Breaking News

ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳ 24 ನೇ ಚಾತುರ್ಮಾಸ್ಯ ಸಮಾಪನ, ಆಶೀರ್ವಚನ

Advt_Headding_Middle
Advt_Headding_Middle

 

ಯತಿಗಳಿಗೆ ಚತ್ರುರ್ಮಾಸ್ಯ ವೃತ ಎನ್ನುವುದು ಬಹಳ ಮಹತ್ವದ ವೃತವಾಗಿದೆ, ವೃತಸಂದರ್ಭದಲ್ಲಿ ಧ್ಯಾನ ತಪಸ್ಸುಗಳಿಂದ ಸಾಧನೆ ಮಾಡಿ ಅನುಷ್ಠಾನದ ಫಲವನ್ನು ಉಳಿದ ಸಮಯದಲ್ಲಿ ಭಕ್ತರಿಗೆ ಹಂಚಬೇಕು ಎಂಬುದು ನಿಯಮ. ಅದೇ ರೀತಿಯಲ್ಲಿ ೨೪ ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದೇವೆ.

ಸಂತೋಷವಾಗಿದೆ, ಎಲ್ಲಾ ನಾಡಿನ ಜನತೆಗೆ ಒಳ್ಳೆದಾಗಲಿ ಎಂದು ಶ್ರೀ ಸಂಪುಟ ನರಸಿಂಹ ಸ್ವಾಮಿ ಶ್ರೀ ಸುಬ್ರಹ್ಮಣ್ಯ ಮಠದ ಮಠಾಧೀಶರಾದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಗಳು ನುಡಿದರು.

ಅವರು ತಮ್ಮ ೨೪ ನೇ ಚಾತುರ್ಮಾಸ್ಯದ ಸಮಾಪನದ ಪ್ರಯುಕ್ತ ಇಂದು ನಡೆದ ಪಾದ ಪೂಜೆ, ಬಿಕ್ಷೆ ಮುಂತಾದ ವೈದಿಕ ಕಾರ್ಯಕ್ರಮಗಳ ಬಳಿಕ ಆಶೀರ್ವಚನ ನೀಡಿ ಮಾತನಾಡಿದರು.
ಜು.೧೪ ರಿಂದ ಆರಂಭಗೊಂಡಿದ್ದ ಚಾತುರ್ಮಾಸ್ಯ ಸೆ.೨ ರಂದು ಬಿಳಿನೆಲೆ ಗೋಪಾಲಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ಸಿಮೋಲ್ಲಂಘನೆ ನಡೆದು ಚಾತುರ್ಮಾಸ್ಯ ಸಮಾಪ್ತಿಗೊಳ್ಳಲಿದೆ.
ಸೆ.೧ರ ಮಧ್ಯಾಹ್ನ ಸಕಲ ವೈದಿಕ ಮರ್ಯಾದೆಗಳೊಂದಿಗೆ ಪಾದಪೂಜೆ, ಶ್ರೀಗಳಿಗೆ ಭಿಕ್ಷೆ ನಡೆಯಿತು.
ಶ್ರೀ ಮಠದ ದಿವಾನರಾದ ಸುದರ್ಶನ ಜೋಯಿಸರಿಂದ ಫಲಕಾಣಿಕೆ ಸಮರ್ಪಣೆ ಹಾಗೂ ಮಠದ ಅಭಿಮಾನಿಗಳಿಂದ ಗೌರವ ಸಮರ್ಪಣೆ ನಡೆಯಿತು.

ಈ ಸಂದರ್ಭದಲ್ಲಿ ಹಿರಿಯರಾದ ಯಾಜ್ಞೇಶ ಆಚಾರ್ಯ, ಗುರು ಮುಚ್ಚಿನ್ನಾಯರು ಹಾಗು ಶ್ರೀ ಮಠದ ಪೌರೋಹಿತ್ಯರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.