ಕಾಂಗ್ರೆಸ್‌ನ್ನು ಟೀಕಿಸುತ್ತಾ ಹಿಟ್ ಆಂಡ್ ರನ್ ಮಾಡುತ್ತಿರುವ ಶಾಸಕರು

Advt_Headding_Middle
Advt_Headding_Middle

 

ಶಾಸಕರೇ ನಮ್ಮ ಪಕ್ಷವನ್ನು ದೂರಬೇಡಿ – ನೀವು ಕೆಲಸ ಮಾಡಿ ತೋರಿಸಿ : ಕಾಂಗ್ರೆಸ್ ಸವಾಲು

ಶಾಸಕ ಅಂಗಾರರು ೬ ಬಾರಿ ಈ ಕ್ಷೇತ್ರದಿಂದ ಜನಾದೇಶ ಪಡೆದು ಆರಿಸಿ ಬಂದಿದ್ದಾರೆ. ಅವರು ಮಾಡಬೇಕಾದ ಕೆಲಸವನ್ನು ಮಾಡದೇ ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಾ ಹಿಟ್ ಆಂಡ್ ರನ್ ಮಾಡುತ್ತಿದ್ದಾರೆ. ಶಾಸಕರೇ ನಾವು ನಿಮ್ಮನ್ನು ಟೀಕಿಸುವುದಿಲ್ಲ. ನೀವು ಕೂಡಾ ನಮ್ಮ ಪಕ್ಷವನ್ನು ದೂರುವುದಕ್ಕಿಂತ ಬದಲು ಕೆಲಸ ಮಾಡಿ ತೋರಿಸಿ ಎಂದು ಕಾಂಗ್ರೆಸ್ ಸವಾಲೊಡ್ಡಿದೆ.

ಸೆ.೫ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜಯಪ್ರಕಾಶ್ ರೈಯವರು, “ಮೊನ್ನೆ ಅಜ್ಜಾವರದಲ್ಲಿ ನಡೆದ ರಸ್ತೆ ಗುದ್ದಲಿಪೂಜೆ ಕಾರ್ಯಕ್ರಮದಲ್ಲಿ ಶಾಸಕರು ಮತ್ತು ಸಂಸದರು ಕಾಂಗ್ರೆಸ್‌ನ್ನು ಟೀಕೆ ಮಾಡಿದ್ದು ಗಮನಕ್ಕೆ ಬಂದಿದೆ. ಅವರು ಟೀಕೆ ಮಾಡುತ್ತಾರೆಂದು ನಾವು ಆ ರೀತಿ ಮಾಡಲು ಹೋಗುವುದಿಲ್ಲ. ಹಳ್ಳಿಯಿಂದ ಡೆಲ್ಲಿವರೆಗೆ ಅವರದೇ ಪಕ್ಷ ಆಡಳಿತದಲ್ಲಿದ್ದರೂ ಅವರಿಕೆ ಕೆಲಸ ಮಾಡಲು ಸಾಧ್ಯವಾಗದಿರುವುದರಿಂದ ನಮ್ಮನ್ನು ದೂರಿಕೊಂಡು ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಶಾಸಕ, ಸಂಸದರಿಗೆ ವರ್ಷಕ್ಕೆ ಅವರ ಕ್ಷೇತ್ರಕ್ಕೆ ಬರುವ ಅನುದಾನ ವನ್ನು ತಂದದ್ದು ಬಿಟ್ಟರೆ ವಿಶೇಷ ಅನುದಾನ ತಂದಿದ್ದರೆ ಅದನ್ನು ಹೇಳಲಿ” ಎಂದು ಹೇಳಿದರು.


