ನನ್ನ ನೇತೃತ್ವದಲ್ಲಿ ಸೈಟ್ ಮಾರಾಟ ನಡೆದಿಲ್ಲ, ನಾನು ಪ್ರಾಜೆಕ್ಟ್ ಇಂಜಿನಿಯರ್ ಮಾತ್ರ : ಕುಲದೀಪ್

Advt_Headding_Middle
Advt_Headding_Middle

”ವಿನು ನಗರದ ಬಡಾವಣೆಯ ಸೈಟ್ ಮಾರಾಟ ನನ್ನ ನೇತೃತ್ವದಲ್ಲಿ ನಡೆದಿಲ್ಲ. ನಾನು ಪ್ರಾಜೆಕ್ಟ್ ಇಂಜಿನಿಯರ್ ಮಾತ್ರ” ಎಂದು ಇಂಜಿನಿಯರ್ ಕುಲದೀಪ್ ಸುತ್ತುಕೋಟೆ ಹೇಳಿದ್ದಾರೆ. 


ಸೆ.೫ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, “ಬಡಾವಣೆಯ ನಿವಾಸಿ ಮಹಾಬಲೇಶ್ವರರು ಪತ್ರಿಕಾಗೋಷ್ಠಿಯಲ್ಲಿ ನನ್ನ ನೇತೃತ್ವದಲ್ಲಿ ಸೈಟ್ ಮಾರಾಟ ಆಗಿದೆ ಎಂದು ಹೇಳಿದ್ದಾರೆ. ಆದರೆ ನನ್ನ ನೇತೃತ್ವ ಅಲ್ಲಿ ಇಲ್ಲ. ಸೈಟ್ ಮಾರಾಟ ಮಾಡುವುದು ಆ ಜಾಗದ ಮಾಲಕರು ಎಂದು ಹೇಳಿದರು. ನಾವು ಸರಕಾರ ನಿಯಮದ ಪ್ರಕಾರ ಪ್ರಾಜೆಕ್ಟ್ ಮಾಡಿದ್ದೇನೆ. ಮತ್ತು ನಮ್ಮ ಪ್ರಾಜೆಕ್ಟ್ ನಿವೇಶನ ಕನ್ವರ್ಷನ್ ಆಗಿದೆ. ಈಗ ಹರೀಶ್ ಕಾಮತ್‌ರು ಖರೀದಿಸಿದ ಜಾಗ ಈ ಪ್ರಾಜೆಕ್ಟ್ ಗೆ ಸಂಬಂಧಿಸಿದ್ದಲ್ಲ. ಆ ಜಾಗ ಇದಕ್ಕಿಂತ ಹೊರತಾಗಿದೆ ಎಂದು ಹೇಳಿದರು.
ಈಗ ವಿವಾದ ವಿರುವ ರಸ್ತೆ ಪ್ರಾಜೆಕ್ಟ್‌ನಲ್ಲಿಲ್ಲವೇ? ಎಂದು ಪತ್ರಕರ್ತರು ಪ್ರಶ್ನಿಸಿದಾಗ, “ಇಲ್ಲಿ ಆ ರಸ್ತೆ ಇಲ್ಲ” ಎಂದು ಹೇಳಿದರು. ಅಲ್ಲಿ ನೀವೆ ನಿರ್ಮಿಸಿದ ಡಾಮರು ಇದೆಯಲ್ಲವೇ? ಎಂದು ಪತ್ರಕರ್ತರು ಕೇಳಿದಾಗ, “ನಾವು ಅಲ್ಲಿ ಸೈಟ್ ಮಾಡುವಾಗ ಜಲ್ಲಿ, ಮರಳು, ಕಲ್ಲು ಕೊಂಡು ಹೋಗಲೆಂದು ರಸ್ತೆ ಮಾಡಿದೆವು. ಲಾರಿ ಹೂತು ಹೋಗಬಾರದೆಂದು ಡಾಮರು ಹಾಕಲಾಯಿತೇ ವಿನಃ ಆ ರಸ್ತೆ ಆ ಬಡಾವಣೆಗೆ ಸಂಬಂಧಿಸಿದ್ದಲ್ಲ ಎಂದು ಕುಲದೀಪ್ ಹೇಳಿದರು.
