Breaking News

ನಾರ್ಕೋಡು-ಬೆಳ್ಳಪ್ಪಾರೆ-ಅಜ್ಜಾವರ ಸಂಪರ್ಕ ರಸ್ತೆ ಕಾಮಗಾರಿಗೆ ಸಂಸದರಿಂದ ಗುದ್ದಲಿ ಪೂಜೆ

Advt_Headding_Middle
Advt_Headding_Middle

 

ಆಲೆಟ್ಟಿ ಗ್ರಾಮದ ನಾರ್ಕೋಡು ಬೆಳ್ಳಪಾರೆ ಅಜ್ಜಾವರ ಪೇರಾಲು ಸಂಪರ್ಕದ ರಸ್ತೆ ಕೇಂದ್ರ ಸರ್ಕಾರದ ಸಿ.ಆರ್. ಎಫ್ ಗ್ರಾಮ ಸಡಕ್ ಯೋಜನೆಯಡಿಯಲ್ಲಿ ಅನುದಾನ 6 ಕೋಟಿ 54 ಲಕ್ಷ ಬಿಡುಗಡೆಗೊಂಡಿದ್ದು ಕಾಮಗಾರಿ ಕೆಲಸಕ್ಕೆ ಗುದ್ದಲಿ ಪೂಜೆಯನ್ನು ಆ.25 ರಂದು ಮಂಗಳೂರು ಸಂಸದರು ಬಿ.ಜೆ.ಪಿ.ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು ರವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಸಕ ಎಸ್ ಅಂಗಾರ, ತಾ.ಪಂ.ಅಧ್ಯಕ್ಷ ಚನಿಯ ಕಲ್ತಡ್ಕ, ಜಿ.ಪಂ.ಸದಸ್ಯರಾದ ಹರೀಶ್ ಕಂಜಿಪಿಲಿ, ಪುಷ್ಪಾವತಿ ಬಾಳಿಲ,
ನ.ಪಂ.ಮಾಜಿ ಅಧ್ಯಕ್ಷ ಎನ್. ಎ.ರಾಮಚಂದ್ರ, ಆಲೆಟ್ಟಿ ಸೊಸೈಟಿ ಅಧ್ಯಕ್ಷ ಶ್ರೀಪತಿ ಭಟ್ ಮಜಿಗುಂಡಿ,ಬಿಜೆಪಿ ಮಂಡಲ ಮಾಜಿ ಅಧ್ಯಕ್ಷ ವೆಂಕಟ್ ವಳಲಂಬೆ,ಪ್ರ. ಕಾರ್ಯದರ್ಶಿ ಸುಬೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ಎ.ಪಿ.ಎಂ.ಸಿ.ನಿರ್ದೇಶಕ ಜಯಪ್ರಕಾಶ್ ಕುಂಚಡ್ಕ, ಆಲೆಟ್ಟಿ ಪಂಚಾಯತ್ ಮಾಜಿ ಅಧ್ಯಕ್ಷ ಹರೀಶ್ ರಂಗತ್ತಮಲೆ, ಧನಂಜಯ ಕುಂಚಡ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಹಿರಿಯರಾದ ಶಿವರಾಮ ಗೌಡ ಕಲ್ಲೆಂಬಿ ಯವರು ದೀಪ ಬೆಳಗಿಸಿದರು. ಗ್ರಾಮ ಸಮಿತಿ ಅಧ್ಯಕ್ಷ ಕರುಣಾಕರ ಹಾಸ್ಪಾರೆ ಸ್ವಾಗತಿಸಿದರು. ಶ್ರೀಪತಿ ಭಟ್ ಮಜಿಗುಂಡಿ ವಂದಿಸಿದರು.ಪ್ರಾಸ್ತಾವಿಕ ಮಾತಿನೊಂದಿಗೆ ಸುದರ್ಶನ ಪಾತಿಕಲ್ಲು ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭದಲ್ಲಿ
