿನಂತೆ
ಆರ್ಥಿಕವಾಗಿ ಚೇತರಿಕೆ ಕಂಡರೆ ಸಾಕು.

– ಜನಾರ್ಧನ ಬಿ ಕುರುಂಜಿಬಾಗ್
ನಿವೃತ್ತ ಬ್ಯಾಂಕ್ ವ್ಯವಸ್ಥಾಪಕರು
ಸುಳ್ಯ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.