ಅರಂತೋಡು : ಸಹಕಾರ ಸಂಘಗಳ ಉಪನಿಬಂಧಕರ ಭೇಟಿ

Advt_Headding_Middle
Advt_Headding_Middle


ಅರಂತೋಡು ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಸಹಕಾರ ಸಂಘಗಳ ಉಪನಿಬಂಧಕರಾದ ಪ್ರವೀಣ್ ನಾಯಕ್ ಮತ್ತು ಪುತ್ತೂರು ಉಪವಿಭಾಗದ ಸಹಾಯಕ ನಿಬಂಧಕರಾದ ರಾಜು ಭೇಟಿ ನೀಡಿದರು. ಸಂಘವು ಸದಸ್ಯರ ಹಿತದೃಷ್ಟಿಯಿಂದ ಅಳವಡಿಸಿಕೊಂಡಿರುವ ಸಂದೇಶ ಸೇವೆ, ಗಣಕೀಕೃತ ಸಾಲದ ಅರ್ಜಿಗಳ ವ್ಯವಸ್ಥೆಯನ್ನು ಪರಿಶೀಲಿಸಿ ಸಂತಂಸ ವ್ಯಕ್ತಪಡಿಸಿದರು. ಸಮೃದ್ಧಿ ಮಾರ್ಟ್‌ಗೂ ಭೇಟಿ ನೀಡಿ ಸದಸ್ಯರಿಗೆ ಉತ್ತಮ ಗುಣಮಟ್ಟದ ದಿನಸಿ ವಸ್ತುಗಳನ್ನು ಸ್ಪರ್ಧಾತ್ಮಕ ದರದಲ್ಲಿ ಒದಗಿಸುತ್ತಿರುವ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.


ಈ ಸಂದರ್ಭದಲ್ಲಿ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ., ಉಪಾಧ್ಯಕ್ಷ ದಯಾನಂದ ಕುರುಂಜಿ ನಿರ್ದೇಶಕರುಗಳಾದ ಚಂದ್ರಶೇಖರ ಚೋಡಿಪಣೆ, ವಿನೋದ್ ಉಳುವಾರು, ಕುಸುಮಾಧರ ಅಡ್ಕಬಳೆ, ಸಂತೋಷ್ ಚಿಟ್ಟನೂರು ನಿಧೀಶ್ ಎ. ಪರಿಣತ ನಿರ್ದೇಶಕರಾದ ವಿಜೇತ್ ಮರುವಳ, ಡಿಸಿಸಿ ಬ್ಯಾಂಕಿನ ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ಪುತ್ಯ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.