ಗೂನಡ್ಕ : ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೂನಡ್ಕದಲ್ಲಿ ಶಿಕ್ಷಕರ ದಿನಾಚರಣೆ

Advt_Headding_Middle
Advt_Headding_Middle

ಮಾರುತಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಗೂನಡ್ಕದಲ್ಲಿ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ರುಕ್ಮಯ್ಯ ದಾಸ್ ರವರು ವಹಿಸಿದ್ದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಪ್ರಾಂಶುಪಾಲರಾದ ಶ್ರೀಮತಿ ಶೋಭಾ ಕಿಶೋರ್ ರವರು ತಮ್ಮ ಶಿಕ್ಷಕ ವೃತ್ತಿಯ ಅನುಭವವನ್ನು ಹಂಚಿಕೊಂಡು ಸ್ವಾಗತಿಸಿದರು. ಪಿ ಟಿ ಎ ಅಧ್ಯಕ್ಷರಾದ ಅಬುಸಾಲಿಯವರು, ಶಿಕ್ಷಕ ವೃತ್ತಿಯಷ್ಟು ಶ್ರೇಷ್ಠ ವೃತ್ತಿ ಮತ್ತೊಂದಿಲ್ಲ ಆದರೆ ಈ ಕೋರೋಣ ಎಂಬ ಮಹಾಮಾರಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವೆ ಅಂತರವನ್ನು ಹೆಚ್ಚಿಸಿದೆ, ಅತ್ಯಂತ ಶೀಘ್ರವಾಗಿ ಮಕ್ಕಳು ಶಾಲೆಗೆ ತೆರಳುವಂತಾಗಲಿ ಎಂದರು.
ಸಂಸ್ಥೆಯ ಕಾರ್ಯದರ್ಶಿ ಕಿಶೋರ್ ಕುಮಾರ್ ಮಾತನಾಡಿ ಶುಭ ಹಾರೈಸಿದರು. ಸಂಸ್ಥೆಯ ಅಧ್ಯಕ್ಷರಾದ ರುಕ್ಮಯ್ಯ ದಾಸ್ ರವರು ಮಾತನಾಡಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಶಿಕ್ಷಕರಾದ ಶಿ ಧನ್‌ರಾಜ್, ಮಲ್ಲಿಕಾ , ಹಾಗೂ ಪ್ರಸನ್ನ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಲೀಲಾವತಿ ರುಕ್ಮಯ್ಯ ದಾಸ್, ಪಿ ಟಿ ಎ ಉಪಾಧ್ಯಕ್ಷೆ ಶ್ರೀಮತಿ ಭವ್ಯಾ, ಪೋಷಕರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.