Breaking News

ಮುರುಳ್ಯ: ಜನನಿ ಮಿಶ್ರ ನವೋದಯ ಸಂಘದ ವತಿಯಿಂದ ಚೆಕ್ ವಿತರಣೆ

Advt_Headding_Middle
Advt_Headding_Middle

ಮುರುಳ್ಯ ನವೋದಯ ಜನನಿ ಮಿಶ್ರ ಸ್ವಸಹಾಯ ಸಂಘದ ವತಿಯಿಂದ ದಿ.ರಾಧಾಕೃಷ್ಣ ಗೌಡ ಪೊಳೆಂಜರವರ ಪುತ್ರ ನವೀನರವರಿಗೆ 1೦೦೦೦ ರೂ. ಚೆಕ್ ವಿತರಣೆ ನಡೆಯಿತು.


ಇದೇ ಸಂದರ್ಭದಲ್ಲಿ ಮುರುಳ್ಯ, ಎಣ್ಮೂರು ಪ್ರಾ.ಕೃ.ಪ.ಸ.ಸಂಘದ ವತಿಯಿಂದ ೫೦೦೦ ರೂ ಚೆಕ್ ನೀಡಲಾಯಿತು. ಕಾಣಿಯೂರು ಸರಕಾರಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ನವೀನರವರು ಲಾಕ್‌ಡೌನ್ ಸಮಯದಲ್ಲಿ ಇದ್ದಕ್ಕಿದ್ದಂತೆ ತಲೆನೊವು ಕಾಣಿಸಿಕೊಂಡು ತೀವ್ರ ತರಹದ ತಲೆನೋವು ಉಲ್ಬಣಗೊಂಡಿತ್ತು. ಅವರನ್ನು ಮಂಗಳೂರು ಪಸ್ಟ್ ನ್ಯೂರೋ ಆಸ್ಪತ್ರೆಗೆ ದಾಖಲಿಸಿ ಶಸ್ತ್ರಚಿಕಿತ್ಸೆ ನೀಡಲಾಯಿತು. ಚಿಕಿತ್ಸೆಗೆ ಸುಮಾರು ೪ ಲಕ್ಷ ಬೇಕಾಗಿದ್ದು, ನೆರವಿಗಾಗಿ ಚೆಕ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ನವೋದಯ ಜಿಲ್ಲಾ ಮೇಲ್ವಿಚಾರಕರಾದ (ಎಸ್.ಡಿ.ಸಿ.ಸಿ) ರಂಜಿತ್, ತಾಲೂಕು ಮೇಲ್ವಿಚಾರಕರಾದ ತಿಮ್ಮಪ್ಪಗೌಡ, ಪ್ರೇರಕರಾದ ಶ್ರೀಮತಿ ಧನ್ಯಕುಮಾರಿ, ಗಂಗಾಧರ ಪೊಳೆಂe, ಸಂಘದ ಮ್ಯಾನೇಜರ್ ಚಿದಾನಂದ ರೈ, ನಿರ್ದೇಶಕ ವಸಂತ ನಡುಬೈಲು, ಸಿಬ್ಬಂದಿ ವರ್ಗ ಹಾಗೂ ಅಧ್ಯಕ್ಷ ಸುಭಾಶ್ಚಂದ್ರ ರೈ ಕಲ್ಲೇರಿ ಮತ್ತ ಜನನಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ಶ್ರೀಮತಿ ಪುಷ್ಪಾವತಿ ರಾಧಾಕೃಷ್ಣರಿಗೆ ಚಿದಾನಂದ ರೈ ಮತ್ತು ವಸಂತ ನಡುಬೈಲು ಚೆಕ್ ನೀಡಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.