Breaking News

ಕರಾವಳಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಸುಳ್ಯ ಭೇಟಿ

Advt_Headding_Middle
Advt_Headding_Middle

 

ಪಯಸ್ವಿನಿ ನದಿಗೆ ಕಿಂಡಿ ಅಣೆಕಟ್ಟಿಗೆ ಅನುದಾನಕ್ಕೆ ಬಿಜೆಪಿ ಮನವಿ

ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಯವರು ಇಂದು ಸುಳ್ಯಕ್ಕೆ ಭೇಟಿ ನೀಡಿದರು.

ಸಂಜೆ ವೇಳೆಗೆ ಸುಳ್ಯದ ನಿರೀಕ್ಷಣಾ ಮಂದಿರಕ್ಕೆ ಆಗಮಿಸಿದ ಅಧ್ಯಕ್ಷರು ಸುಳ್ಯ ಬಿಜೆಪಿ ನಗರ ಸಮಿತಿ ಪದಾಧಿಕಾರಿಗಳ ಜತೆ ಸಮಾಲೋಚನೆ ನಡೆಸಿದರು.

ಈ ವೇಳೆ ಸುಳ್ಯ ಪಯಸ್ವಿನಿ ನದಿಗೆ ಕಾಂತಮಂಗಲದಲ್ಲಿ ಕಿಂಡಿ ಅಣೆಕಟ್ಟು ರಚಿಸಿ ಪ್ರವಾಸೋದ್ಯಮ ಹಾಗೂ ಮತ್ಸ್ಯೋದ್ಯಮ ಅಭಿವೃದ್ಧಿ ಕಾಮಗಾರಿ ಗೆ ರೂ.6 ಕೋಟಿ ಅನುದಾನಕ್ಕೆ ಮನವಿ ಸಲ್ಲಿಸಲಾಯಿತು. ತಾಲೂಕಿನ‌ ವಿವಿಧ ಕಡೆಗಳಲ್ಲಿ ಕಿರು ಸೇತುವೆ ಹಾಗೂ ತೂಗು ಸೇತುವೆ ಗೆ ರೂ.2 ಕೋಟಿ, ವಿವಿಧ ಕಡೆ ತಡೆಗೋಡೆ ರಚನೆಗೆ ರೂ.1 ಕೋಟಿ ರೂ ಅನುದಾನಕ್ಕೆ ಬಿಜೆಪಿ ಪದಾಧಿಕಾರಿಗಳು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಸುಳ್ಯ ಬಿಜೆಪಿ ನಗರಾಧ್ಯಕ್ಷ ಐ.ಬಿ.ಚಂದ್ರಶೇಖರ, ಕಾರ್ಯದರ್ಶಿ ಜಿನ್ನಪ್ಪ ಪೂಜಾರಿ, ಸುಳ್ಯ ಸಿ.ಎ. ಬ್ಯಾಂಕ್ ಅಧ್ಯಕ್ಷ ಹರೀಶ್ ಬೂಡುಪನ್ನೆ, ನ.ಪಂ.ಮಾಜಿ ಅಧ್ಯಕ್ಷ ಎನ್.ಎ.ರಾಮಚಂದ್ರ, ನ.ಪಂ.ಸದಸ್ಯರು ಗಳಾದ ಸುಧಾಕರ ಕುರುಂಜಿಭಾಗ್, ವಿನಯ್ ಕಂದಡ್ಕ, ಬೂಡು ರಾಧಾಕೃಷ್ಣ ರೈ ಮತ್ತಿತರರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.