ಸರಕಾರಿ ಶಾಲೆ ಮಕ್ಕಳಿಗೆ ಅನ್ಲೈನ್ ಶಿಕ್ಷಣ : ಎಂ.ಬಿ ಫೌಂಡೇಶನ್ ಸಹಕಾರ

Advt_Headding_Middle
Advt_Headding_Middle

ಸರಕಾರದ ನೂತನ ನೀತಿಯಂತೆ ಸರಕಾರಿ ಶಾಲಾ ಮಕ್ಕಳಿಗೆ ಆನ್ಲೈನ್ ಶಿಕ್ಷಣ ಒದಗಿಸಲು ಹೆತ್ತವರಿಗೆ ಸಾಧ್ಯವಾಗದೆ ಇರುವದರಿಂದ ಸಮುದಾಯ ಕೇಂದ್ರ ಗಳನ್ನು ಪ್ರಾರಂಭಿಸಿ ಶಿಕ್ಷಣ ಒದಗಿಸುವ ಮೂಲಕ ಅವರನ್ನು ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ನೂತನ ಕಾರ್ಯಕ್ರಮ ಸುಳ್ಯ ನಗರ ವ್ಯಾಪ್ತಿಯಲ್ಲಿ ಪ್ರಾರಂಭಗೊಂಡಿದೆ.


ಅ.೧೭ ರಂದು ಕ್ಷೇತ್ರ ಶಿಕ್ಷಣ ಸಂಪನ್ಮೂಲ ಕೇಂದ್ರ ದಲ್ಲಿ ಈ ಕುರಿತು ಕಾರ್ಯಾಗಾರ ಹಾಗೂ ಮಾಹಿತಿ ಕಾರ್ಯಕ್ರಮ ನಡೆಯಿತು.
ಪ್ರತೀ ಕೇಂದ್ರಕ್ಕೆ ಮಾಸ್ಕ್, ಸ್ಯಾನಿಟೈಜರ್, ಪುಸ್ತಕ ಮತ್ತು ಶಿಕ್ಷಕರ ತರಬೇತಿ ಪಡೆದ ಸ್ವಯಂ ಸೇವಕರ ನಿಯೋಜನೆ ಎಂ. ಬಿ. ಫೌಂಡೇಶನ್ ವತಿಯಿಂದ ನೀಡಲಿದ್ದಾರೆ.

ಪ್ರತೀ ಶಿಕ್ಷಕರ ಮತ್ತು ಮಕ್ಕಳ ಥರ್ಮಾಲ್ ಸ್ಕಾನ್ ಮೀಟರ್ ಮತ್ತು ಪಲ್ಸ್ ಆಕ್ಸಿಜನ್ ಮೀಟರ್ ಮೂಲಕ ತಪಾಸಣೆ ಮಾಡಲು ವೈದ್ಯಕೀಯ ಉಪಕರಣ ಗಳನ್ನೂ ಎಂ. ಬಿ. ಫೌಂಡೇಶನ್ ಒದಗಿಸಿದೆ.
ನಗರ ವ್ಯಾಪ್ತಿಯ ಶಾಲಾ ಮುಖ್ಯೋಪಾಧ್ಯಾಯ ಆಸಕ್ತಿ ಶಿಕ್ಷಣ ಇಲಾಖೆಯ ಎರಡೂ ಸಂಸ್ಥೆಗಳ ಪ್ರಯತ್ನಕ್ಕೆ ನಾವು ಸಹಕಾರ ನೀಡುವ ಮೂಲಕ ಸರಕಾರದ ಕಾರ್ಯಕ್ರಮ ವನ್ನು ಯಶಸ್ಸುಗೊಳಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತಿದ್ದೇವೆ ಎಂದು ಎಂ ಬಿ. ಫೌಂಡೇಶನ್ ಅಧ್ಯಕ್ಷ ಎಂ ಬಿ ಸದಾಶಿವ ಕಾರ್ಯಾಗಾರದಲ್ಲಿ ತಿಳಿಸಿದರು.


ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ ಮಹದೇವ್,ಕ್ಷೇತ್ರ ಶಿಕ್ಷಣ ಸಮನ್ವಯಾಧಿಕಾರಿ ಶ್ರೀಮತಿ ವೀಣಾ ಎಂ ಟಿ, ಮಹಿಳಾ ಸಮಾಜ ಮಾಜಿ ಅಧ್ಯಕ್ಷೆ ಶ್ರೀಮತಿ ಹರಿಣಿ ಸದಾಶಿವ ,ಅಧ್ಯಕ್ಷೆ ಜಯಲಕ್ಷ್ಮಿ ಮಧುಕುಮಾರ್, ,ಸಿ ಆರ್ ಪಿ ಗಳಾದ ಗೋಪಾಲಕೃಷ್ಣ ಬನ, ಮೇಘಶಾಲ ಸಂಯೋಜಕರಾದ ಕು.ತೇಜಸ್ವಿ, ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕರು, ತರಬೇತುದಾರರು ಉಪಸ್ಥಿತರಿದ್ದರು. ಶಿಕ್ಷಕ ಸುಬ್ರಹ್ಮಣ್ಯ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.