ಸರಕಾರಿ ಆಸ್ಪತ್ರೆಯ ಕೋವಿಡ್ ವಾರ್ಡಿಗೆ ಗೀಸರ್ ಅಳವಡಿಕೆ

Advt_Headding_Middle
Advt_Headding_Middle

ಕೊರೊನಾ ವಾರಿಯರ್ ಗಳಾದ ಮಹಾಲಕ್ಷ್ಮಿ ಇಲೆಕ್ಟ್ರಿಕಲ್ಸ್ ಉದ್ಯೋಗಿಗಳು


ಸುಳ್ಯ ಸರಕಾರಿ ಆಸ್ಪತ್ರೆಯ ಕೋವಿಡ್ ವಾರ್ಡ್‌ನಲ್ಲಿರುವ ಪೇಷೆಂಟ್‌ಗಳಿಗೆ ಸ್ನಾನಕ್ಕೆ ಬಿಸಿನೀರು ಒದಗಿಸುವುದಕ್ಕಾಗಿ ಆ.17 ರಂದು ಗೀಸರ್ ಅಳವಡಿಸಲಾಯಿತು.


ಅಲ್ಲಿ ಬಿಸಿ ನೀರು ಸಿಗದಿರುವ‌ ಬಗ್ಗೆ ಅ.16 ರಂದು ಜಿಲ್ಲಾ ಉಸ್ತುವಾರಿ ಸಚಿವರು ಸುಳ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಪತ್ರಕರ್ತರು ಅವರ ಗಮನ ಸೆಳೆದಿದ್ದರು. ಕೂಡಲೇ ಗೀಸರ್ ಅಳವಡಿಸಲು ಸಚಿವರು ತಾಲೂಕು ವೈದ್ಯಾಧಿಕಾರಿಗೆ ಸೂಚಿಸಿದ್ದರು. ತಾಲೂಕು ವೈದ್ಯಾಧಿಕಾರಿ ಡಾ. ಸುಬ್ರಹ್ಮಣ್ಯ ರವರು ‘ಇಲೆಕ್ಟ್ರಿಕಲ್ ಕೆಲಸದವರು ಕೋವಿಡ್ ವಾರ್ಡ್‌ಗೆ ಬರಲು ಹಿಂಜರಿಯುತ್ತಿದ್ದುದರಿಂದಾಗಿ ಗೀಸರ್ ಅಳವಡಿಸಲು ಆಗಿರಲಿಲ್ಲ. ಈಗ ಒಬ್ಬರು ಎಲೆಕ್ಟ್ರೀಷಿಯನ್ ಒಪ್ಪಿಕೊಂಡಿದ್ದಾರೆ” ಎಂದು
ತಿಳಿಸಿದ್ದರು.
ಯಾರು ಕೂಡ ಕೊರೊನಾ ವಾರ್ಡ್ ಗೆ ವಿದ್ಯುತ್ ಗೀಸರ್ ಅಳವಡಿಸಲು ಒಪ್ಪದಿರುವ ಸಂದರ್ಭದಲ್ಲಿ ಮಹಾಲಕ್ಷ್ಮಿ ಇಲೆಕ್ಟ್ರಿಕಲ್ಸ್ ನ ಸಂದೀಪ್ ನಾಯಕ್ ಒಪ್ಪಿಕೊಂಡರು. ತಮ್ಮ ಸಂಸ್ಥೆಯ ಉದ್ಯೋಗಿಗಳಾದ ಕರುಣಾಕರ್ ಶೆಟ್ಟಿಗಾರ್ ಮತ್ತು ಉದಯ ಕುಮಾರ್ ಅವರಿಗೆ ಪಿಪಿಇ ಕಿಟ್ ಧರಿಸಿ ಸರಕಾರಿ ಆಸ್ಪತ್ರೆ ಯ ಕೋವಿಡ್ ವಾರ್ಡ್ ಗೆ ವಿದ್ಯುತ್ ಗೀಸರ್ ಅಳವಡಿಸಿ ಸಮಸ್ಯೆ ಪರಿಹಾರ ಕ್ಕೆ ಸಹಕರಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.