ಸಂಪಾಜೆ : ಉಚಿತ ಆಯುಷ್ಮಾನ್ ಹೆಲ್ತ್ ಕಾಡ್೯ ನೋಂದಣಿ ಅಭಿಯಾನದ ಉದ್ಘಾಟನೆ

Advt_Headding_Middle
Advt_Headding_Middle

ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಂಪಾಜೆ ಕೊಡಗು ಮತ್ತು ಶ್ರೀ ಭಗವಾನ್ ಸಂಘ ಊರುಬೈಲು ಇದರ ಸಹಭಾಗಿತ್ವದಲ್ಲಿ ಪ್ರಧಾನ ಮಂತ್ರಿಯವರ ಜನ್ ಆರೋಗ್ಯ ಯೋಜನೆಯಡಿಯಲ್ಲಿ ಉಚಿತ ಆಯುಷ್ಮಾನ್ ಹೆಲ್ತ್ ಕಾಡ್೯ ನೋಂದಣಿ ಅಭಿಯಾನದ ಉದ್ಘಾಟನೆ ಕಾರ್ಯಕ್ರಮ ಸೆ. 1 ರಂದು ಸಂಪಾಜೆ ಸಹಕಾರಿ ಸದನದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಆ. 31 ರಂದು ನಿಧನರಾದ ಮಾಜಿ ರಾಷ್ಟ್ರಪತಿ ಭಾರತರತ್ನ ಪ್ರಣಭ್ ಮುಖರ್ಜಿ ರವರಿಗೆ ಗೌರವ ನಮನ ಸಲ್ಲಿಸಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷರಾದ ಯನ್.ಸಿ ಅನಂತ ರವರು ಅಧ್ಯಕ್ಷತೆ ವಹಿಸಿ ಪ್ರಣಬ್ ಮುಖರ್ಜಿ ರವರು ಈ ದೇಶಕ್ಕೆ ತಾವು ನೀಡಿದ ಕೊಡುಗೆಯನ್ನು ಸ್ಮರಿಸಿದರು. ಹಾಗೆಯೇ ತಮ್ಮ ಸಂಸ್ಥೆ ವತಿಯಿಂದ ಜನರ ಆರೋಗ್ಯ ಕಾಳಜಿಯಿಂದ ಆಯುಷ್ಮಾನ್ ನೋಂದಣಿ ಅಭಿಯನವನ್ನು ಮಾಡುತ್ತಿದ್ದು,ಪ್ರತಿಯೊಬ್ಬ ನಾಗರೀಕನಿಗೂ ಈ ಸೌಲಭ್ಯ ದೊರೆಯಬೇಕೆಂದು ಆಶಿಸಿದರು.
ಸಮಾರಂಭದ ಉದ್ಘಾಟನೆ ನೆರವೇರಿಸಿದ ಸಂಪಾಜೆ ಕಂದಾಯ ಪರಿವೀಕ್ಷಕರಾದ ಸದಾನಂದ ಮೂಲೆಮಜಲು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಕಲ್ಲುಗುಂಡಿ ಎಸ್.ಪಿ.ಒ ಕಂಪ್ಯೂಟರ್ ನ ಮಾಲಿಕ ಕಿಶೋರ್ ಕುಮಾರ್ ಆಯುಷ್ಮಾನ್ ಹೆಲ್ತ್ ಕಾಡ್೯ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸಂಪಾಜೆ ಆರಕ್ಷಕ ಠಾಣೆಎ.ಎಸ್.ಐ ಶ್ರೀಧರ ಬಾಚಿಗದ್ದೆ, ಭಗವಾನ್ ಸಂಘದ ಅಧ್ಯಕ್ಷ ರವಿರಾಜ್ ಹೊಸೂರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ರಾಜಾರಾಮ ಕಳಿಗೆ ಸ್ವಾಗತಿಸಿ, ಸಿಇಟಿ ಬಿ.ಕೆ ಆನಂದ ವಂದಿಸಿದರು.
ಸಭೆಯಲ್ಲಿ ಸಹಕಾರ ಸಂಘದ ನಿರ್ದೇಶಕರು ಸಿಬ್ಬಂದಿಗಳು, ಭಗವಾನ್ ಸಂಘದ ಸದಸ್ಯರು ಮತ್ತು ಊರ ಪ್ರಮುಖರು ಭಾಗವಹಿಸಿದ್ದರು.
ಈ ಅಭಿಯಾನ ದಿನಾಂಕ ೧ ಮತ್ತು ೨ ರಂದು ಸಂಪಾಜೆ ಸಹಕಾರ ಸದನದಲ್ಲಿ ಮತ್ತು ೪ ಮತ್ತು ೫ ರಂದ ಬಾಲಂಬಿ ಶಾಖೆಯ ಸಹಕಾರ ಸದನದಲ್ಲಿ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.