Breaking News

ಅಯ್ಯನಕಟ್ಟೆ : ನ್ಯೂ ಸ್ಟಾರ್ ಆರ್ಟ್ಸ್ & ಸ್ಪೋರ್ಟ್ಸ್‌ನ ನೂತನ ಪದಾಧಿಕಾರಿಗಳ ಆಯ್ಕೆ

Advt_Headding_Middle
Advt_Headding_Middle

ಕಳೆದ 20 ವರ್ಷಗಳಿಂದ ಕ್ರೀಡೆ, ಸಾಮಾಜಿಕ ಹಾಗೂ ಶೈಕ್ಷಣಿಕ ರಂಗದಲ್ಲಿ ಮಹತ್ತರ ಸೇವೆಗೈಯುತ್ತಿರುವ ನ್ಯೂ ಸ್ಟಾರ್ ಆರ್ಟ್ಸ್ & ಸ್ಪೋರ್ಟ್ಸ್ ಅಯ್ಯನಕಟ್ಟೆ ಇದರ 2020-21 ನೇ ಸಾಲಿನ ನೂತನ ಸಮಿತಿ ಮತ್ತು ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಆ.5 ರಂದು, ಸಂಸ್ಥೆಯ ಸ್ಥಾಪಕಾಧ್ಯಕ್ಷ ಶರೀಫ್ ಅತ್ತಿಕರಮಜಲುರವರ ಸಾರಥ್ಯದಲ್ಲಿ ನಡೆಯಿತು.

ನೂತನ ಅಧ್ಯಕ್ಷ ಖಾಲಿದ್

 

ನೂತನ  ಕಾರ್ಯದರ್ಶಿ ಅಬ್ದುಲ್ ನಾಸಿರ್

ಸಭೆಯಲ್ಲಿ 2018-19ನೇ ಸಾಲಿನ ಕಾರ್ಯಚಟುವಟಿಕೆಗಳ ಲೆಕ್ಕಾಚಾರ ಮಂಡನೆ ಮಾಡಲಾಯಿತು. ನ್ಯೂ ಸ್ಟಾರ್ ಅಯ್ಯನಕಟ್ಟೆ ಆರ್ಟ್ಸ್ & ಸ್ಪೋರ್ಟ್ಸ್ ಕ್ಲಬ್ (ಎನ್‌ಎಸ್‌ಎ)ನ ಅಧ್ಯಕ್ಷರಾಗಿ ಖಾಲಿದ್ ನ್ಯೂ ಸ್ಟಾರ್ ಅಯ್ಯನಕಟ್ಟೆ ಅವರು ಅಧಿಕಾರ ವಹಿಸಿಕೊಂಡರು. ನಾಯಕತ್ವ, ಸಹೋದರತ್ವ ಮತ್ತು ಸಾಮಾಜಿಕ ಸೇವೆಗಳ ಕ್ರೀಡಾ ಕೌಶಲ್ಯ ಗುಣಗಳನ್ನು ಬೆಳೆಸಲು ವಿವಿಧ ಕ್ರೀಡಾ ಚಟುವಟಿಕೆಗಳನ್ನು ಪ್ರೋತ್ಸಾಹಿಸುವುದು ಮತ್ತು ಉತ್ತೇಜಿಸುವುದು ಮುಖ್ಯ ಉದ್ದೇಶವಾಗಿದೆ.

ನೂತನ  ಅಧ್ಯಕ್ಷರಾಗಿ ಖಾಲಿದ್, ಉಪಾಧ್ಯಕ್ಷರಾಗಿ ಅಶ್ರಫ್ ಜಿ, ಕಾರ್ಯದರ್ಶಿಯಾಗಿ ಅಬ್ದುಲ್ ನಾಸಿರ್, ಜಂಟಿ ಕಾರ್ಯದರ್ಶಿಯಾಗಿ ಮನೋಹರ, ಗೌರವ ಖಜಾಂಚಿಯಾಗಿ ಅಜೀಜ್ ಜಿ. ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿ ಆನಂದ್ ಪಂಜಿಗಾರು, ಥೌಸೀಫ್ ಕಳಂಜ, ಜಯಂತ್ ಪಂಜಿಗಾರು, ಸಂಸು ಪಲ್ಲತಡ್ಕ ಆಯ್ಕೆಗೊಂಡರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.