ಅರಂತೋಡು ಪೋಸ್ಟ್ ಮೇನ್ ಇಡೀ ಕುಟುಂಬ ಕೊರೊನ ಪಾಸಿಟಿವ್

Advt_Headding_Middle
Advt_Headding_Middle

*BREAKING NEWS*

*ಅರಂತೋಡು ಪೋಸ್ಟ್ ಮೇನ್ ಇಡೀ ಕುಟುಂಬ ಕೊರೋನಾ ಪಾಸಿಟಿವ್*

*ಅರಂತೋಡು ಪೇಟೆಯಲ್ಲಿ ಸ್ಯಾನಿಟೈಸರ್ ಸಿಂಪಡಿಕೆ*

ಅರಂತೋಡು ಪೋಸ್ಟ್ ಮೇನ್ , ಅವರ ಪತ್ನಿ ಮತ್ತು ಮೂವರು ಮಕ್ಕಳಿಗೆ ಕೊರೊನ ಪಾಸಿಟಿವ್ ಕಂಡುಬಂದಿರುವ ಕಾರಣ ಪೋಸ್ಟ್ ಆಫೀಸನ್ನು ಸೀಲ್ ಡೌನ್ ಮಾಡಿರುವುದರ ಜತೆಗೆ ಅರಂತೋಡು ಪೇಟೆಯನ್ನು ಸ್ಯಾನಿಟೈಸೇಶನ್ ಮಾಡುವ ಪ್ರಕ್ರಿಯೆ ಕೈಗೊಳ್ಳಲಾಗುತ್ತಿದೆ ಎಂದು ತಿಳಿದುಬಂದಿದೆ.

ಪೋಸ್ಟ್ ಮೇನ್ ರವರು ತಾಯಿ ತೀರಿಕೊಂಡ ಪ್ರಯುಕ್ತ 16 ಕ್ಕೆ ಸೇರಿಸುವ ಕಾರ್ಯಕ್ರಮ ಆ.15 ರಂದು ರಾತ್ರಿ ನಡೆದಿತ್ತು. ಅದು ರಾತ್ರಿ ಸಂಪ್ರದಾಯದಂತೆ ಮರ್ಕಂಜದಲ್ಲಿರುವ ಮಾವನ ಮನೆಗೆ ಹೋಗಿ ರಾತ್ರಿಯೇ ರಿಕ್ಷಾದಲ್ಲಿ ಅವರು ಹಿಂತಿರುಗಿದ್ದರು. ನಿನ್ನೆ ಬೆಳಿಗ್ಗೆ ವಾಂತಿ , ಜ್ವರ ಕಾಣಿಸಿಕೊಂಡ ಕಾರಣ ಇಂದು ಬೆಳಿಗ್ಗೆ ಮದ್ದಿಗಾಗಿ ವೈದ್ಯರಲ್ಲಿಗೆ ಹೋದರು. ವೈದ್ಯರ ಸಲಹೆ ಮೇರೆಗೆ ಕೋವಿಡ್ ಪರೀಕ್ಷೆಗೊಳಗಾದಾಗ ಕೊರೋನ ಪಾಸಿಟಿವ್ ಬಂದಿತು. ಅವರ ಪತ್ನಿ ಮತ್ತು ಮೂವರು ಮಕ್ಕಳನ್ನು ಪರೀಕ್ಷೆಗೊಳಪಡಿಸಿದಾಗ ಅವರೆಲ್ಲರಿಗೂ ಪಾಸಿಟಿವ್ ಬಂದುದರಿಂದ ಐವರೂ ಅವರ ಮನೆಯಲ್ಲೇ ಕ್ವಾರಂಟೈನ್ ನಲ್ಲಿದ್ದಾರೆ.
ಅವರ ಪ್ರಥಮ ಸೋಂಕಿತರ ಹೆಸರುಗಳು 60 ಇವೆಯೆನ್ನಲಾಗಿದೆ. ಮರ್ಕಂಜದ ಸೋದರ ಮಾವನ ಮನೆಯವರು, 16 ಕ್ಕೆ ಬಂದಿದ್ದ ಸುಮಾರು 35 ಮಂದಿ , ಅರಂತೋಡು ಪೇಟೆಯಲ್ಲಿ ಪೋಸ್ಟ್ ಮೇನ್ ಯಾವಾಗಲೂ ಬಂದು ಕುಳಿತುಕೊಳ್ಳುವ ಅಂಗಡಿಗಳು, ಅವರು ಭೇಟಿ ಕೊಟ್ಟ ಪ್ರದೇಶ ಹೀಗೆ ಉದ್ದನೆಯ ಪಟ್ಟಿ ಸಿದ್ಧಗೊಂಡಿದೆ. ಅವರೆಲ್ಲರಿಗೆ ಕ್ವಾರೆಂಟೈನ್ ನಲ್ಲಿರುವಂತೆ ಅರಂತೋಡು ಪಿ.ಡಿ.ಒ. ತಿಳಿಸಿದ್ದಾರೆಂದು ತಿಳಿದುಬಂದಿದೆ.

 

 

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.