Breaking News

ಕಲ್ಲಪ್ಪಳ್ಳಿ : ಉಡಿಯಾರ ಸೇತುವೆ ಉದ್ಘಾಟನೆ ವಿರೋಧಿಸಿ ಬಿಜೆಪಿ ಪ್ರತಿಭಟನೆ

Advt_Headding_Middle
Advt_Headding_Middle

ಕಲ್ಲಪ್ಪಳ್ಳಿಯ ಉಡಿಯಾರದಲ್ಲಿ ಪೆರುಮುಂಡ ಕಡೆಗಿನ ರಸ್ತೆ ನಿರ್ಮಿಸದೆ ಸೇತುವೆ ಉದ್ಘಾಟನೆ ಮಾಡಲು ಬಿಡುವುದಿಲ್ಲವೆಂದು ಸ್ಥಳೀಯ ಬಿ.ಜೆ.ಪಿ. ಹೇಳಿದೆ.


ಉಡಿಯಾರ ಪ್ರದೇಶದಲ್ಲಿ ಸುಮಾರು 59.25 ಲಕ್ಷ ರುಪಾಯಿ ವೆಚ್ಚದಲ್ಲಿ ನಿರ್ಮಿಸಿದ VCB ಡ್ಯಾಮ್ ಮತ್ತು ಸೇತುವೆಯನ್ನು ಉಧ್ಘಾಟಿಸಲು ಪಂಚಾಯತು ನಿರ್ಧರಿಸಿದೆ. ಆದರೆ ಸೇತುವೆ ನಿರ್ಮಾಣದ ಸಂದರ್ಭದಲ್ಲಿ ಒಪ್ಪಿಕೊಂಡಂತೆ ಉಡಿಯಾರ – ಪೆರುಮುಂಡ ರಸ್ತೆ ನಿರ್ಮಾಣ ಮಾಡದಿರುವುದರಿಂದ ಒಂದು ಮನೆಗೆ ಮಾತ್ರ ಸೇತುವೆ ನಿರ್ಮಿಸಿದಂತಾಗಿದೆ. ಆದ್ದರಿಂದ ಅದನ್ನು ಉದ್ಘಾಟಿಸುವುದಾಗಿ ಪಂಚಾಯತ್ ನಲ್ಲಿ ಆಡಳಿತ ನಡೆಸುತ್ತಿರುವ ಸಿ.ಪಿ.ಎಂ. ನಿರ್ಧರಿಸಿರುವುದನ್ನು ವಿರೋಧಿಸಿ ಬಿ.ಜೆ.ಪಿ. ಕಲ್ಲಪ್ಪಳ್ಳಿ ಹಾಗು ಬಿ.ಜೆ.ವೈ.ಎಂ. ಕಲ್ಲಪ್ಪಳ್ಳಿ ವತಿಯಿಂದ ಸಾಂಕೇತಿಕ ವಾಗಿ ಡ್ಯಾಮ್ ಪ್ರದೇಶದಲ್ಲಿ ಪ್ರತಿಭಟನೆ ನಡೆಸಲಾಯಿತು.*
*ಈ ಪ್ರತಿಭಟನೆಯನ್ನು ಧಿಕ್ಕರಿಸಿ ಕಳ್ಳಮಾರ್ಗದ ಮೂಲಕ ಡ್ಯಾಮ್ ಉದ್ಘಾಟನೆ ಮಾಡಲು ಮುಂದಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂಬ ಎಚ್ಚರಿಕೆಯನ್ನು ಪ್ರತಿಭಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಬಿ.ಜೆ.ಪಿ. ನೇತಾರರು ನೀಡಿದರು.
BJP ಕಾಞಂಗಾಡ್ ಮಂಡಲ ಪ್ರಧಾನ ಕಾರ್ಯದರ್ಶಿ ಗಳಾಗಿರುವ ವೇಣುಗೋಪಾಲ್ , BJP ಪನತ್ತಡಿ ಪಂಚಾಯತ್ ಪ್ರಧಾನ ಕಾರ್ಯದರ್ಶಿ ಸುರೇಶ್ , BJP ಕಲ್ಲಪ್ಪಳ್ಳಿ ಬೂತ್ ಅಧ್ಯಕ್ಷ ರಾದ ನಂದಕುಮಾರ್, ಮಾಜಿ ಪಂಚಾಯತ್ ಸದಸ್ಯೆ ಶ್ರೀಮತಿ ಶ್ರೀಲತ ವಿಶ್ವನಾಥ್ ಹಾಗು ಕಲ್ಲಪ್ಪಳ್ಳಿಯ ಬಿ.ಜೆ.ಪಿ. ಕಾರ್ಯಕರ್ತರು ಭಾಗವಹಿಸಿದ್ದರು*

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.