ಆ ರಸ್ತೆಯನ್ನು ತೋರಿಸಿ ನೀವು ಸೈಟ್ ಸೇಲ್ ಮಾಡಿದ್ದೀರಿ. ಜನರು ಆ ರಸ್ತೆಯನ್ನು ನಂಬಿ ನಿವೇಶನ ಕರೀದಿಸಿ ಮನೆ ಕಟ್ಟಿದ್ದಾರೆ. ಈಗ ನೀವು ಆ ರಸ್ತೆ ಇದಕ್ಕೆ ಸಂಬಂಧಿಸಿದ್ದಲ್ಲ ವೆಂದರೆ ಜನರಿಗೆ ಮೋಸ ಮಾಡಿದಂತಲ್ಲವೇ ಎಂದು ಕೇಳಿದಾಗ, “ನಾವು ಯಾರನ್ನೂ ಮೋಸ ಮಾಡಿಲ್ಲ. ಅವರಿಗೆ ಹೆದ್ದಾರಿಯಿಂದ ಬೆಟ್ಟಂಪಾಡಿಯ ಕಡೆಯಿಂದ ೬ ಫೀಟ್‌ನ ರಸ್ತೆ ಇದೆ. ಅದನ್ನು ಅಂದೇ ಹೇಳಿದ್ದೇವೆ” ಎಂದು ಅವರು ಹೇಳಿದರು.
ನಾವು ಸೈಟ್ ಮಾಡುವ ಸಂದರ್ಭ ಮಾಡಿದ ಈ ರಸ್ತೆಯನ್ನು ಬಡಾವಣೆಯವರು ಬಳಸಿಕೊಳ್ಳುತ್ತಿದ್ದರು. ಎರಡು ವರ್ಷದ ಹಿಂದೆ ಆ ರಸ್ತೆ ಬರುವ ಜಾಗವನ್ನು ಜಾಗದ ಮಾಲಕರು ಮಾರಾಟ ಮಾಡಿದರು. ಆ ಸಂದರ್ಭದಲ್ಲಿ ಮಾನವಿಯತೆಯ ನಿಟ್ಟಿನಲ್ಲಿ ಪಕ್ಕದಲ್ಲೇ ಇನ್ನೊಂದು ರಸ್ತೆಯನ್ನು ಮಾಡಿ ಕೊಡಲಾಯಿತು. ಆದರೆ ಬಡಾವಣೆಯವರು ಇದೇ ರಸ್ತೆ ಬೇಕು ಎಂದು ಹಠ ಹಿಡಿದಿದ್ದಾರೆ. ವಿವಾದ ಎದ್ದ ಬಳಿಕ ಸಹಾಯಕ ಕಮಿಷನರ್, ತಹಶೀಲ್ದಾರ್ ಡಾ| ಯತೀಶ್ ಉಳ್ಳಾಲ್ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ. ನಾವು ಅವರಿಗೆ ವಾಸ್ತವಾಂಶ ವಿವರಿಸಿದ್ದೇವೆ ಎಂದು ಕುಲದೀಪ್ ಹೇಳಿದರು.
“ನಾವು ಮಾನವೀಯ ನೆಲೆಯಲ್ಲಿ ಬಡಾವಣೆಯವರಿಗೆ ಇನ್ನೊಂದು ರಸ್ತೆಯನ್ನು ಬಿಟ್ಟಿದ್ದೆವು. ಮಳೆಗಾಲದಲ್ಲೊಮ್ಮೆ ಅಲ್ಲಿ ಬರೆ ಜರಿದು ಸಮಸ್ಯೆಯಾಗಿದ್ದರೂ ನಾವೇ ಅದನ್ನು ಸರಿ ಪಡಿಸಿ ಕೊಟ್ಟಿದ್ದೇವೆ. ಈಗ ಅಲ್ಲಿನ ಕೆಲವು ನಿವಾಸಿಗಳು ನ್ಯಾಯಾಲಯಕ್ಕೆ ಹೋಗಿದ್ದಾರೆ. ಈಗಲೂ ಅವರು ಸ್ಥಳದ ಮೂಲಕ ಶುಭಕರ ರಾವ್ ರೊಡನೆ ಬಂದು ಮಾತನಾಡಿ ವಿನಂತಿಸಿದರೆ, ಬದಿಯಲ್ಲಿ ನಿರ್ಮಿಸಿರುವ ರಸ್ತೆಯನ್ನು ಅಭಿವೃದ್ಧಿ ಪಡಿಸಿ ಕೊಡಲು ಅವರು ಸಿದ್ಧರಿದ್ದಾರೆ’ ಎಂದು ಪತ್ರಿಕಾಗೋಷ್ಠಿಯಲ್ಲಿದ್ದ ಶುಭಕರ ರಾವ್‌ರ ಸಂಬಂಧಿ ರಾಜೇಶ್ ಎಂಬವರು ಹೇಳಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.