Breaking News

ಮೊಗೇರ ಗ್ರಾಮ ಸಮಿತಿ ಮುಕ್ಕೂರು : ಮೊಗೇರ ಗ್ರಾಮ ಸಮಿತಿಯಿಂದ ಪುಸ್ತಕ ವಿತರಣೆ – ಸ್ವಾತಂತ್ರ್ಯೋತ್ಸವ

Advt_Headding_Middle
Advt_Headding_Middle

 

ಮುಕ್ಕೂರು ಪೆರುವಾಜೆ ಗ್ರಾಮ ಮೊಗೇರ ಸಮಿತಿ ವತಿಯಿಂದ ನಾಲ್ಕನೇ ವರ್ಷದ ಪುಸ್ತಕ ವಿತರಣೆ ಕಾರ್ಯಕ್ರಮ ಹಾಗೂ ಸ್ವಾತಂತ್ರ್ಯ ದಿನಾಚರಣೆ ಆಗಸ್ಟ್ 15 ರಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ರವಿ ಕಾನಾವು ಇವರ ನಿವಾಸದಲ್ಲಿ ಸರಳ ರೀತಿಯಲ್ಲಿ ನೆರವೇರಿಸಲಾಯಿತು.

ಕಾರ್ಯಕ್ರಮವನ್ನು ಸಮಿತಿಯ ಹಿರಿಯ ಸದಸ್ಯೆ ಶ್ರೀಮತಿ, ಮುದರು ಕುಂಡಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು. ನಂತರ ಸಮಿತಿಯ ಗೌರವಾಧ್ಯಕ್ಷ ರಮೇಶ್ ಕಾನಾವು ಪ್ರಾಸ್ತಾವಿಕವಾಗಿ ಮಾತನಾಡಿ ಸಮಿತಿಯ ವತಿಯಿಂದ ನಾಲ್ಕನೇ ವರ್ಷದ ಪುಸ್ತಕ ವಿತರಣೆ ಕಾರ್ಯಕ್ರಮವು ಪೆರುವಾಜೆ ಗ್ರಾಮದ ಮೊಗೇರ ಸಮುದಾಯದ ವಿದ್ಯಾರ್ಥಿಗಳ ಕಲಿಕೆಗೆ ಒಂದಿಷ್ಟು ಸಹಕಾರಿಯಾಗಿದೆ, ಸಮಿತಿಯು ಗ್ರಾಮದಲ್ಲಿ ಇನ್ನಷ್ಟು ಹೆಚ್ಚಿನ ಕೆಲಸ ಕಾರ್ಯಗಳನ್ನು ಮಾಡಲು ಗ್ರಾಮದ ಎಲ್ಲಾ ಮೊಗೇರ ಸಮುದಾಯದವರ ಸಹಕಾರ ಅಗತ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಮಿತಿಯ ಅಧ್ಯಕ್ಷ ಪುರುಷೋತ್ತಮ.ಕುಂಡಡ್ಕ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಗ್ರಾಮದ ವಿದ್ಯಾರ್ಥಿಗಳ ಕಲಿಕೆಗೆ ನೆರವಾಗುವ ದೃಷ್ಟಿಯಿಂದ ನಮ್ಮ ಸಮಿತಿಯು ಒಳ್ಳೆಯ ಕಾರ್ಯವನ್ನು ಆಯೋಜನೆಗೊಳಿಸಿದೆ ಎಂದರು . ನಂತರ ಕಾನಾವು ಪರಿಸರದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು. ಆ ಬಳಿಕ ಪೆರುವಾಜೆ ಗ್ರಾಮದ ಸುಮಾರು 75 ವಿದ್ಯಾರ್ಥಿಗಳ ಮನೆ ಮನೆಗೆ ತೆರಳಿ ಪುಸ್ತಕ ವಿತರಣೆ ಮಾಡಲಾಯಿತು.

ಸಮಿತಿಯ ಸದಸ್ಯೆ ಕು. ಸವಿತಾ ಮುಂಡಾಜೆ ಸ್ವಾಗತಿಸಿ, ಸಮಿತಿಯ ಸಂಘಟನಾ ಕಾರ್ಯದರ್ಶಿ ರವೀಂದ್ರ ಅನವುಗುಂಡಿ ವಂದಿಸಿದರು.

ಕು. ಅಶ್ವಿನಿ, ಕು. ಪ್ರಜ್ಞಾ, ಕು. ರೇಷ್ಮಾ ಪ್ರಾರ್ಥನೆ ಗೈದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.