ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿಯಿಂದ ಸಿಬ್ಬಂದಿಗಳಿಗೆ ಆರ್ಥಿಕ ಕೊಡುಗೆ

Advt_Headding_Middle
Advt_Headding_Middle

 

ಶ್ರೀ ರಾಮಕೃಷ್ಣ ಕ್ರೆಡಿಟ್ ಕೋ-ಓಪರೇಟಿವ್ ಸೊಸೈಟಿ ಲಿ., ಮಂಗಳೂರು ಕೋವಿಡ್- 19  ಲಾಕ್‌ಡೌನ್‌ನ ಸಂಕಷ್ಟದ ಅವಧಿಯಲ್ಲಿ ಸಂಘದ ಸಿಬ್ಬಂದಿಗಳು ಕರ್ತವ್ಯಕ್ಕೆ ಹಾಜರಾಗಿ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಸಂಘದ ಆಡಳಿತ ಮಂಡಳಿಯು ಪ್ರಯಾಣ ವೆಚ್ಚದ ಬಾಬ್ತು ಒಟ್ಟುರೂ. 1.5 ಲಕ್ಷದಷ್ಟು ಮೊಬಲಗನ್ನು ಸಿಬ್ಬಂದಿಗಳಿಗೆ ಪಾವತಿಸಿದೆ.
ಅದಲ್ಲದೆ ಕೋವಿಡ್-19 ರ ಸಂಕಷ್ಟದ ಸಮಯದಲ್ಲಿ ಸಹಕಾರಿ ಇಲಾಖೆಯ ಮೂಲಕ ಸಂಘದ ವತಿಯಿಂದ ರೂ.2 ಲಕ್ಷ,ಸಂಘದ ಆಡಳಿತ ಮಂಡಳಿ ಮತ್ತು ಸಿಬ್ಬಂದಿಗಳ ವತಿಯಿಂದ ರೂ.1.5 ಲಕ್ಷ ಮೊಬಲಗನ್ನು ಒಟ್ಟುರೂ. 3.5 ಲಕ್ಷದೇಣಿಗೆಯನ್ನು ಮುಖ್ಯಮಂತ್ರಿ ಪರಿಹಾರ ನಿಧಿ ಕೋವಿಡ್ 19 ಗೆ ನೀಡಲಾಗಿದೆ ಹಾಗೂ ಸಂಘದ ಪಿಗ್ಮಿ ಏಜಂಟರುಗಳಿಗೆ ಮತ್ತುಚಿನ್ನಾಭರಣ ಷರಾಫರರಿಗೆ ಒಟ್ಟುರೂ. 1.15  ಲಕ್ಷಧನ ಸಹಾಯವನು ನೀಡಲಾಗಿದೆ ಹಾಗೂ ಸಂಘದ ಕಾರ್ಯವ್ಯಾಪ್ತಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿರುವ 2೦ ಶಾಖೆಗಳ ಮೂಲಕ ಒಟ್ಟು 210 ಆಹಾರ ಕಿಟ್‌ಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಗಿದೆ.
3೦.೦6.2020 ಕ್ಕೆ ಅಂತ್ಯವಾದ 2020-21 ನೇ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿ ರೂ.೨೪೮ ಕೋಟಿ ಠೇವಣಾತಿ, ರೂ. 197  ಕೋಟಿ ಸಾಲ, ಒಟ್ಟು ರೂ. 445 ಕೋಟಿ ವ್ಯವಹಾರವನ್ನು ದಾಖಲಿಸಿದೆ. ಜೂನ್ 2019 ಕ್ಕೆ ಹೋಲಿಸಿದಲ್ಲಿ ಬ್ಯಾಂಕು ಶೇ. 2೦ ಪ್ರಗತಿಯನ್ನು ಹೊಂದಿದೆ.
ಸಂಘವು ಸಿಬ್ಬಂದಿಗಳ ಆಶೋತ್ತರಗಳಿಗೆ ಹಾಗೂ ಜನಸಾಮಾನ್ಯರ ಸಂಕಷ್ಟಗಳಿಗೆ ಸ್ಪಂದಿಸುತ್ತಾ, ತನ್ನ ಸದಸ್ಯರ ಸೇವೆಯಲ್ಲಿ 26  ವರ್ಷಗಳಿಂದ ಸದಾ ನಿರತವಾಗಿದೆ ಎಂದು ಸಂಘದ ಅಧ್ಯಕ್ಷರಾದ ಕೆ. ಜೈರಾಜ್ ಬಿ. ರೈಯವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.