ನೆಲ್ಲೂರು ಕೆಮ್ರಾಜೆ ಸೊಸೈಟಿ ಆಡಳಿತ ಮಂಡಳಿ ಬರ್ಖಾಸ್ತು

Advt_Headding_Middle
Advt_Headding_Middle

ವಿಶೇಷ ಅಧಿಕಾರಿಯಾಗಿ ನಾಗೇಂದ್ರ ಬಿ. ನೇಮಕ

ನೆಲ್ಲೂರು ಕೆಮ್ರಾಜೆ ಕೃಷಿ ಪತ್ತಿನ ಸಹಕಾರ ಸಂಘದ ಆರು ಮಂದಿ ನಿರ್ದೇಶಕರು ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಬರ್ಖಾಸ್ತು ಗೊಂಡ ಕಾರಣ ವಿಶೇಷ ಅಧಿಕಾರಿಯಾಗಿ ಮಂಗಳೂರು ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಛೇರಿಯ ಅಧೀಕ್ಷಕರಾದ ನಾಗೇಂದ್ರ ಬಿ.ರವರು ನೇಮಕಗೊಂಡು ಇಂದು ಅಧಿಕಾರ ವಹಿಸಿಕೊಂಡಿದ್ದಾರೆ‌.

ಓರ್ವ ನಿರ್ದೇಶಕ ಸ್ಥಾನಕ್ಕೆ ಕೋ ಆಪ್ಟ್ ಮೂಲಕ ಆಯ್ಕೆ ಮಾಡಲು ಆಡಳಿತದಲ್ಲಿ ಗೊಂದಲ ಉಂಟಾಗಿ ಅಸಮಾಧಾನಗೊ‌ಂಡು ಐದು ಮಂದಿ ನಿರ್ದೇಶಕರು ರಾಜೀನಾಮೆ ನೀಡಿ ಅದು ಅಂಗೀಕಾರಗೊಂಡಿತ್ತು. ಇದರಿಂದ ಒಟ್ಟು ಆರು ಮಂದಿ ನಿರ್ದೇಶಕರು ರಾಜೀನಾಮೆ ನೀಡಿದಂತಾಗಿತ್ತು. ಇದರ ಮಧ್ಯೆ ಅಧ್ಯಕ್ಷ ವಿಷ್ಣು ಭಟ್ ರವರು ಆಡಳಿತಾಧಿಕಾರಿ ನೇಮಕ‌ ಮಾಡುವಂತೆ ಅಥವಾ ಚುನಾವಣೆ ನಡೆಸುವಂತೆ ಸಹಕಾರಿ ಇಲಾಖೆಗೆ ಪತ್ರವನ್ನೂ ಬರೆದಿದ್ದರು. ಇದೀಗ ಆಡಳಿತ ಮಂಡಳಿ ಬರ್ಖಾಸ್ತು ಗೊಂಡ ಕಾರಣ ನೆಲ್ಲೂರುಕೆಮ್ರಾಜೆ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ಸಹಕಾರಿ ನಿಯಮದಂತೆ ವಿಶೇಷ ಅಧಿಕಾರಿ ನೇಮಕಗೊಂಡಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.