ಎಣ್ಮೂರು ಗ್ರಾಮ ಇಂದಿನಿಂದ ಅಧಿಕೃತವಾಗಿ ಎಡಮಂಗಲ ಗ್ರಾಮಪಂಚಾಯತ್ ಗೆ ಸೇರ್ಪಡೆ

Advt_Headding_Middle
Advt_Headding_Middle


ಇದು ವರೆಗೆ ಎಣ್ಮೂರು ಗ್ರಾಮ ಮತ್ತು ಮುರುಳ್ಯ ಗ್ರಾಮಗಳು ಸೇರಿ ಎಣ್ಮೂರು ಗ್ರಾಮಪಂಚಾಯತ್ ಆಗಿತ್ತು. ಆದರೆ ಇನ್ನು ಮುಂದೆ ಎಣ್ಮೂರು ಗ್ರಾಮವು ಎಡಮಂಗಲ ಗ್ರಾಮ ಪಂಚಾಯತ್ ನ ಭಾಗವಾಗಿರುತ್ತದೆ.

ಇಂದು ಸುಳ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್ ರವರು ತಾಲೂಕು ಪಂಚಾಯತ್ ನ ಸಹಾಯಕ ಲೆಕ್ಕಾಧಿಕಾರಿ ಹರೀಶ್ ರಾವ್ ರೊಂದಿಗೆ ಎಣ್ಮೂರು ಗ್ರಾಮ ಪಂಚಾಯತ್ ಕಚೇರಿಗೆ ಹೋಗಿ ತಮ್ಮ ಸಮಕ್ಷಮದಲ್ಲಿ ಎಣ್ಮೂರು ಗ್ರಾಮಕ್ಕೆ ಸಂಬಂಧಪಟ್ಟ ಅಧಿಕೃತ ಕಡತ ಮತ್ತು ವಹಿಗಳನ್ನು ಇನ್ನು ಮುಂದಿನ ಮುರುಳ್ಯ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಧರ್ ಕೆ.ಆರ್. ರಿಂದ ಎಡಮಂಗಲ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶ್ರೀಮತಿ ಸರಿಟಾ ಓಲ್ಗಾ ಡಿಸೋಜ ರವರಿಗೆ ಹಸ್ತಾಂತರಿಸಿದರು.
ಇನ್ನು ಮುಂದೆ ಎಣ್ಮೂರು ಗ್ರಾಮದ ಸಂಪೂರ್ಣ ಆಡಳಿತಾತ್ಮಕ ಜವಾಬ್ದಾರಿಯನ್ನು ಎಡಮಂಗಲ ಗ್ರಾಮ ಪಂಚಾಯತ್ ಗೆ ವಹಿಸಿದಂತಾಗಿದೆ.
ಈ ಸಂದರ್ಭದಲ್ಲಿ ಮುರುಳ್ಯ ಗ್ರಾಮ ಪಂಚಾಯತ್ ಕಾರ್ಯದರ್ಶಿ ಸೀತಾರಾಮ ಎಸ್. ಮತ್ತು ಸಿಬ್ಬಂದಿಗಳಾದ ಪಚ್ಚೋಳಿ ಕೆ , ಶ್ರೀಮತಿ ಜಯಮ್ಮ ಕೆ. , ಪ್ರದೀಪ ಜಿ ,ಶ್ರೀಮತಿ ರಂಜಿನಿ ಹಾಗೂ ಎಡಮಂಗಲ ಗ್ರಾಮ ಪಂಚಾಯತ್ ಸಿಬ್ಬಂದಿ ಗೋಪಿನಾಥ್ ಉಪಸ್ಥಿತರಿದ್ದರು.
ಎಣ್ಮೂರು ಗ್ರಾಮದ ಜನರು ಎಲ್ಲಾ ವ್ಯವಹಾರಗಳಿಗೆ ಇನ್ನು ಮುಂದಕ್ಕೆ ಎಡಮಂಗಲ ಗ್ರಾಮ ಪಂಚಾಯತ್ ಅನ್ನು ಸಂಪರ್ಕಿಸಲು ತಿಳಿಸಲಾಗಿದೆ. ಮುರುಳ್ಯ ಗ್ರಾಮ ಪಂಚಾಯಿತಿಯು ಮುಂದಿನ ಆದೇಶದವರೆಗೂ ಹಳೇ ಎಣ್ಮೂರು ಗ್ರಾಮ ಪಂಚಾಯತ್ ಕಟ್ಟಡದಲ್ಲಿಯೇ ಕಾರ್ಯನಿರ್ವಹಿಸುತ್ತದೆ ಎಂದು ಇ.ಒ. ತಿಳಿಸಿದ್ದಾರೆ .

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.