Breaking News

ಸುಬ್ರಹ್ಮಣ್ಯ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ-ಸನ್ಮಾನ ಮತ್ತು ಕೋವಿಡ್-19 ರ ಕಾರ್ಯಗಾರ

Advt_Headding_Middle
Advt_Headding_Middle

 

ಇಂದು ಸುಬ್ರಹ್ಮಣ್ಯ ವಲಯ ಕಾಂಗ್ರೆಸ್ ಕಾರ್ಯಕರ್ತರ ಸಭೆ ಏನೆಕಲ್ಲಿನ ಗೌರವ ಗಾರ್ಡನ್‌ನಲ್ಲಿ ನಡೆಯಿತು. ದ.ಕ. ಜಿಲ್ಲಾ ಅಧ್ಯಕ್ಷ ಶಾಸಕ ಕೆ.ಹರೀಶ್‌ಕುಮಾರ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ಸುಳ್ಯ ಬ್ಲಾಕ್ ಅಧ್ಯಕ್ಷ ಜಯಪ್ರಕಾಶ್ ರೈ, ಕಡಬ ಬ್ಲಾಕ್ ಅಧ್ಯಕ್ಷ ಗಣೇಶ್ ಕೈಕುರೆ, ಕೆಪಿಸಿಸಿ ಕಾರ್ಯದರ್ಶಿಗಳಾದ ಭರತ್ ಮುಂಡೋಡಿ, ಎನ್.ವೆಂಕಪ್ಪ ಗೌಡ, ವೀಕ್ಷಕ ಕೃಷ್ಣಪ್ಪ ಕೆ, ವರ್ಗೀಸ್, ತಾಲೂಕು ಮಾನ್ಯ ಸದಸ್ಯರಾದ ಅಶೋಕ್ ನೆಕ್ರಾಜೆ ಉಪಸ್ಥರರಿದ್ದರು. ಬಾಲಕೃಷ್ಣ ಮರೀಲ್, ಹರೀಶ್ ಕಾರ್ಯಕ್ರಮ ನಿರೂಪಿಸಿದರು. ಕುಮಾರಿ ಲಕ್ಷ್ಮೀ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿದರು.

ಬಲ್ಯ, ಕೇನ್ಯ ,ಏನೆಕಲ್ಲು, ಸುಬ್ರಹ್ಮಣ್ಯ, ಐನೆಕಿದು, ಎಣ್ಮೂರು, ಎಡಮಂಗಲ ಹಿರಿಯ-ಕಿರಿಯ ಕಾಂಗ್ರೆಸ್ ನಾಯಕರು ಕಾರ್ಯಕರ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಿರಿಯ ಕಾಂಗ್ರೆಸ್ ಪೋಷಕ ಕಾರ್ಯಕರ್ತ ಸುಬ್ರಹ್ಮಣ್ಯದ ಮಹಾಲಿಂಗ ಮೂಲ್ಯರನ್ನು ಶಾಸಕ ಕೆ.ಹರೀಶ್‌ಕುಮಾರ್ ಸನ್ಮಾನ ಮಾಡಿ ಗೌರವಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.