ಆನ್‌ಲೈನ್ ತರಗತಿಗಳು: ಮನೆಯಲ್ಲಿಯೇ ಕಣ್ಣಿನ ಆರೈಕೆ

Advt_Headding_Middle
Advt_Headding_Middle

ಮಾರ್ಚ್ ತಿಂಗಳ ಮಧ್ಯದಲ್ಲಿ ಏಕಾಏಕಿ ಎಲ್ಲ ಶಾಲಾ-ಕಾಲೇಜುಗಳಿಗೆ ಅಕಾಲಿಕ ರಜೆ ಘೋಷಿಸಲಾಯಿತು. ನಡೆಯುತ್ತಿದ್ದ ಪರೀಕ್ಷೆಗಳನ್ನು ನಿಲ್ಲಿಸಲಾಯಿತು. ನಡೆಯಬೇಕಿದ್ದ ಪರೀಕ್ಷೆಗಳನ್ನು ಮುಂದೂಡಲಾಯಿತು. ಕೆಲವು ವಿದ್ಯಾರ್ಥಿಗಳಿಗೆ ಇದರಿಂದ ಖುಷಿಯಾದರೆ, ಬಹಳಷ್ಟು ಮಂದಿ ಬೇಸರಪಟ್ಟವರೆ ಹೆಚ್ಚು. ಹಾಗೋ ಹೀಗೋ ಅಂತು ನಡೆಯಲೇಬೇಕಾದ ಅಂತಿಮ ವರ್ಷದ ಪರೀಕ್ಷೆಗಳನ್ನು ನಡೆಸಲಾಯಿತು. ಉಳಿದ ಮಕ್ಕಳನ್ನು ತರಗತಿಗಳಿಗೆ ಪ್ರವೇಶ ಮಾಡಲಾಯಿತು.
ಸರ್ಕಾರವೇ ಮಕ್ಕಳಿಗೆ ಆನ್‌ಲೈನ್ ಕ್ಲಾಸ್ ಗಳನ್ನು ನಡೆಸಲು ಅನುಮತಿ ನೀಡಿತು. ತರಗತಿಗಳು ಆರಂಭವಾದವು. ಪ್ರಾಥಮಿಕ ಶಾಲಾ ಮಕ್ಕಳಿಂದ ಪದವಿವಿದ್ಯಾರ್ಥಿಗಳ ವರೆಗೆ ಎಲ್ಲರೂ ಸ್ಮಾರ್ಟ್ ಫೋನ್, ಕಂಪ್ಯೂಟರ್, ಲ್ಯಾಪ್‌ಟಾಪ್ ಹಿಡಿದು ಬೆಳಿಗ್ಗೆಯಿಂದ ಸಂಜೆ ತನಕ ಅದರ ಮುಂದೆ ಕೂತು ತರಗತಿ ಕೇಳುವಂತಾಯಿತು.
ಇದು ಒಂದು ಕಡೆಯಿಂದ ಲಾಭವಾಗಿದೆ,ಯಾವುದೇ ದಾರಿಯಿಲ್ಲದ ಸಮಯದಲ್ಲಿ ಆನ್‌ಲೈನ್ ತರಗತಿಗಳು ಮಕ್ಕಳ ಬೋಧನೆಗೆ ಬಹಳಷ್ಟು ಸಹಕಾರಿಯಾಗಿದೆ. ಹಾಗೆ ಇನ್ನೊಂದೆಡೆ ದಿನವಿಡಿ ಫೋನ್, ಲ್ಯಾಪ್‌ಟಾಪ್ ಹಿಡಿದು ಕೂರುವುದರಿಂದ ಮಕ್ಕಳಿಗೆ ನಾನಾ ತರಹದ ಕಣ್ಣಿನ ತೊಂದರೆಗಳು ಬರುವ ಸಾಧ್ಯತೆ ಇದೆ. ಹಾಗೇ, ಅವರ ಮೆದುಳಿಗೆ ಅಡ್ಡ ಪರಿಣಾಮವಾಗಬಹುದು.

