ಸುಳ್ಯ ಗಾಂಧಿನಗರದಲ್ಲಿ ಮಾತೃಶ್ರೀ ಫೈನಾನ್ಸ್ ಮತ್ತು ಮಾತೃಶ್ರೀ ಕನ್‌ಸ್ಟ್ರಕ್ಷನ್ ಶುಭಾರಂಭ

Advt_Headding_Middle
Advt_Headding_Middle

 

ಸುಳ್ಯ ಗಾಂಧಿನಗರ ಆಲೆಟ್ಟಿ ಕ್ರಾಸ್ ಬಳಿ ಎಂ.ಎ.ಕಟ್ಟಡಕ್ಕೆ ಧನಂಜಯ ಕುಂಚಡ್ಕ ಮತ್ತು ಪದ್ಮನಾಭ ನೆಕ್ರಾಜೆ ಯವರ ಪಾಲುದಾರಿಕೆಯ ಮಾತೃಶ್ರೀ ಫೈನಾನ್ಸ್ ಸಂಸ್ಥೆಯು ಆ 31 ರಂದು ಸ್ಥಳಾಂತರಗೊಂಡು ಶುಭಾರಂಭಗೊಂಡಿತು. ಈ ಶುಭ ಸಂದರ್ಭದಲ್ಲಿ ಸಿವಿಲ್ ಇಂಜಿನಿಯರ್ ಗಳಾಗಿರುವ ಗಿರೀಶ್ ನಾರ್ಕೋಡು ಮತ್ತು ಪುನೀತ್ ಕುಂಚಡ್ಕ ರವರ ಪಾಲುದಾರಿಕೆಯ ಮಾತೃಶ್ರೀ ಕನ್‌ಸ್ಟ್ರಕ್ಷನ್ ಎಂ.ಎ.ಕಟ್ಟಡದಲ್ಲಿ ನೂತನವಾಗಿ ಶುಭಾರಂಭಗೊಂಡಿತು.

ಸಂಸ್ಥೆಯನ್ನು ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎನ್. ಎ.ರಾಮಚಂದ್ರ ರವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. 

ಈ ಸಂದರ್ಭದಲ್ಲಿ ಆಲೆಟ್ಟಿ ಪ್ರಾ. ಕೃ. ಪ.ಸ.ಸಂಘದ ಮಾಜಿ ಅಧ್ಯಕ್ಷ ಕೃಪಾಶಂಕರ ತುದಿಯಡ್ಕ, ಹಿರಿಯರಾದ ಶಿವರಾಮ ಗೌಡ ಕಲ್ಲೆಂಬಿ, ನಾರಾಯಣ ಗೌಡ ನಾರ್ಕೋಡು ಅರಂತೋಡು,ನಾಗಪಟ್ಟಣ ಸದಾಶಿವ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ದಾಮೋದರ ಗೌಡ ನಾರ್ಕೋಡು, ಪಿ.ಡಬ್ಲ್ಯೂ. ಡಿ. ಗುತ್ತಿಗೆದಾರ ತೀರ್ಥಕುಮಾರ್ ಕುಂಚಡ್ಕ, ಸೂಂತೋಡು ಎಂಪೋರಿಯಂ ನ ಸೂರಯ್ಯ ಗೌಡ ಸೂಂತೋಡು, ಶ್ರೀಮತಿ ಸುಗಂಧಿನಿ ಬಾಬು ಗೌಡ ಕಡಂಗ, ದಿನೇಶ್ ಗೌಡ ಕುಡೆಕಲ್ಲು, ಪುರುಷೋತ್ತಮ ಗೌಡ ಕುಂಚಡ್ಕ, ನಾರ್ಕೋಡು ಟ್ರೇಡರ್ಸ್ ಮಾಲಕ ಮುಕುಂದ ನಾರ್ಕೋಡು, ನಿವೃತ್ತ ಫಾರೆಸ್ಟರ್ ಬಾಬು ಗೌಡ ನಾಗಪಟ್ಟಣ ಮತ್ತಿತರರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.