ಚೆಂಬು : ಉಚಿತ ಆಯುಷ್ಮಾನ್ ಹೆಲ್ತ್ ಕಾಡ್೯ ನೋಂದಣಿ ಅಭಿಯಾನದ ಉದ್ಘಾಟನೆ

Advt_Headding_Middle
Advt_Headding_Middle


ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಸಂಪಾಜೆ ಕೊಡಗು ಮತ್ತು ಶ್ರೀ ಭಗವಾನ್ ಸಂಘ ಊರುಬೈಲು ಇದರ ಸಹಭಾಗಿತ್ವದಲ್ಲಿ ಪ್ರಧಾನ ಮಂತ್ರಿಯವರ ಜನ್ ಆರೋಗ್ಯ ಯೋಜನೆಯಡಿಯಲ್ಲಿ ಉಚಿತ ಆಯುಷ್ಮಾನ್ ಹೆಲ್ತ್ ಕಾಡ್೯ ನೋಂದಣಿ ಅಭಿಯಾನದ ಉದ್ಘಾಟನೆ ಕಾರ್ಯಕ್ರಮ ಸೆ. ೪ ರಂದು ಪಯಸ್ವಿನಿ ಪ್ರಾ.ಕೃ.ಪ.ಸ.ಸಂಘದ ಚೆಂಬು ಶಾಖೆಯಲ್ಲಿ ನಡೆಯಿತು.


ಸಂಘದ ಅಧ್ಯಕ್ಷರಾದ ಯನ್.ಸಿ ಅನಂತ ರವರು ಅಧ್ಯಕ್ಷತೆ ವಹಿಸಿದರು. ಸಮಾರಂಭದ ಉದ್ಘಾಟನೆ ನೆರವೇರಿಸಿದ ಸಂಪಾಜೆ ಕಂದಾಯ ಪರಿವೀಕ್ಷಕರಾದ ಸದಾನಂದ ಮೂಲೆಮಜಲು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಲ್ಲುಗುಂಡಿ ಎಸ್.ಪಿ.ಒ ಕಂಪ್ಯೂಟರ್ ನ ಮಾಲಿಕ ಕಿಶೋರ್ ಕುಮಾರ್ ಆಯುಷ್ಮಾನ್ ಹೆಲ್ತ್ ಕಾಡ್೯ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸಂಪಾಜೆ ಆರಕ್ಷಕ ಠಾಣೆಎ.ಎಸ್.ಐ ಶ್ರೀಧರ ಬಾಚಿಗದ್ದೆ, ಭಗವಾನ್ ಸಂಘದ ಅಧ್ಯಕ್ಷ ರವಿರಾಜ್ ಹೊಸೂರು ಉಪಸ್ಥಿತರಿದ್ದರು. ಸಂಘದ ಉಪಾಧ್ಯಕ್ಷ ರಾಜಾರಾಮ ಕಳಿಗೆ ಸ್ವಾಗತಿಸಿ, ಸಿಇಟಿ ಬಿ.ಕೆ ಆನಂದ ವಂದಿಸಿದರು.
ಸಭೆಯಲ್ಲಿ ಸಹಕಾರ ಸಂಘದ ನಿರ್ದೇಶಕರು ಸಿಬ್ಬಂದಿಗಳು, ಭಗವಾನ್ ಸಂಘದ ಸದಸ್ಯರು ಮತ್ತು ಊರ ಪ್ರಮುಖರು ಭಾಗವಹಿಸಿದ್ದರು.
ಈ ಅಭಿಯಾನ ಸೆ. ೪ ಮತ್ತು ೫ ಚೆಂಬು ಶಾಖೆಯ ಸಹಕಾರ ಸದನದಲ್ಲಿ ನಡೆಯಲಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.