Breaking News

ಕೋಲ್ಚಾರು ಮದುವೆಯಿಂದ ಕೊರೊನ ಹರಡಿದ್ದಲ್ಲ. ಮದುವೆಗೆ ಬಂದವರು ಆತಂಕ ಪಡಬೇಕಾಗಿಲ್ಲ : ಬಂಧುಗಳ ಸ್ಪಷ್ಟನೆ

Advt_Headding_Middle
Advt_Headding_Middle


” ಕೋಲ್ಚಾರಿನಲ್ಲಿ ಕೊರೊನ ಸ್ಫೋಟಗೊಳ್ಳಲು ಮದುವೆ ಸಮಾರಂಭಗಳು ಕಾರಣವಲ್ಲ. ಮದುವೆಗೆ ಬಂದವರು ಯಾರೂ ಆತಂಕಗೊಳ್ಳಬೇಕಾಗಿಲ್ಲ ” ಎಂದು ಕೋಲ್ಚಾರಿನಲ್ಲಿ ಇತ್ತೀಚೆಗೆ ನಡೆದ ಮದುವೆಯ ಮನೆಯವರು ಸುದ್ದಿಗೆ ತಿಳಿಸಿದ್ದಾರೆ.
ಕೋಲ್ಚಾರಿನಲ್ಲಿ ಆ.23 ರಂದು ಎರಡು ಮದುವೆಗಳಿದ್ದವು. ಅದರ ಹಿಂದಿನ ದಿನ ಗಣೇಶೋತ್ಸವ ಕಾರ್ಯಕ್ರಮವಿತ್ತು. ಮದುವೆ ಕಾರ್ಯಕ್ರಮಗಳಿಂದ ಕೊರೋನ ಹರಡಿದ್ದಲ್ಲ. ಅದಕ್ಕಿಂತ ಮೊದಲೇ ಜ್ವರದ ಪ್ರಕರಣಗಳಿದ್ದವು. ಮದುವೆಗೆ ಗುಂಪು ಗುಂಪಾಗಿ ಜನ ಸೇರಿದ್ದರಿಂದ ಕೊರೊನ ಹರಡಿತೆಂದು ಸುದ್ದಿ ಆನ್ ಲೈನ್ ನ್ಯೂಸಲ್ಲಿ ಬಂದಿರುವುದು ಸರಿಯಲ್ಲ ಎಂದು ಮದುವೆ ಮನೆಯವರಾದ ನೀಲಕಂಠ ಕೊಲ್ಲರಮೂಲೆ ಎಂಬವರು ತಿಳಿಸಿದ್ದಾರೆ. ಯಾವ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಕೊರೊನಾ ಬಂದಿದೆ ಎಂದು ನಾನು ತಿಳಿಸಿದ್ದೆ. ಅದನ್ನು ಹಾಕದೆ ಮದುವೆ ಕಾರ್ಯಕ್ರಮವನ್ನು ನೀವು ಉಲ್ಲೇಖಿಸಿರುವುದರಿಂದ ಮದುವೆಗೆ ಬಂದಿದ್ದವರು ಆತಂಕ ಪಡುವಂತಾಗಿದೆ ಎಂದು ನೀಲಕಂಠರು ಸುದ್ದಿಗೆ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.