ಪಾಜಪಳ್ಳ – ಕಾಂಚೋಡು ರಸ್ತೆಯ ದುರವಸ್ಥೆ

Advt_Headding_Middle
Advt_Headding_Middle

 

 

ಪಾಜಪಳ್ಳದಿಂದ ಕಾಂಚೋಡಿಗೆ ಹೋಗುವ ರಸ್ತೆಯು ಸಂಪೂರ್ಣ ಕೆಸರುಮಯವಾಗಿದ್ದು, ಸಂಚಾರಕ್ಕೆ ಅಯೋಗ್ಯವಾಗಿದೆ. ಬೊಮ್ಮನಮಜಲು ಸೇತುವೆಯ ಬಳಿಯಿಂದ ಮುಂದೆ ಸುಮಾರು 1 ಕಿ.ಮೀ.ನಷ್ಟು ದೂರ ವಾಹನಗಳು ಸಂಚರಿಸುವುದೇ ಕಷ್ಟಕರವಾಗಿದೆ. ಈ ರಸ್ತೆ ಕಾಂಚೋಡು ಎಂಬಲ್ಲಿಂದ ಮುಂದೆ ಸಾಗಿ ಕಾಯಾರ ಮತ್ತು ಕೊಲ್ಲರ್ನೂಜಿ‌ ಕೆದಿಲ ರಸ್ತೆಗೆ ಸಂಪರ್ಕವನ್ನು ಕಲ್ಪಿಸುತ್ತದೆ.

ಕಳೆದ ವರ್ಷ ಈ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಉದ್ದೇಶದಿಂದ ಶಾಸಕರು ರೂ. 50 ಲಕ್ಷ ಅನುದಾನವನ್ನು ಒದಗಿಸಿ, ಟೆಂಡರ್ ಪ್ರಕ್ರಿಯೆಯು ಪೂರ್ಣಗೊಂಡು ಗುದ್ದಲಿ ಪೂಜೆಯೂ ನಡೆದಿದೆ. ಮುಂದಿನ ದಿನಗಳಲ್ಲಿ ಮಳೆ ಕಡೆಮೆಯಾದ ಮೇಲೆಯಾದರೂ ಗುತ್ತಿಗೆದಾರರು ಕಾಮಗಾರಿ ನಿರ್ವಹಿಸಿದರೆ ಈ ಭಾಗದ ಜನರ ಬಹು ವರ್ಷದ ಕನಸು ನನಸಾಗಬಹುದು.

* ಶಾಸಕರ ಅನುದಾನ ರೂ. 50 ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣ ನಡೆಸಲು ಮಂಗಳೂರಿನ ಗುತ್ತಿಗೆದಾರರಿಗೆ ಒಪ್ಪಿಸಲಾಗಿದೆ. ನನ್ನ ತಾ.ಪಂ. ಅನುದಾನದಲ್ಲಿ ರೂ. 3.5 ಲಕ್ಷ‌ ಇರಿಸಲಾಗಿದೆ. ಕೊರೊನಾ ಸಮಸ್ಯೆಯಿಂದಾಗಿ ಕಾಮಗಾರಿಗೆ ಅಡಚಣೆಯಾಗಿದೆ

– *ಶ್ರೀಮತಿ ಜಾಹ್ನವಿ ಕಾಂಚೋಡು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ತಾ.ಪಂ. ಸುಳ್ಯ*

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.