ಐವರ್ನಾಡಿನ ವಿಜಯರಾಜ್ ರವರಿಗೆ ಎಸ್.ಐ.ಆಗಿ ಭಡ್ತಿ

Advt_Headding_Middle
Advt_Headding_Middle

ಮಂಗಳೂರಿನ ಉಳ್ಳಾಲ ಮತ್ತು ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿಜಯರಾಜ್ ಐವರ್ನಾಡುರವರು ಆ.9 ರಂದು ಎಸ್.ಐ.ಆಗಿ ಭಡ್ತಿಗೊಂಡು ಬಂದರು ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ.
1993 ರಲ್ಲಿ ಬೆಳ್ತಂಗಡಿ ಸ್ಟೇಷನ್ ನಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಆಗಿ ಕರ್ತವ್ಯಕ್ಕೆ ಸೇರಿದ ಇವರು ಬಳಿಕ ಧರ್ಮಸ್ಥಳ,ಪುತ್ತೂರು,ಕಾವೂರು,ಸ್ಟೇಷನ್ ಗಳಲ್ಲಿ ಒಟ್ಟು 27 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ.
ಇವರು ಐವರ್ನಾಡು ಗ್ರಾಮದ ದರ್ಖಾಸ್ತು ಕೆ.ಎಫ್.ಡಿ.ಸಿ.ರಬ್ಬರು ಫ್ಯಾಕ್ಟರಿ ಸಮೀಪ ಮನೆಯ ರಾಮಸ್ವಾಮಿ ಮತ್ತು ಶ್ರೀಮತಿ ಸರಸ್ವತಿ ದಂಪತಿಗಳ ಪುತ್ರ. ಇವರ ಪತ್ನಿ ಶ್ರೀಮತಿ ಮೇನಕಾ ಗೃಹಿಣಿಯಾಗಿದ್ದಾರೆ.
ಪುತ್ರರಾದ ಚಂದನ್ ಉಳ್ಳಾಲದ ಪದವು ಸ್ಕೂಲ್ ನಲ್ಲಿ ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿ ಹಾಗೂ ಪರಿಣಿತ್ ಸೈಂಟ್ ಲಾರೆನ್ಸ್ ಸ್ಕೂಲ್ ನಲ್ಲಿ 8 ನೇ ತರಗತಿಯಲ್ಲಿ ಕಲಿಯುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.