Breaking News

ರ್‍ಯಾಂಕ್ ವಿಜೇತರಿಗೆ ಬೆಂಗಳೂರಿನ ಕೊಡಗು ಮತ್ತು ದ.ಕ ಗೌಡ ಸಮಾಜದಿಂದ ಸನ್ಮಾನ

Advt_Headding_Middle
Advt_Headding_Middle

2020ನೇ ಸಾಲಿನಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625ಕ್ಕೆ 625 ಅಂಕಗಳನ್ನು ಗಳಿಸಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾದ ಅನುಷ್ ಎಣ್ಣೆಮಜಲು ಹಾಗೂ ಸುಳ್ಯ ತಾಲೂಕಿನ ಸರಕಾರಿ ಶಾಲೆಗಳಲ್ಲಿ 625ಕ್ಕೆ 605 ಅಂಕಗಳನ್ನು ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನಿಯಾದ ಕು.ಹಿತಾಶ್ರೀ ಪಟ್ಟೆಮನೆ ಇವರುಗಳನ್ನು ಕೊಡಗು ಮತ್ತು ದ.ಕ. ಗೌಡ ಸಮಾಜ (ರಿ.) ಬೆಂಗಳೂರು ಇದರ ವತಿಯಿಂದ ಸುಳ್ಯದ ಕೆ.ವಿ.ಜಿ ಕಾನೂನು ಪದವಿ ಕಾಲೇಜಿನ ಸಭಾಂಗಣದಲ್ಲಿ ಸಮಾಜದ ಉಪಾಧ್ಯಕ್ಷರಾದ ರವೀಂದ್ರನಾಥ್ ಕೇವಳ, ನಿರ್ದೇಶಕರುಗಳಾದ ಗಂಗಾಧರ ಕನ್ನಡ್ಕ ಹಾಗೂ ರಾಜೇಶ್ ಅಂಬೆಕಲ್ಲು ಇವರುಗಳು ಸಹಾಯಧನ ಹಾಗೂ ಇತರ ಗೌರವಗಳೊಂದಿಗೆ ಸನ್ಮಾನಿಸಿದರು.

ಕಾರ್ಯಕ್ರಮದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್‌ನ ಅಧ್ಯಕ್ಷರಾದ ಡಾ/ ಕೆ.ವಿ.ಚಿದಾನಂದ್, ಕುರುಂಜಿ ಹಬ್ಬ ಸಮಿತಿಯ ಅಧ್ಯಕ್ಷರಾದ ಶೈಲೇಶ್ ಅಂಬೆಕಲ್ಲು, ಎಲಿಮಲೆ ಶಾಲೆಯ ಮುಖ್ಯೋಪಾಧ್ಯಾಯರಾದ ಚಂದ್ರಶೇಖರ ಪೇರಾಲು ಹಾಗೂ ಶಾಲೆಯ ಇತರ ಶಿಕ್ಷಕರು, ಇಬ್ಬರೂ ವಿದ್ಯಾರ್ಥಿಗಳ ಪೋಷಕರು, ಕೆ.ಆರ್.ಗಂಗಾಧರ್, ಪಿ.ಸಿ.ಜಯರಾಮ, ದಿನೇಶ್ ಮಡಪ್ಪಾಡಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.