Breaking News

ಗೂನಡ್ಕ : ಆಸರೆ ಯೋಜನಾ ಸಮಿತಿ ಸಭೆ

Advt_Headding_Middle
Advt_Headding_Middle

 

ಬಡ ಹಾಗೂ ನಿರಾಶ್ರಿತ ಕುಟುಂಬಕ್ಕೆ ಮನೆ ನಿರ್ಮಿಸಿ ನೀಡುವ ಉದ್ದೇಶದಿಂದ ಅಸ್ತಿತ್ವಕ್ಕೆ ಬಂದ ಆಸರೆ ಯೋಜನೆಯ ಸಮಿತಿ ಸಭೆಯು ಮಹಮ್ಮದ್ ಕುಂಞಿ ಗೂನಡ್ಕರವರ ಕಚೇರಿಯಲ್ಲಿ ನಡೆಯಿತು.


ಸಮಿತಿ ಸಂಚಾಲಕರಾದ ಮಹಮ್ಮದ್ ಕುಂಞಿ ಗೂನಡ್ಕ ರವರು ಅದ್ಯಕ್ಷತೆ ವಹಿಸಿದ್ದರು. ಆಸರೆ ಸಮಿತಿ ಮುಖಾಂತರ ನಿರ್ಮಿಸಲು ಉದ್ದೇಶಿಸಿದ ಮನೆಯ ಕಾಮಗಾರಿಗಳ ಕುರಿತು ಚರ್ಚಿಸಲಾಯಿತು.
ಈಗಾಗಲೇ ಮನೆ ನಿವೇಶನ ಸಮತಟ್ಟು ಕಾರ್ಯವು ಪೂರ್ಣಗೊಂಡಿದ್ದು ಮನೆ ನಿರ್ಮಾಣದ ಪ್ರಥಮ ಹಂತವಾದ ಶಿಲಾನ್ಯಾಸ ಕಾರ್ಯ ನಡೆಸಲು ತೀರ್ಮಾನಿಸಲಾಯಿತು.
ಮುನೀರ್ ದಾರಿಮಿಯವರ ದುವಾ ದೊಂದಿಗೆ ಆರಂಭಿಸಿದ ಸಬೆಯಲ್ಲಿ ಸಮಿತಿ ಕನ್ವೀನರ್ ಜಿ ಕೆ ಹಮೀದ್ ರವರು ಮನೆ ನಿರ್ಮಾಣ ಪ್ರಗತಿಯ ಬಗ್ಗೆ ವಿವರಿಸಿದರು. ಮತ್ತೋರ್ವ ಕನ್ವೀನರ್ ಪಿ ಕೆ ಅಬೂ ಶಾಲಿಯವರು ಸ್ವಾಗತಿಸಿದರು.
ಉದ್ದೇಶಿತ ಮನೆಯ ನೀಲಿ ನಕಾಶೆ ಮತ್ತು ಫಲಾನುಭವಿ ಕುಟುಂಬದ ಮತ್ತು ಸಮಿತಿ ನಡುವಿನ ಒಪ್ಪಂದ ಕರಾರು ಪತ್ರವನ್ನು ಸಭೆಯಲ್ಲಿ ಮಂಡಿಸಿ ಅನುಮೋದನೆ ನೀಡಲಾಯಿತು.

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.