ನ.ಪಂ.ಸದಸ್ಯರಾದ ಬಾಲಕೃಷ್ಣ ರೈ ದುಗ್ಗಲಡ್ಕ, ಸುಧಾಕರ ಕೇರ್ಪಳ, ಆಲೆಟ್ಟಿ ಸೊಸೈಟಿ ಮಾಜಿ ಉಪಾಧ್ಯಕ್ಷ ಮಾಧವ ಗೌಡ ಬಿಲ್ಲರಮಜಲು, ನಿರ್ದೇಶಕ ಸುಧಾಕರ ಆಲೆಟ್ಟಿ,ತಂಗವೇಲು ನಾಗಪಟ್ಟಣ, ಗುತ್ತಿಗೆದಾರ ತೀರ್ಥಕುಮಾರ್ ಕುಂಚಡ್ಕ, ಅಚ್ಚುತ ಮಣಿಯಾಣಿ ಆಲೆಟ್ಟಿ, ವಿಶ್ವನಾಥ ಶೆಟ್ಟಿ ಮಿತ್ತಡ್ಕ, ದಿನೇಶ್ ಗೌಡ ಕುಡೆಕಲ್ಲು,ರಾಮ್ ಮೋಹನ್ ಭಟ್ ಬಿಸಿಲುಮಲೆ, ಸೀತಾರಾಮ ಕೊಲ್ಲರಮೂಲೆ, ಯತಿರಾಜ್ ಭೂತಕಲ್ಲು, ಅಶ್ವಿನ್ ಬಾರ್ಪಣೆ, ಪ್ರಶಾಂತ್ ಬಿಲ್ಲರಮಜಲು, ಪ್ರವೀಣ್ ಕಲ್ಲೆಂಬಿ, ನವೀನ್ ಕುಮಾರ್ ಕುಂಚಡ್ಕ, ಬಿ.ಎ.ರಾಮಣ್ಣ ಗೌಡ ಕುಂಚಡ್ಕ, ಪೂವಯ್ಯ ಗೌಡ ಕುಂಚಡ್ಕ, ವಾಸುದೇವ ಗೌಡ ನಾರ್ಕೋಡು,ಉಮೇಶ್ ಗೌಡ ಕಲ್ಲೆಂಬಿ, ರಾಧಾಕೃಷ್ಣ ನಾರ್ಕೋಡು, ಅಪ್ಪಕುಂಞ ನಾರ್ಕೋಡು,ಪಂ.ಮಾಜಿ ಸದಸ್ಯರಾದ ಉಮೇಶ್ ನಾಯ್ಕ್ ಕಲ್ಲೆಂಬಿ, ಶ್ರೀವಾಣಿ ಕೋಲ್ಚಾರು,ವಸಂತ ಬಾಳೆಹಿತ್ಲು, ಕುಸುಮಾವತಿ ಕುಡೆಕಲ್ಲು, ಕಾರ್ಯಕರ್ತರಾದ ಬೂಡು ರಾಧಾಕೃಷ್ಣ ರೈ, ಕುಮಾರ ಸ್ವಾಮಿ ಭಟ್ ಬಿಸಿಲುಮಲೆ, ತೀರ್ಥರಾಮ ನೆಡ್ಚಿಲು, ಶಿವಶಂಕರ ಪಾಲಡ್ಕ, ಉಮೇಶ್ ನಾಯ್ಕ್ ಕೂಟೇಲು, ಪುಷ್ಪರಾಜ ಅರಂಬೂರು, ರಾಜೇಶ್ ಕುಂಚಡ್ಕ , ಉಮೇಶ್ ನಾಯ್ಕ್ ಅರಂಬೂರು ,ಸ್ಥಳೀಯರು ಭಾಗವಹಿಸಿದರು. ಈ ಸಂದರ್ಭದಲ್ಲಿ ಅರಂಬೂರು ಕೂಟೇಲು ರಸ್ತೆಯನ್ನು ಸಡಕ್ ಯೋಜನೆಯಡಿಯಲ್ಲಿ ಪ್ರಥಮ ಆದ್ಯತೆಯಲ್ಲಿ ಅಭಿವೃದ್ಧಿ ಪಡಿಸುವಂತೆ ಮನವಿ ಎನ್. ಎ.ರಾಮಚಂದ್ರ ಮತ್ತು ಶ್ರೀಪತಿ ಭಟ್ ಮಜಿಗುಂಡಿ ಯವರು ಸಲ್ಲಿಸಿದರು. ಬಾರ್ಪಣೆ ಭಾಗದಲ್ಲಿ ಟವರ್ ನಿರ್ಮಿಸುವಂತೆ ಮನವಿಯನ್ನು ತೀರ್ಥಕುಮಾರ್ ಕುಂಚಡ್ಕ ಸಲ್ಲಿಸಿದರು. ಆಲೆಟ್ಟಿ ಬಡ್ಡಡ್ಕ ಕೂರ್ನಡ್ಕ ಮುಖ್ಯ ರಸ್ತೆಯನ್ನು ಅಭಿವೃದ್ಧಿ ಪಡಿಸುವಂತೆ ಮನವಿಯನ್ನು ಸಲ್ಲಿಸಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.