ಶಾಸಕರ ಕಿರಿಟಕ್ಕೆ ಗರಿ
ಕಾಂಗ್ರೆಸ್ ಶಾಸಕರನ್ನು ದೂರುವುದಿಲ್ಲ. ಆದರೆ ಕೆಲಸ ಆಗದೇ ಇರುವುದನ್ನು ಹೇಳಬೇಕಾಗುತ್ತದೆ. ಸುಳ್ಯದ ತ್ಯಾಜ್ಯ ವಿಲೇವಾರಿಗೆ ಶಾಶ್ವತ ಮುಕ್ತಿ ದೊರೆತಿಲ್ಲ. ನಗರ ಪಂಚಾಯತ್ ಆವರಣದಲ್ಲಿ ಕಸ ಹಾಕುವುದು ವಿಶ್ವದಲ್ಲೇ ದಾಖಲೆ. ಇದು ಶಾಸಕರ ಕಿರಿಟಕ್ಕೆ ಮತ್ತೊಂದು ಗರಿ ಇದ್ದಂತೆ ಎಂದು ಜಯಪ್ರಕಾಶ್ ರೈ ಹೇಳಿದರು.

ಕಳೆಂಕು ನೀರು…..
ಸುಳ್ಯದ ಕುಡಿಯುವ ನೀರಿನ ಘಟಕ ಓಬಿರಾಯನ ಕಾಲದ್ದು. ಅದಕ್ಕೆ ಅನುದಾನ ತರಿಸಿ ವ್ಯವಸ್ಥೆ ಸರಿ ಪಡಿಸುವ ಕೆಲಸ ಶಾಸಕರಿಂದ ಆಗಿಲ್ಲ. ಈ ಬಗ್ಗೆ ಶಾಸಕರು ಗಮನ ಹರಿಸಿ ಸರಿ ಮಾಡಬೇಕು. ಸುಳ್ಯದ ಜನರು ಕಳೆಂಕು ನೀರು ಕುಡಿಯುವುದನ್ನು ತಪ್ಪಿಸಬೇಕು” ಎಂದು ಹೇಳಿದರು. ಇವಿಷ್ಟೇ ಅಲ್ಲದೆ ತಾಲೂಕು ಸ್ಟೇಡಿಯಂ, ೧೧೦ ಕೆ.ವಿ., ಅಂಬೇಡ್ಕರ್ ಭವನ ಆಗದಿರುವುದರ, ಗ್ಯಾಸ್ ಸಬ್ಸಿಡಿ ರದ್ದು, ವಸತಿ ಯೋಜನೆಗೆ ಅನುದಾನ ಬರದಿರುವುದರ ಕುರಿತು ಜಯಪ್ರಕಾಶ್ ರೈಯವರು ವಿವರವಾಗಿ ಹೇಳಿದರು.

ಸಂಸದ ನಳಿನ್ ಕುಮಾರ್ ಕಟೀಲ್‌ರವರು ಅವರ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ. ಅವರು ಸುಳ್ಯಕ್ಕೆ ಬಂದು ನಮ್ಮ ಪಕ್ಷವನ್ನು ದೂರುವುದನ್ನು ಬಿಟ್ಟು ಸುಳ್ಯದ ಅಭಿವೃದ್ಧಿಗೆ ಅನುದಾನ ತರಿಸಿ ಕೊಡಿ, ಆಗ ನಿಮ್ಮನ್ನು ನಾವು ಅಭಿನಂದಿಸುತ್ತೇವೆ
ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಘಟಕ ಕಾರ್ಯದರ್ಶಿ ಎಸ್.ಸಂಶುದ್ದೀನ್, ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ್ ಎಂ.ಜೆ., ತಾಲೂಕು ಅಲ್ಪ ಸಂಖ್ಯಾತರ ಘಟಕ ಅಧ್ಯಕ್ಷ ಜಿ.ಕೆ. ಹಮೀದ್, ನಂದರಾಜ್ ಸಂಕೇಶ, ತಾ.ಪಂ. ಸದಸ್ಯರಾದ ತೀರ್ಥರಾಮ ಬಾಳಾಜೆ, ಅಬ್ದುಲ್ ಗಫೂರ್ ಕಲ್ಮಡ್ಕ, ಭವಾನಿಶಂಕರ ಕಲ್ಮಡ್ಕ, ಸಚಿನ್ ರಾಜ್ ಶೆಟ್ಟಿ ಪೆರುವಾಜೆ ಇದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.