ಆ. 28 : ಪ್ರಭಾಕರ ಶಿಶಿಲರ ‘ರಾವು ಕೊರುಂಗು’ ಬಿಡುಗಡೆ

Advt_Headding_Middle
Advt_Headding_Middle

ತುಳು-ಕನ್ನಡ ಸಾಹಿತಿ ಡಾ. ಬಿ. ಪ್ರಭಾಕರ ಶಿಶಿಲರ ಮೂರನೆಯ ತುಳು ಕಥಾಗೊಂಚಲು ರಾವು ಕೊರುಂಗು ಆ. 28ರಂದು ಬೆಳಿಗ್ಗೆ 11 ಗಂಟೆಗೆ ಸುಳ್ಯ ಮುಖ್ಯ ರಸ್ತೆಯಲ್ಲಿರುವ ಶ್ರೀಹರಿ ಕಾಂಪ್ಲೆಕ್ಸ್‌ನ ಸುದ್ದಿ ಬಿಡುಗಡೆ ಕಛೇರಿಯಲ್ಲಿ ಬಿಡುಗಡೆಯಾಗಲಿದೆ.

ಸುದ್ದಿಬಿಡುಗಡೆ ಪತ್ರಿಕೆಯ ಸಂಸ್ಥಾಪಕ ಸಂಪಾದಕ ಡಾ| ಯು. ಪಿ. ಶಿವಾನಂದ ಕೃತಿ ಬಿಡುಗಡೆ ಮಾಡಲಿರುವದರು. ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಚಂದ್ರಶೇಖರ ಪೇರಾಲು ಕೃತಿ ಪರಿಚಯಿಸಲಿರುವರು. ಕರ್ನಾಟಕ ಅರೆಭಾಷೆ ಸಾಂಸ್ಕೃತಿಕ ಮತ್ತು ಸಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಸಭಾಧ್ಯಕ್ಷತೆ ವಹಿಸಲಿರುವರು. ದುರ್ಗಾಕುಮಾರ್ ನಾಯರ್‌ಕೆರೆ ಕಾರ್ಯಕ್ರಮ ನಿರ್ವಹಣೆ ಮಾಡಲಿರುವರು.
ಸುಳ್ಯ ಸುದ್ದಿ ಬಿಡುಗಡೆ ಬಳಗ ಮತ್ತು ಸುಳ್ಯ ಸ್ವಂತಿಕಾ ಸಾಹಿತ್ಯ ಮತ್ತು ಸಾಂಸ್ಕೃತಿಕ ಬಳಗದ ಜಂಟಿ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಎಲ್ಲಾ ಸಭಾಸದರು ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಸಂಘಟಕರ ಪರವಾಗಿ ಸುದ್ದಿ ಬಳಗದ ಹರೀಶ ಬಂಟ್ವಾಳ ಮತ್ತು ಸ್ವಂತಿಕಾ ಬಳಗದ ನೀರಬಿದಿರೆ ನಾರಾಯಣ ಸುಳ್ಯ ವಿನಂತಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.