ಕಲ್ಮಡ್ಕ : ಯುವ ಸ್ಪೂರ್ತಿ ಸೇವಾ ಸಂಘ‌ದ ವತಿಯಿಂದ 5ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಸರಳ ರೀತಿಯಲ್ಲಿ ಆಚರಣೆ

Advt_Headding_Middle
Advt_Headding_Middle

ಕಲ್ಮಡ್ಕ ಯುವ‌ಸ್ಪೂರ್ತಿ ಸೇವಾ ಸಂಘ ಇದರ ವತಿಯಿಂದ 5ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮವು ಕೋವಿಡ್-19 ಕಾರಣದಿಂದಾಗಿ ಗ್ರಾಮ ಪಂಚಾಯತ್ ಕಲ್ಮಡ್ಕ ಇದರ ಸಹಯೋಗದೊಂದಿಗೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲ್ಮಡ್ಕ ಇಲ್ಲಿಯ ಪರಿಸರ ಸ್ವಚ್ಛಗೊಳಿಸುವುದರೊಂದಿಗೆ 150ಕ್ಕೂ ಹೆಚ್ಚು ಹಣ್ಣು ಹಂಪಲುಗಳ ಸಸಿಗಳನ್ನು ನೆಡುವುದರ ಮೂಲಕ ಆಚರಿಸಲಾಯಿತು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವಸ್ಪೂರ್ತಿ ಸೇವಾ ಸಂಘ ಕಲ್ಮಡ್ಕ ಇದರ ಅಧ್ಯಕ್ಷ ಅಶೋಕ್ ಗೋಳ್ತಾಜೆ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀಮತಿ ಶಶಿಕಲಾ ಕೆ ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯತ್ ಸದಸ್ಯ ಅಬ್ದುಲ್ ಗಫೂರ್ ಕಲ್ಮಡ್ಕ , ಕಲ್ಮಡ್ಕ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರವೀಣ್ ಕುಮಾರ್ , ಶಾಲಾಭಿವೃಧ್ಧಿ ಸಮಿತಿಯ ಅಧ್ಯಕ್ಷ ಕೃಷ್ಣಪ್ಪ ಜೋಗಿಬೆಟ್ಟು ಉಪಸ್ಥಿತರಿದ್ದರು. ಕಾಚಿಲ ಶ್ರೀ ಮಹಾವಿಷ್ಣುಮೂರ್ತಿ ಸೇವಾ ಸಮಿತಿಯ ಅಧ್ಯಕ್ಷ ಸುಬ್ಬಣ್ ಚೆಟ್ಟಿಯಾರ್ ಪೆರಿಯಪ್ಪು ಹಾಗೂ ಸಾರ್ವಜನಿಕ ಗಣೇಶೋತ್ಸವ ನವೋದಯ ಸಂಘದ ಅಧ್ಯಕ್ಷ ಶಿವರಾಮ ಬಿ ಕಲ್ಮಡ್ಕ ಇವರು ಗಿಡ ನೆಡಲು ಚಾಲನೆ ನೀಡಿದರು. ಸಂಘದ ಉಪಾಧ್ಯಕ್ಷ ರಾಮಚಂದ್ರ ಕಾಚಿಲ ಪ್ರಾರ್ಥಸಿದರು. ಶಾಲೆಯ ಶಿಕ್ಷಕಿ ಶ್ರೀಮತಿ ವಜ್ರಾಕ್ಷಿ ಶ್ರೀಕಾಂತ್ ಕಲ್ಮಡ್ಕ ಸ್ವಚ್ಛತಾ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ಸಂಘದ ಸ್ಥಾಪಕ ಅಧ್ಯಕ್ಷ ಶೇಷಪ್ಪ ಎ ವಿ ಮಾಳಪ್ಪಮಕ್ಕಿ ಸ್ವಾಗತಿಸಿ , ಸಂಘದ ಸದಸ್ಯ ಜಯಂತ ಆರ್ ಕೆ ಧನ್ಯವಾದ ನೆರವೇರಿಸಿದರು. ಸಂಘದ ಸದಸ್ಯರಾದ ಸಚಿತ್ ಕಲ್ಮಡ್ಕ ಕಾರ್ಯಕ್ರಮವನ್ನು ನಿರೂಪಿಸಿದರು. 50ಕ್ಕೂ ಹೆಚ್ಚು ಸಂಘದ ಸದಸ್ಯರು ಹಾಗೂ ಊರವರು ಭಾಗವಹಿಸಿದರು.

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.