ಯೇನೆಕಲ್ಲಿನ ಬಾನಡ್ಕ ಸ.ಕಿ.ಪ್ರಾ. ಶಾಲೆಯಲ್ಲಿ ತೆಂಗಿನ ಸಸಿ ತೋಪು ರಚನೆ

Advt_Headding_Middle
Advt_Headding_Middle

ಯೇನೆಕಲ್ಲಿನ ಬಾನಡ್ಕ ಕಿ.ಪ್ರಾ. ಶಾಲೆಗೆ ಇರುವ 2.66 ಎಕ್ರೆ ಜಾವದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಂಡಿದ್ದಾರೆ. ಶಾಲೆ ಆವರಣದಲ್ಲಿ ಎರಡು ವರ್ಷಗಳ ಹಿಂದೆ ಸುಮಾರು 80 ಗೇರು ಗಿಡಗಳನ್ನು ನೀಡಲಾಗಿತ್ತು. ಪ್ರಸ್ತುತ ಉಳಿದ ಖಾಲಿ ಜಾಗದಲ್ಲಿ ಸುಮಾರು 60 ತೆಂಗಿನ ಸಸಿಗಳನ್ನು ಮತ್ತು 100 ಅಡಿಕೆ ಗಿಡಗಳನ್ನು ನೆಡುತ್ತಿದ್ದಾರೆ. ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ವಿಶ್ವನಾಥ ಮತ್ತು ಸದಸ್ಯರು, ಪೋಷಕರು ಮತ್ತು ಊರವರು ಶ್ರಮದಾನದ ಮೂಲಕ ಸಸಿಗಳನ್ನು ನೆಡುತ್ತಿದ್ದಾರೆ.

ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಾನಕಿ ಮತ್ತು ಸಹ ಶಿಕ್ಷಕ ಮುತ್ತಪ್ಪ ಮಾಸ್ಟರ್ ರವರು ಈಗಾಗಲೇ ಸುಮಾರು 30 ಸಾವಿರದಷ್ಟು ಹಣ ವ್ಯಯಿಸಿ ಮಾದರಿ ಶಿಕ್ಷಕರೆನಿಸಿದ್ದಾರೆ.
ಶಾಲೆಯ ಆಸ್ತಿಯನ್ನು ಅಭಿವೃದ್ಧಿ ಪಡಿಸಿದರೆ ಆ ಮೂಲಕ ಶಾಲೆಗೆ ಆರ್ಥಿಕ ಬಲ ಬರುತ್ತದೆ. ಶಾಲೆಯಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಇಲ್ಲಿಯ ಆದಾಯವನ್ನೇ ಉಪಯೋಗಿಸಬಹುದು. ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸುವ ದೃಷ್ಟಿಯಿಂದ ಈ ಕಾರ್ಯಗಳನ್ನು ಮಾಡಲಾಗಿದೆ. ಇದು ಕಿ.ಪ್ರಾ. ಶಾಲೆಯಾದರೂ ಇಲ್ಲಿ 35 ಮಕ್ಕಳಿದ್ದಾರೆ. ಮುಂದೆ ಮಕ್ಕಳ ಸಂಖ್ಯೆಯನ್ನು ಹೆಚ್ಚಿಸಬೇಕೆಂಬುದು ನಮ್ಮ ಉದ್ದೇಶ – ಶ್ರೀಮತಿ ಜಾನಕಿ ಮುತ್ತಪ್ಪ ಮಾಸ್ಟರ್ ಮಾದನಮನೆ ಮುಖ್ಯ ಶಿಕ್ಷಕಿ

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.