ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಂಟ್ರಾಕ್ಟರ್ ಸುನಿಲ್ ನಾಯ್ಕ್ ನಿಧನ

Advt_Headding_Middle
Advt_Headding_Middle

 

ಕುಕ್ಕಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಂಟ್ರಾಕ್ಟರ್ ಸುನಿಲ್ ನಾಯ್ಕ್ ಮಂಗಳೂರಿನ ಆಸ್ಪತ್ರೆಯೊಂದರಲ್ಲಿ ನಿನ್ನೆ ರಾತ್ರಿ (ಸೆ.7) ನಿಧನರಾದರು.

ಅವರಿಗೆ 46 ವರ್ಷ ವಯಸ್ಸಾಗಿತ್ತು. ಮೂರು ವಾರದ ಹಿಂದೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಆ ಬಳಿಕ ಆಸ್ಪತ್ರೆಯಲ್ಲೇ ಇದ್ದರೆನ್ನಲಾಗಿದೆ. ಪುತ್ತೂರು ಬೀದಿಮಜಲಿನವರಾಗಿದ್ದ ಇವರು ಹಲವು ವರ್ಷಗಳಿಂದ ಸುಬ್ರಹ್ಮಣ್ಯದಲ್ಲಿ ಕಂಟ್ರಾಕ್ಟರ್ ವೃತ್ತಿ ಮಾಡುತಿದ್ದರು. ಮೃತರು ತಂದೆ ಭಾಸ್ಕರ ನಾಯ್ಕ್, ತಾಯಿ, ಪತ್ನಿ ಪೂನಂ, ಇಬ್ಬರು ಮಕ್ಕಳು ಹಾಗೂ ಹಲವಾರು ಬಂಧುಮಿತ್ರರನ್ನು ಅಗಲಿದ್ದಾರೆ. ಇಂದು ಅಪರಾಹ್ನ ಪುತ್ತೂರಿನಲ್ಲಿ ಶವ ಸಂಸ್ಕಾರ ನಡೆಯಲಿದೆ ಎಂದು ತಿಳಿದು ಬಂದಿದೆ.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.