Breaking News

ದೊಡ್ಡತೋಟದಲ್ಲಿ ಶಿವರಾಮ ಗೌಡರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆ

Advt_Headding_Middle
Advt_Headding_Middle

 

ದೊಡ್ಡತೋಟದಲ್ಲಿ ಸಂಘಟನೆಗಳ ನಿರಂತರ ಚಟುವಟಿಕೆಗೆ ಶಿವರಾಮರ ಕೊಡುಗೆ ಅಪಾರ : ಶಾಸಕ ಎಸ್. ಅಂಗಾರ

 

ದೊಡ್ಡತೋಟ ಪರಿಸರಸದಲ್ಲಿ ಜನಾನುರಾಗಿಯಾಗಿದ್ದು, ಇತ್ತೀಚೆಗೆ ನಿಧನರಾದ ಶಿವರಾಮ ಗೌಡ ಕಾಸಿನಗೋಡ್ಲುರವರಿಗೆ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯು ಇಂದು ಸಂಜೆ ದೊಡ್ಡತೋಟ ಶಾಲೆಯಲ್ಲಿ ನಡೆಯಿತು.

ಸಾರ್ವಜನಿಕ ವಾಗಿ ಮನ ಇಚ್ಚೆಯಿಂದ ಕೆಲಸ ಮಾಡುವ ಮನಸ್ಸುಳ್ಳವರು ಶಿವರಾಮ ಗೌಡರು. ಅಭಿವೃದ್ಧಿ ಹಾಗೂ ಕಷ್ಟಕ್ಕೆ ಸ್ಪಂಧಿಸುವ ಗುಣ ಅವರದಾಗಿತ್ತು. ದೊಡ್ಡತೋಟದಲ್ಲಿ ಸಂಘಟನೆಗಳ ನಿರಂತರ ಚಟುವಟಿಕೆಗಳಿಗೆ ಶಿವರಾಮ ಗೌಡರ ಕೊಡುಗೆ ಅಪಾರವಾದದ್ದು. ಸಮಾಜಕ್ಕೆ ಕೊಡುಗೆ ನೀಡಿದವರನ್ನು ಸ್ಮರಿಸಿಕೊಳ್ಳುವುದು ಸಮಾಜದ ಜವಾಬ್ದಾರಿ. ದೊಡ್ಡತೋಟ ದಲ್ಲಿ ಆಗುಹೋಗುಗಳಿಗೆ ಸ್ಪಂಧಿಸುತ್ತಿದ್ದ ವ್ಯಕ್ತಿಯೊಬ್ಬರನ್ನು ನಾವು ಕಳೆದುಕೊಂಡಿದ್ದೇವೆ. ಕಾಸಿನಗೋಡ್ಲು ಮನೆತನಕ್ಕೆ ದುಃಖ ಸಹಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಸುಳ್ಯ ಶಾಸಕ ಎಸ್. ಅಂಗಾರ ಹೇಳಿದರು.

ಅವರು ದೊಡ್ಡತೋಟ ಪರಿಸರಸದಲ್ಲಿ ಜನಾನುರಾಗಿಯಾಗಿದ್ದು, ಇತ್ತೀಚೆಗೆ ನಿಧನರಾದ ಶಿವರಾಮ ಗೌಡ ಕಾಸಿನಗೋಡ್ಲುರವರಿಗೆ ದೊಡ್ಡತೋಟ ಶಾಲೆಯಲ್ಲಿ ನಡೆದ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿದರು. ಹೂವಪ್ಪ ಗೌಡ ಅರ್ನೋಜಿ ಪ್ರಸ್ತಾವಿಕವಾಗಿ ಮಾತನಾಡಿ ಶಿವರಾಮ ಗೌಡರ ಬದುಕಿನ ಒಡನಾಟಗಳನ್ನು ಮೆಲುಕು ಹಾಕಿದರು. ಹೇಮಂತ ಕಂದಡ್ಕ, ಮಹೇಶ್ ಮೇರ್ಕಜೆ, ಪ್ರವೀಣ್ ರಾವ್ ಶಿವಾರಮ ಗೌಡರ ಬಗ್ಗೆ‌ ಮಾತನಾಡಿದರು.


ವೇದಿಕೆಯಲ್ಲಿ ಶಿವರಾಮ ಗೌಡರ ಪುತ್ರ ಶರತ್ ಕಾಸಿನಗೋಡ್ಲು, ಕಿರಿಯ ಸಹೋದರ ದಿನೇಶ್ ಉಪಸ್ಥಿತರಿದ್ದರು. ಸಭೆಯಲ್ಲಿ ಶ್ರೀಕಾಂತ ಮಾವಿನಕಟ್ಟೆ, ಭಾನುಪ್ರಕಾಶ್ ಪೆಲ್ತಡ್ಕ, ಹೇಮಚಂದ್ರ ನಂದಗೋಕುಲ, ಶ್ರೀಧರ ಆರ್.ಸಿ., ಮಾಧವ ನಂದಗೋಕುಲ, ಪುನೀತ್ ಮರ್ಗಿಲಡ್ಕ ಮತ್ತಿತರರು ಉಪಸ್ಥಿತರಿದ್ದರು. ಸಭೆಯ ಆರಂಭದಲ್ಲಿ ಒಂದು‌ ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.