Breaking News

ಐವರ್ನಾಡಿನಲ್ಲಿ ಬಿಜೆಪಿ ವತಿಯಿಂದ ಆಯುಷ್ಮಾನ್ ಕಾರ್ಡ್ ವಿತರಣೆ

Advt_Headding_Middle
Advt_Headding_Middle

 

ಪಕ್ಷದ ಕಾರ್ಯಕರ್ತರಿಂದ ಅಭಿಯಾನ ಯಶಸ್ವಿ – ಎಸ್.ಎನ್.ಮನ್ಮಥ

ಐವರ್ನಾಡು ಗ್ರಾಮದಲ್ಲಿ ಬಿಜೆಪಿ ವತಿಯಿಂದ ಹತ್ತು ಕಡೆಗಳಲ್ಲಿ ಆಯುಷ್ಮಾನ್ ಕಾರ್ಡ್ ನೋಂದಣಿ ಮಾಡಿದ್ದು ಸುಮಾರು 1200 ಕ್ಕಿಂತಲೂ ಹೆಚ್ಚು ಕಾರ್ಡ್ ವಿತರಣೆ ಹಾಗೂ ನೋಂದಣಿ ಕಾರ್ಯಕ್ರಮವು ಸೆ.8 ರಂದು
ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಾಲ್ಸೂರು ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಪುಷ್ಪಾವತಿ ಬಾಳಿಲ ವಹಿಸಿ ಮಾತನಾಡಿ ಸರಕಾರದ ಯೋಜನೆಗಳು ಫಲಾನುಭವಿಗಳಿಗೆ ಸರಿಯಾಗಿ ದೊರೆತಾಗ ಮಾತ್ರ ಯೋಜನೆ ಯಶಸ್ವಿಯಾಗುತ್ತದೆ.ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಆಯುಷ್ಮಾನ್ ಕಾರ್ಡ್ ನ್ನು ಪ್ರತಿಯೊಬ್ಬರು ಮಾಡುವ ಮುಖಾಂತರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.


ಆಯುಷ್ಮಾನ್ ಕಾರ್ಡ್ ವಿತರಣೆ ಯನ್ನು ಜಿಲ್ಲಾ ಪಂಚಾಯತ್ ಸದಸ್ಯರಾದ ಎಸ್.ಎನ್.ಮನ್ಮಥ ನೆರವೇರಿಸಿ ಐವರ್ನಾಡು ಗ್ರಾಮದಲ್ಲಿ ಪಕ್ಷದ ಬೂತ್ ಸಮಿತಿಯ ಎಲ್ಲಾ ಪದಾಧಿಕಾರಿಗಳ ಮುಖಾಂತರ ಅಲ್ಲಲ್ಲಿ ಆಯುಷ್ಮಾನ್ ಕಾರ್ಡ್ ನೋಂದಣಿ ನಡೆದಿದೆ.ಹಾಗೆಯೆ ಬೆಳೆ ಸಮೀಕ್ಷೆಯನ್ನು ಕೂಡ ನಾವು ಗ್ರಾಮದಲ್ಲಿ ಯಶಸ್ವಿಯಾಗಿ ಮಾಡಿದ್ದೇವೆ ಎಂದರು.ಅಲ್ಲದೆ ಗ್ರಾಮದಲ್ಲಿರುವ ಶ್ರಮಜೀವಿಗಳಿಗೆ ಇನ್ಸೂರೆನ್ಸನ್ನು ಕೂಡಾ ಸಹಕಾರಿ ಸಂಘದ ವತಿಯಿಂದ ಮಾಡಿದ್ದೇವೆ ಎಂದು ಹೇಳಿದರು.
ವೇದಿಕೆಯಲ್ಲಿ
ಜಾಲ್ಸೂರು ಮಹಾಶಕ್ತಿ ಕೇಂದ್ರದ ಸದಸ್ಯ ಬಾಲಕೃಷ್ಣ ಕೀಲಾಡಿ,ಸಹಕಾರಿ ಸಂಘದ ನಿರ್ದೇಶಕ ಚಂದ್ರಶೇಖರ್ ,ಬೂತ್ ಸಮಿತಿ ಅಧ್ಯಕ್ಷರುಗಳಾದ ವಾಸುದೇವ ನಿಡುಬೆ,ಪ್ರಮೋದ್ ಕಣಿಲೆಗುಂಡಿ,ಪ್ರಭಾಕರ ಕುತ್ಯಾಡಿ, ಶರತ್ ಜಬಳೆ ಉಪಸ್ಥಿತರಿರುವರು.
ಹಿರಿಯರಾದ ಮಾಧವ ಭಟ್ ಶೈಂಗೇರಿ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.
ಸಹಕಾರಿ ಸಂಘದ ನಿರ್ದೇಶಕ ಸತೀಶ್ ಎಡಮಲೆ ವಂದಿಸಿದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.