ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಜಾಗ ಖರೀದಿಗೆ ಚೆಕ್ ಹಸ್ತಾಂತರ

Advt_Headding_Middle
Advt_Headding_Middle

 

ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಭೂಮಿ ಖರೀದಿಸುವ ಪ್ರಯುಕ್ತವಾಗಿ 2 ಸೆನ್ಸ್ ಜಾಗದ ಹಣದ ಮೊತ್ತ ಒಂದು ಲಕ್ಷದ ಅರುವತ್ತು ಸಾವಿರ ರೂಪಾಯಿಯ ಚೆಕ್ ನ್ನು ಕಾವಿನಮೂಲೆ ನಿವೃತ್ತ ಉಪವಲಯ ಅರಣ್ಯಾಧಿಕಾರಿ ತಿಮ್ಮಪ್ಪ ಗೌಡರವರು ತಮ್ಮ ಪುತ್ರ ಕೆ.ಟಿ. ಪ್ರಭವ್ ರವರ ಸ್ಮರಣಾರ್ಥವಾಗಿ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರಿಗೆ ಆ.26 ರಂದು ದೇವಸ್ಥಾನದಲ್ಲಿ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ದೇವಸ್ಥಾನದ ವತಿಯಿಂದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುನಿಲ್ ರೈ ಪುಡ್ಕಜೆ ಮತ್ತು ಸದಸ್ಯ ಜಯರಾಮ ಉಮಿಕ್ಕಳರವರು ತಿಮ್ಮಪ್ಪ ಗೌಡರನ್ನು ಶಾಲು ಹೊದಿಸಿ ಸನ್ಮಾನಿಸಿದರು.


ಈ ಪುಣ್ಯ ಕಾರ್ಯದಲ್ಲಿ ಬೆಳ್ಳಾರೆಯ ಸೇವಾ ಭಾರತಿಯ ಸದಸ್ಯರಾದ ಚಂದ್ರಶೇಖರ್ ಪನ್ನೆ .ಪ್ರೇಮ್ ಸ್ಟುಡಿಯೋ ಬೆಳ್ಳಾರೆ,ಜಯಂತ ಮಡಪ್ಪಾಡಿ ,ಹಿಂದೂ ಜಾಗರಣ ತಾಲೂಕಿನ ಸಂಚಾಲಕ ಸಂತೋಷ್ ಕೊಡಿಯಾಲ,ಗೌಡ ಸಂಘದ ತಾಲ್ಲೂಕಿನ ಉಪಾಧ್ಯಕ್ಷರಾದ ಚಂದ್ರ ಕೋಲ್ಚಾರ್,ವೈಪಾಲ ರಾಮಣ್ಣ ರೈ ಪೆರುವಾಜೆ,ರಮಾನಾಥ್ ಜಿ ಅಂಕತಡ್ಕ, ಅಮ್ಮ ಭಗವಾನ್ ಸೇವಾ ಸಮಿತಿಯ ಸಂಚಾಲಕ ಮಂಡೆಪು ಕೃಷ್ಣಪ್ಪ ಶೆಟ್ಟಿ ,ಕಸ್ಟಮ್ಸ್ ನಿವೃತ್ತ ಅಧಿಕಾರಿ ರಾಮಕೃಷ್ಣ ಭಟ್ ಕುರುಂಬು ಡೇಲು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.