ಬೆಳ್ಳಾರೆ ಮದ್ರಸದಲ್ಲಿ ಮುಅಲ್ಲಿಂ ಡೇ ಆಚರಣೆ

Advt_Headding_Middle
Advt_Headding_Middle

 

ಸಮಸ್ತ ಕೇರಳ ಜಂಇಯ್ಯತುಲ್ ಮುಅಲ್ಲಿಮೀನ್ ಸೆಂಟ್ರಲ್ ಕೌನ್ಸಿಲ್ ನಿರ್ದೇಶನದಂತೆ ಬೆಳ್ಳಾರೆ ಹಿದಾಯತುಲ್ ಇಸ್ಲಾಂ ಮದರಸದಲ್ಲಿ ಮುಅಲ್ಲಿಂ ಡೇ ಆಚರಣೆಯನ್ನು ಮರ್ಹೂಂ ಝೈನುದ್ದೀನ್ ಉಸ್ತಾದ್ ವೇದಿಕೆಯಲ್ಲಿ ನಡೆಸಲಾಯಿತು. ಸಮಾರಂಭದಲ್ಲಿ ಬಹು! ಹಸೈನಾರ್ ಮುಸ್ಲಿಯಾರ್ ಕಿರಾಅತ್ ಪಠಿಸಿದರು.

ಬಹು! ಸುಲೈಮಾನ್ ಮುಸ್ಲಿಯಾರ್ ರವರು ಸ್ವಾಗತಿಸಿದರು. ಬಹು! ಯೂನುಸ್ ಸಖಾಫಿ ಅಲ್ ಹಾಮಿದಿಯವರು ಉದ್ಘಾಟಿಸಿದರು. ಬಹು! ಮಹಮ್ಮದ್ ಮುಸ್ಲಿಯಾರ್ ಮುಂಡೋಲೆ ಪ್ರಾಸ್ತಾವಿಕ ಭಾಷಣ ಮಾಡಿದರು. ಸಮಾರಂಭದಲ್ಲಿ ಬೆಳ್ಳಾರೆ ಮುದರ್ರಿಸ್ ಬಹು! ತಾಜುದ್ದೀನ್ ರಹ್ಮಾನಿ ಉಸ್ತಾದ್ ಸಂದೇಶ ಭಾಷಣ ಮಾಡಿದರು. ಸುಳ್ಯ ರೇಂಜ್ ಮದರಸ ಮೇನೇಜ್ ಮೆಂಟ್ ಕಾರ್ಯದರ್ಶಿ ಬಷೀರ್ ಯು. ಪಿ. ಶುಭ ಹಾರೈಸಿದರು.

ಜಮಾಅತ್ ಉಪಾಧ್ಯಕ್ಷರಾದ ಅಬೂಬಕ್ಕರ್ ಮಂಗಳ, ಕೋಶಾಧಿಕಾರಿ ಮಮ್ಮಾಲಿ ಹಾಜಿ, ಕಾರ್ಯದರ್ಶಿ ಬಷೀರ್ ಕಲ್ಲಪಣೆ, ಪೆರುವಾಜೆ ಮದರಸ ಅಧ್ಯಕ್ಷರಾದ ಜಮಾಲುದ್ದೀನ್ ಕೆ. ಎಸ್.ನೆಟ್ಟಾರ್ ಮದರಸ ಅಧ್ಯಕ್ಷರಾದ ಹನೀಪ್ ನೆಟ್ಟಾರ್, ಕಾರ್ಯದರ್ಶಿ ಸೈಪುದ್ದೀನ್ ನೆಟ್ಟಾರ್ ಸಹಿತ ಹಲವಾರು ರಕ್ಷಕರು ಭಾಗವಹಿಸಿದ್ದರು. ಪೆರುವಾಜೆ, ನೆಟ್ಟಾರ್ ಮದರಸ ಉಸ್ತಾದ್ ಬಹು! ರಫೀಕ್ ಮುಸ್ಲಿಯಾರ್ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.