ಚಿಗುರು ಡ್ಯಾನ್ಸ್ ಕಂಪೆನಿ ಸ್ಥಳಾಂತರಗೊಂಡು ಶುಭಾರಂಭ

Advt_Headding_Middle
Advt_Headding_Middle

 

ಸುಳ್ಯದ ಪ್ರತಿಷ್ಟಿತ ನೃತ್ಯ ಸಂಸ್ಥೆಯಾದ ಚಿಗುರು ಡ್ಯಾನ್ಸ್ ಕಂಪೆನಿ ಸ್ಥಳಾಂತರಗೊಂಡು ಸುಳ್ಯ ತಾಲೂಕು ಪಂಚಾಯತ್ ವಾಣಿಜ್ಯ ಸಂಕೀರ್ಣದಲ್ಲಿ ಸೆ.6ರಂದು ಶುಭಾರಂಭಗೊಂಡಿತು. ತಾಲೂಕು ಪಂಚಾಯತ್ ಅಧ್ಯಕ್ಷರಾದ ಚನಿಯ ಕಲ್ತಡ್ಕರವರು ದೀಪ ಬೆಳಗಿಸಿ ಉದ್ಘಾಟಿಸಿ ಸಂಸ್ಥೆಯ ಯಶಸ್ಸಿಗೆ ಶುಭಹಾರೈಸಿದರು.

ಸುಳ್ಯ ಶಾರದಾಂಬ ಸೇವಾ ಟ್ರಸ್ಟ್ ಅಧ್ಯಕ್ಷರಾದ ನಾರಾಯಣ ಕೇಕಡ್ಕರವರು ಮಾತನಾಡಿ, ಚಿಗುರು ಡ್ಯಾನ್ಸ್ ಕಂಪೆನಿಯು ಮಕ್ಕಳ ಪ್ರತಿಭೆಗಳಿಗೆ ಉತ್ತಮ ವೇದಿಕೆ ಒದಗಿಸಿಕೊಡುವಲ್ಲಿ ಅವಿರತರಾಗಿ ಶ್ರಮಿಸುತ್ತಿದೆ ಎಂದರು. ಸಮಾರಂಭದಲ್ಲಿ ಅತಿಥಿಯಾಗಿದ್ದ ಮಿಸೆಸ್ ಕರ್ನಾಟಕ ಪ್ರಶಸ್ತಿ ವಿಜೇತೆ, ಬ್ಯಾಂಕ್ ಆಫ್ ಬರೋಡ ಸುಳ್ಯ ಶಾಖೆಯ ಉದ್ಯೋಗಿ ಶ್ರೀಮತಿ ಸುಪ್ರೀತಾ ಕೆ.ಎಸ್. ರವರನ್ನು ಅಭಿನಂದಿಸಲಾಯಿತು. ವೇದಿಕೆಯಲ್ಲಿ ಕರಾಟೆ ಶಿಕ್ಷಕರಾದ ಸಿ.ಸೋಮನಾಥ ಕೇರ್ಪಳ ಹಾಗೂ ಚಿಗುರು ನೃತ್ಯ ಕಂಪೆನಿಯ ನಿರ್ದೇಶಕರಾದ ಸಂತೋಷ್‌ಕುಮಾರ್‌ರವರು ಉಪಸ್ಥಿತರಿದ್ದರು.
ಸಂಸ್ಥೆಯ ವಿದ್ಯಾರ್ಥಿಗಳಾದ ಇಂಚರ, ಶಮಿತಾ, ತೃಪ್ತಿ ಪ್ರಾರ್ಥಿಸಿದರು. ಹರ್ಷಿತ್ ಮಿತ್ತಡ್ಕ ಸ್ವಾಗತಿಸಿ, ಅಕ್ಷತಾ.ವಿ ಕಾರ್ಯಕ್ರಮ ನಿರೂಪಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.