ಮನೆಯಲ್ಲಿಯೇ ಕಣ್ಣಿನ ಕಾಳಜಿ ವಹಿಸುವುದು ಹೇಗೆ? ;

ಕಣ್ಣುಗಳು ದೇಹದ ಅತಿಮುಖ್ಯ ಅಂಗ. ಅವುಗಳ ಸರಿಯಾದ ಕಾಳಜಿವಹಿಸುವುದು ಅಗತ್ಯ. ಅವುಗಳಿಗೆ ಸಂಪೂರ್ಣ ವಿಶ್ರಾಂತಿ, ತೇವಾಂಶ, ಪೋಷಕಾಂಶ ಹಾಗು ಸೂಕ್ತ ವ್ಯಾಯಾಮವನ್ನು ನೀಡುವುದು ಅವಶ್ಯಕ.
-ಸೂಕ್ತ ಕಣ್ಣಿನ ವ್ಯಾಯಾಮ :
ಬೆಳಿಗ್ಗೆ ಅಥವಾ ಸಂಜೆಯ ವೇಳೆಗೆ ಕಣ್ಣಿನ ವ್ಯಾಯಾಮ ಮಾಡುವುದು ಒಳ್ಳೆಯದು. ಕಣ್ಣುಗುಡ್ಡೆಗಳನ್ನು 10 ಬಾರಿ ಮೇಲೆ – ಕೆಳಗೆ, 10 ಬಾರಿ ಬಲ-ಎಡ,10 ಬಾರಿ ವ್ರತ್ತಾಕಾರವಾಗಿ ತಿರುಗಿಸಬೇಕು. ನಂತರ, ನಿಮ್ಮ ಕೈಗಳನ್ನು ಪರಸ್ಪರ ಉಜ್ಜಿ ಹಸ್ತವನ್ನು ಬಿಸಿ ಮಾಡಿ ಆಯಾಯ ಕಣ್ಣಿನ ಮೇಲಿಡಬೇಕು. ಗಟ್ಟಿಯಾಗಿ ಒತ್ತಬಾರದು. ಬಿಸಿ ಆರಿದ ಮೇಲೆ ಕಣ್ಣು ತೆರೆಯಬೇಕು. ಹೀಗೆ, ದಿನಕ್ಕೆ 5 ಬಾರಿ ಮಾಡುವುದರಿಂದ ಕಣ್ಣಿನ ಮಾಂಸಖಂಡಗಳಿಗೆ ಶಕ್ತಿ ದೊರೆಯುತ್ತದೆ. ಹಾಗು ಕಣ್ಣಿನ ತೇವಾಂಶವನ್ನು ಕಾಪಾಡಬಹುದು.
-ತಣ್ಣೀರಿನಲ್ಲಿ ಕಣ್ಣು ತೊಳೆಯಿರಿ:
ಈ ರೀತಿ ಮಾಡುವುದರಿಂದ ಕಣ್ಣಿಗೆ ಹೊಸ ಉಲ್ಲಾಸ ಸಿಗುತ್ತದೆ. ದಣಿದ ಕಣ್ಣುಗಳಿಗೆ ವಿಶ್ರಾಂತಿ ಸಿಗುತ್ತದೆ.
-ಐ ಕಪ್ಪಿಂಗ್ (eye cupping) :
ಒಂದು ಕಪ್ಪ್ ಲ್ಲಿ ತಣ್ಣೀರನ್ನು ತೆಗೆದುಕೊಂಡು ಅದರಲ್ಲಿ ಕಣ್ಣನ್ನು 10 ಬಾರಿ ಮಿಟುಕಿಸಬೇಕು. ಹೀಗೆ ದಿನಕ್ಕೆ ಮೂರು ಬಾರಿ ಮಾಡುವುದರಿಂದ ಕಣ್ಣಿನ ಆರೋಗ್ಯ ವ್ರದ್ಧಿಯಾಗುತ್ತದೆ. ಬೇಕಿದ್ದರೆ, ರೋಸ್ ವಾಟರ್ ನ್ನು ನೀರಿಗೆ ಸೇರಿಸಬಹುದು.
-ಸರಿಯಾದ ನಿದ್ದೆ :
