ಕೆಎಫ್‌ಡಿಸಿ ತೋಟ ಮತ್ತು ಖಾಸಗಿ ಎಸ್ಟೇಟ್‌ಗಳಲ್ಲಿ ದುಡಿಯುವ ಕಾರ್ಮಿಕರಿಗೆ ಸೂರು ಒದಗಿಸಲು ಸಿಐಟಿಯು ಆಗ್ರಹ

Advt_Headding_Middle
Advt_Headding_Middle

ಕೆಎಫ್‌ಡಿಸಿ ತೋಟ ಮತ್ತು ಖಾಸಗಿ ಎಸ್ಟೇಟ್‌ಗಳಲ್ಲಿ ದುಡಿಯುವ ಕಾರ್ಮಿಕರಿಗೆ ಸೂರು ಒದಗಿಸಬೇಕು. ಈ ಕುರಿತು ಸದ್ಯದಲ್ಲಿಯೇ ಹೋರಾಟ ಸಂಘಟಿಸಲಾಗುವುದು ಎಂದು ಸಿಐಟಿಯು ತಾಲೂಕು ಅಧ್ಯಕ್ಷ ಕೆ.ಪಿ.ಜಾನಿ ತಿಳಿಸಿದ್ದಾರೆ.


ಕೆ.ಎಫ್.ಡಿ.ಸಿ. ತೋಟಗಳಲ್ಲಿ ಮತ್ತು ಖಾಸಗೀ ಎಸ್ಟೇಟ್‌ಗಳಲ್ಲಿ ದುಡಿಯುವ ಕಾರ್ಮಿಕರಿಗೆ ಸ್ವಂತ ನಿವೇಶನವಾಗಲಿ, ಮನೆಯಾಗಲಿ ಇಲ್ಲ. ಅವರೂ ಈ ದೇಶದ ಪ್ರಜೆಗಳಾಗಿದ್ದು ದೇಶದ ಅಭಿವೃದ್ಧಿಗೆ ಎಲ್ಲರಂತೆ ಅವರ ಕೊಡುಗೆಯೂ ಇದೆ. ಸರಕಾರದ ಮತ್ತು ಖಾಸಗಿ ಎಸ್ಟೇಟ್ ಮಾಲೀಕರು ಕಟ್ಟಿ ಕೊಟ್ಟಿರುವ ಚಿಕ್ಕ ಚಿಕ್ಕ ಗೂಡುಗಳ ರೀತಿಯಿರುವ ಕೋಣೆಗಳಲ್ಲಿ ವಾಸ ಮಾಡುವ ಇವರುಗಳ ಸ್ಥಿತಿ ತುಬಾ ಶೋಚನೀಯವಾಗಿದೆ. ಸ್ವಂತ ನಿವೇಶನ ಮತ್ತು ಸೂರು ಇದೀಗ ಈ ವರ್ಗದ ಕಾರ್ಮಿಕರ ಕನಸಾಗಿದೆ. ಅಡಳಿತವೇ ಮುಂದೆ ನಿಂತು ಈ ವರ್ಗದ ಕಾರ್ಮಿಕರಿಗೆ ಸ್ವಂತ ಸೂರು ಒದಗಿಸಿ ಕೊಡಬೇಕು. ಇದಕ್ಕಾಗಿ ಸದ್ಯದಲ್ಲೇ ಈ ವರ್ಗದ ಕಾರ್ಮಿಕರನ್ನು ಒಟ್ಟುಗೂಡಿಸಿ ಹೋರಾಟ ಸಂಘಟಿಸಲಾಗುವುದು ಎಂದು ಕೆ.ಪಿ. ಜಾನಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.