ನಾಲ್ಕು ಅಂತರಾಜ್ಯ ರಸ್ತೆ ಗಡಿ ನಿರ್ಬಂಧ ತೆರವುಗೊಳಿಸಲು ಹೈಕೋರ್ಟ್ ಮಧ್ಯಂತರ ಆದೇಶ ಕೊಟ್ಯಾಡಿ, ಮಾಣಿಮೂಲೆ, ಪಾಣತ್ತೂರು, ಸಾರಡ್ಕ ಗಡಿಗಳ ತೆರವಿಗೆ ಸೂಚನೆ

Advt_Headding_Middle
Advt_Headding_Middle

 

ಕೋವಿಡ್-19 ಅಲ್ ಲಾಕ್ ಪ್ರಕ್ರಿಯೆ 3.0 ನಿಯಮದ ಹೊರತಾಗಿಯೂ ಅಂತರರಾಜ್ಯ ಪ್ರಯಾಣಕ್ಕೆ ಅನುವು ನೀಡದ ಕೇರಳ ಸರಕಾರದ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಲೇರಿದ್ದು, ನಾಲ್ಕು ರಸ್ತೆಗಳ ನಿರ್ಬಂಧವನ್ನು ತೆರವುಗೊಳಿಸುವಂತೆ ಕೋರ್ಟ್ ಮಧ್ಯಂತರ ಆದೇಶ ನೀಡಿದೆ.

ಅಂತರಾಜ್ಯ ಸಂಪರ್ಕ ಮುಕ್ತಗೊಳಿಸಿ ಕೇಂದ್ರ ಗೃಹ ಸಚಿವಾಲಯವು ಕರ್ನಾಟಕ -ಕೇರಳ ಸೇರಿದಂತೆ ಆಯಾ ರಾಜ್ಯ ಸರಕಾರಗಳಿಗೆ ಸೂಚನೆ ನೀಡಿದ್ದವು. ಆದರೆ ಕೇರಳ ರಾಜ್ಯ ಸರಕಾರ ಮಾತ್ರ ಗಡಿಗಳನ್ನು ತೆರೆಯದೆ ಗಡಿನಾಡ ಕನ್ನಡಿಗರು ಅತಂತ್ರದ ಸ್ಥಿತಿಯಲ್ಲಿದ್ದರು. ಕೇರಳದ ಕ್ರಮವನ್ನು ಪ್ರಶ್ನಿಸಿ ಕಾಸರಗೋಡು ಬಿಜೆಪಿ ಜಿಲ್ಲಾಧ್ಯಕ್ಷ ಶ್ರೀಕಾಂತ್ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಕೇರಳ ಸರ್ಕಾರಕ್ಕೆ ಮಧ್ಯಂತರ ಆದೇಶ ನೀಡಿದೆ.

ಇದರಿಂದಾಗಿ ಕರ್ನಾಟಕ-ಕೇರಳ ಸಂಪರ್ಕಿಸುವ ಜಾಲ್ಸೂರು ಕಾಸರಗೋಡು ರಸ್ತೆಯ ಕೊಟ್ಯಾಡಿ, ಕಲ್ಲಪ್ಪಳ್ಳಿ ಕಾಞಂಗಾಡ್ ರಸ್ತೆಯ ಪಾಣತ್ತೂರು, ಕೋಲ್ಚಾರು ಬಂದಡ್ಕ ರಸ್ತೆಯ ಮಾಣಿಮೂಲೆ, ಹಾಗೂ ವಿಟ್ಲ ಸಮೀಪದ ಸಾರಡ್ಕ ಗಡಿಗಳಲ್ಲಿ ವಿಧಿಸಲಾಗಿರುವ ಬಂದ್ ತೆರವುಗೊಳಿಸುವಂತೆ ಸೂಚನೆ ನೀಡಿದೆ. ಆದರೆ ಪ್ರಮುಖ ಬೇಡಿಕೆಯಾದ ತಲಪಾಡಿ ಕುರಿತಂತೆ ತೀರ್ಪಿನಲ್ಲಿ ಉಲ್ಲೇಖಿಸಲಾಗಿಲ್ಲ.

ಎರಡು ದಿನಗಳ ಹಿಂದೆ ದೇಶಾದ್ಯಂತ ರಾಜ್ಯಗಳ ಬಂದ್ ತೆರವುಗೊಳಿಸುವಂತೆ ಹೊಸ ಮಾರ್ಗಸೂಚಿ ನೀಡಿತ್ತು. ಆದರೂ ಕೇರಳ ಸರ್ಕಾರ ಗಡಿ ಬಂದ್ ತೆರವುಗೊಳಿರಲಿಲ್ಲ. ಇದೀಗ ಈ ಆದೇಶದಿಂದ ದ.ಕ. ಜಿಲ್ಲೆಯ ಈ ನಾಲ್ಕು ಗಡಿಗಳಿಂದ ಕೇರಳಕ್ಕೆ ವಾಹನ ಸಂಚಾರಕ್ಕೆ ಅನುವು ದೊರೆತಂತಾಗಿದೆ.

ಅಂತರರಾಜ್ಯ ಗಡಿಗಳನ್ನು ತೆರವುಗೊಳಿಸುವಂತೆ ಹಾಗೂ ಪಾಸ್ ಮೂಲಕ ನಿಯಂತ್ರಣ ಮಾಡುವ ಕ್ರಮದ ವಿರುದ್ದ ಆ.25ರಂದು ಮಂಗಳೂರು-ಕಾಸರಗೋಡು ಗಡಿಪ್ರದೇಶವಾದ ತಲಪಾಡಿಯಲ್ಲಿ ಬಿಜೆಪಿ ವತಿಯಿಂದ ಪಾಸ್ ಉಲ್ಲಂಘನಾ ಆಂದೋಲನ ನಡೆದಿತ್ತು. ಇದೀಗ ಆಂದೋಲನ ನಡೆದ ಮರುದಿನವೇ ಹೈಕೋರ್ಟ್ ನಿಂದ ಆದೇಶ ಬಂದಿದ್ದು, ಕಾಸರಗೋಡು ಬಿಜೆಪಿ ಜಿಲ್ಲಾ ಸಮಿತಿಯ ಅಧ್ಯಕ್ಷ ಹಾಗೂ ನ್ಯಾಯವಾದಿ ಶ್ರೀಕಾಂತ್ ಸಲ್ಲಿಸಿದ ರಿಟ್ ಅರ್ಜಿಗೆ ಜಯ ದೊರೆತಂತಾಗಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.