ದಿನವಿಡಿ ದಣಿದಿರುವ ಕಣ್ಣಿಗೆ 6-8ಗಂಟೆಗಳ ಕಾಲ ನಿದ್ದೆಯ ಅವಶ್ಯಕತೆ ಇದೆ. ಇದರಿಂದಾಗಿ ಕಣ್ಣಿನ ಸುತ್ತಲಿನ ಕಪ್ಪು ವರ್ತುಲವನ್ನು ತಡೆಯಬಹುದು. ಸೌತೆಕಾಯಿಯ ತುಣುಕುಗಳನ್ನು ಕಣ್ಣಿನ ಮೇಲಿಟ್ಟರೆ ಒಳ್ಳೆಯ ನಿದ್ರೆಯ ಜೊತೆಗೆ ಕಪ್ಪು ವರ್ತುಲವನ್ನು ತಡೆಯಬಹುದು.
-ಕಣ್ಣಿನ ಆರೋಗ್ಯಕ್ಕೆ ಪೌಷ್ಟಿಕ ಆಹಾರ :
ಜೀವಸತ್ವ /ವಿಟಮಿನ್ ಗಳಿಂದ ಸಮ್ರದ್ದವಾದ ಆಹಾರ ಸೇವನೆ ಬಹಳ ಒಳ್ಳೆಯದು. ವಿಟಮಿನ್ ಎ, ಕೆ, ಸಿ, ಇ ಹೆಚ್ಚಿರುವ ಆಹಾರ ಪದಾರ್ಥಗಳಾದ,
-ವಿಟಮಿನ್ ಎ :
ಹಳದಿ ಬಣ್ಣದ ಹಣ್ಣುಗಳಾದ ಕ್ಯಾರೆಟ್, ಪಪ್ಪಾಯಿ, ಚೀನಿಕಾಯಿ, ದೊಣ್ಣೆ ಮೆಣಸಿನಕಾಯಿ, ಮಾವು,ಕಿತ್ತಳೆ, ಬೀಟ್ ರೂಟ್, ಹಾಲು,ಮೊಟ್ಟೆ, ಮೀನು ಇತ್ಯಾದಿ.
ವಿಟಮಿನ್ ಕೆ:
ಹಸಿರು ತರಕಾರಿಗಳಾದ ಪಾಲಕ್ ಸೊಪ್ಪು, ಮೆಂತ್ಯ ಸೊಪ್ಪು, ಕೊತ್ತಂಬರಿ ಸೊಪ್ಪು, ಕ್ಯಾಬೆಜ್, ಹೂಕೋಸ್, ನವಿಲು ಕೋಸ್, ಟೋಮೆಟೊ, ಈರುಳ್ಳಿ, ಮೀನು, ಮೊಟ್ಟೆ ಇತ್ಯಾದಿ.
-ವಿಟಮಿನ್ ಸಿ :
ನೆಲ್ಲಿಕಾಯಿ, ಮೂಸಂಬಿ, ಕಿತ್ತಳೆ, ನಿಂಬೆ, ದೊಣ್ಣೆ ಮೆಣಸಿನಕಾಯಿ ಇತ್ಯಾದಿ.
-ವಿಟಮಿನ್ ಇ:
ಬಾದಾಮಿ, ಸೂರ್ಯ ಕಾಂತಿ ಬೀಜ, ಫ್ಲಾಕ್ ಸೀಡ್ ಇತ್ಯಾದಿಗಳ ಸೇವನೆಯಿಂದ ಕಣ್ಣಿನ ಆರೋಗ್ಯವನ್ನು ಅಭಿವೃದ್ಧಿಗೊಳಿಸಬಹುದು.
ಇವತ್ತಿನಿಂದಲೇ, ಕಣ್ಣಿನ ಆರೋಗ್ಯದ ದೃಷ್ಟಿಯಿಂದ ಮೇಲಿರುವ ಕ್ರಮ ಗಳನ್ನು ಸ್ವಲ್ಪವಾದರೂ ರೂಢಿಸಿಕೊಂಡರೆ ಒಳ್ಳೆಯದು. ಇದು ಮುಂದೆ ಬರಬಹುದಾದ ಕಣ್ಣಿನ ತೊಂದರೆಗಳಿಗೆ ಮುಂಜಾಗ್ರತಾ ಕ್ರಮವಾಗಿದೆ.

– ಡಾ||ಗ್ರೀಷ್ಮಾ ಗೌಡ ಆರ್ನೋಜಿ
ಇಂಟರ್ನಿ, ಆಳ್ವಾಸ್ ಕಾಲೇಜ್ ಆಫ್ ನ್ಯಾಚುರೋಪತಿ ಆಂಡ್ ಯೋಗಿಕ್ ಸೈನ್ಸ್ ಮೂಡಬಿದಿರೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.