ಬೆಳ್ಳಾರೆಯ ಪೆರುವಾಜೆ ಸುಧಾನಂದ ಮಾವಿನಕಟ್ಟೆ ಕ್ಯಾಪ್ಟನ್ ಆಗಿ ವಿಶೇಷ ಭಡ್ತಿ

Advt_Headding_Middle
Advt_Headding_Middle

 


ಭಾರತಿಯ ಭೂ ಸೇನೆಯಲ್ಲಿ ಕರ್ತವ್ಯದಲ್ಲಿರುವ ಪೆರುವಾಜೆ ಗ್ರಾಮದ ಸುಧಾನಂದ ಮಾವಿನಕಟ್ಟೆ ಅವರಿಗೆ ಸ್ವಾತಂತ್ಯೋತ್ಸವದ ಪ್ರಯುಕ್ತ ‘ಕ್ಯಾಪ್ಯನ್’ ಆಗಿ ವಿಶೇಷ ಭಡ್ತಿ ನೀಡಿ ಭಾರತ ಸರ್ಕಾರ ಗೌರವಿಸಿದೆ. ಇವರು ಭಾರತೀಯ ಭೂ ಸೇನಾ ಮಿಲಿಟರಿ ಪೋಲಿಸ್ ವಿಭಾಗದಲ್ಲಿ ಕಳೆದ 30 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ ಇವರು ಸೇನಾಕಾರ್ಯಾಚರಣೆಗಳಾದ ಆಪರೇಷನ್ ವಿಜಯ್ (ಕಾರ್ಗಿಲ್ ಕದನ) ಆಪರೇಷನ್ ಪರಾಕ್ರಮ , ಆಪರೇಷನ್ ರಕ್ಷಕ್ ,(ಜಮ್ಮು ಮತ್ತು ಕಾಶ್ಮೀರ)ಆಪರೇಷನ್ ರೆನು(ಅಸ್ಸಾಂ)ಮೊದಲಾದ ಸೇವಾಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದಾರೆ. ಇವರು 1990 ಡಿಸೆಂಬರ್ 26 ರಂದು ಭಾರತೀಯ ಭೂ ಸೇನೆಯನ್ನು ಸೇರಿ ಬೆಂಗಳೂರಲ್ಲಿ ತರಭೇತಿ ಪಡೆದು ಸುಮಾರು 11 ವರ್ಷ ಜಮ್ಮು ಜಮ್ಮು ಮತ್ತು ಕಾಶ್ಮೀರದ ವಿವಿಧ ಭಾಗಗಳನ್ನು ಸೇವೆ ಸಲ್ಲಿಸಿದ್ದಾರೆ . ಅಲ್ಲದೆ ಅಸ್ಸಾಂ ,ಉತ್ತರ ಪ್ರದೇಶ ,ಮುಂಬಯಿ, ಪಂಜಾಬು, ಸಿಕ್ಕಿಂ ಮೊದಲಾದ ಕಡೆ ಸೇವೆ ಸಲ್ಲಿಸಿ ಈಗ ಬೆಂಗಳೂರಿನಲ್ಲಿ ಸೇನೆಯ ತರಭೇತಿ ಕೇಂದ್ರದಲ್ಲಿ ತರಭೇತಿ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ ಇವರು ದೇವಚಳ್ಳ ಗ್ರಾಮದ ಮಾವಿನಕಟ್ಟೆ ಕೃಷ್ಣ ಮಣಿಯಾಣಿ ಹಾಗೂ ಜಾನಕಿಯವರ ಪುತ್ರ. ಇವರ ಇನ್ನೊಬ್ಬ ಸಹೋದರ ರಾಜೇಶ್ ಪಿ ಕೂಡ ಭಾರತೀಯ ಭೂ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಪತ್ನಿ ಶಾಂತಾಮಣಿ ಪೆರುವಾಜೆಯ ಸರಕಾರಿ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿದ್ದಾರೆ ಮಕ್ಕಳಾದ ಸುಸ್ಮಿತಾ ಪಿ.9ನೇ ತರಗತಿ ಸಾಂಧೀಪನಿ ಶಾಲೆ ನರಿಮೊಗರು ಪುತ್ತೂರು. ಹಾಗೂ ಮಗ ಹೀತೇಶ್ ಪಿ.4 ನೇ ತರಗತಿ ಜ್ಞಾನಗಂಗಾ ಸೈಂಟ್ರಲ್ ಸ್ಕೂಲ್ ಬೆಳ್ಳಾರೆಯಲ್ಲಿ ಓದುತಿದ್ದಾರೆ. ಇವರು ಪೆರುವಾಜೆಯಲ್ಲಿ ವಾಸ್ತವ್ಯವಿದ್ದಾರೆ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.